Tuesday, October 7, 2008

ಶಂಕೆ

ಮಾತು ಮಾತು, ಏನು ಸಾರ?
ಮಾತಿನ ಶಬ್ದದಿ ಹುಟ್ಟುವುದೇ ಕಾವ್ಯ?
ಮೌನದೊಳು ಜೀವದ ಜತೆ
ಕಾವ್ಯ ಬೆರೆವುದೇ ಭಾವದ ಕತೆ
ಎದೆತೆರೆದು,
ಕಣ್ಮುಚ್ಚಿ
ಮನದೊಳಗುದಿಸಿದ ಹಾಡೇ ದಿವ್ಯ.

ಅಲೆಯಲೆಯಾಗಲೆಯುತ್ತಿದ್ದ
ಸಾಗರದೊಡಲಿನಂತೆ ಶಾಂತವಾದ ಚಿತ್ತಕೆ
ದಡದ ಮರಳ ಮೇಲೆ ತೆರೆಯು ಸದ್ದೆಸಗಿದಂತೆ
ತಿಳಿಯಾಗಸದಿಂದ ಮರುಭೂಮಿಗೆ
ಅನಾಮತ್ತು ಮಳೆ ಸುರಿದಂತೆ
ಹರ್ಷವೋ,
ವರ್ಷವೋ?
ಅರಿಯದಾದೆನೊಂದನೂ ಮಿಂಚಿನ ಕಾಲವೇಗದಲಿ.

ನೆನ್ನೆ ವರೆಗೂ ಕನಲ
ಕುದುರೆ ಸವಾರ
ಇಂದು, ಚರ್ಚೆ ಸಂಸಾರ?
ಕಾನನದಿ ಅಲೆವ ಜಿಂಕೆ
ಕುಪ್ಪಳಿಸುತ,
ಸಪ್ಪಳಿಸುತ
ದಿಕ್ಕು ಬದಲಿಪ ಶಂಕೆ.

-ಅ
08.10.2008
1AM

6 comments:

  1. samsaaranasthanaagakke horrtideeya..
    vijayeebhava.. shankegaLige ankeye iralla.....so shanke maadbeda.. :-)

    ReplyDelete
  2. ಕಣ್ಮುಚ್ಚಿ
    ಮನದೊಳಗುದಿಸಿದ ಹಾಡೇ ದಿವ್ಯ.

    ahaa ahaaahaaa!! \:D/ nan hesru elllllllaaar kaviteluu barutte!!!
    \:D/ \:D/

    shubhavaagali.. shubhavaagali!!!!

    "hosa baaLina hosilali nintiruvaa.. haLe joDige... shubhavaagaliiii...."

    :-) :-)

    ReplyDelete
  3. [ಡೈನಮಿಕ್] ನಿನ್ ಹೆಸ್ರು ಎಲ್ಲಿದೆ? ಕವನದಲ್ಲಿ ನಿನ್ ಹೆಸ್ರು ಹಾಕ್ಬಿಟ್ರೆ ಪ್ರಾಸಕ್ಕೆ ಏನ್ ಮಾಡ್ಲಿ?

    [ವಿಜಯಾ] ಹ್ಞೂಂ.. ನೆನಪಿತ್ತು.

    [ಶ್ರೀಧರ] ಸರಿ.

    ReplyDelete
  4. nanna hesaru ದಿವ್ಯ
    and nanna hesaru praasadallE ide...

    u standingunder??????

    ReplyDelete
  5. ನೀನು ತಪ್ಪು ತಿಳ್ಕೊಂಡ್ ಇದ್ದೀಯೆ. ನಿನ್ ಹೆಸ್ರು ಹೋಪ್‍ಲೆಸ್‍ ಫೆಲೋ ಅಂತ.

    ReplyDelete