Sunday, October 12, 2008

ಭುವಿಯೇನು, ಬದುಕೇನು?

ಸಹನೆ, ದಹನೆ ಎರಡೂ ಒಡಲಿನೊಳಗೆ
ನೆಲ ಮಾತ್ರ ಸಮವಿಲ್ಲ.
ಜಲವುಕ್ಕಿ ಹರಿವ ಪ್ರವಾಹವೊಂದೆಡೆ,
ತಳಬಿರಿದು ಬರಿದಿನ್ನೊಂದೆಡೆ
ಭುವಿಯೇನು, ಬದುಕೇನು?

ಭುವಿಯು ಕಂಪಿಸಿ ಕಾಲ ಕಾಲಕೆ
ಇಟ್ಟಿಗಿಟ್ಟಿಗೆ ಜೋಡಿಸಿ ಕಟ್ಟಿದ
ಬೃಹತ್ ಕಟ್ಟಡವನ್ನೆಲ್ಲಾ ಕೆಡವಿ,
ತಲೆಹೊತ್ತು ದೆಸೆಗೆಟ್ಟ ಬಾಳ್ಬಡವಿ.
ನಡುಮಧ್ಯದಲೇ ಮೆರೆದಾಡುತಿಹ
ಕ್ರಿಮಿಕೀಟ ಸರ್ಪಾದಿಗಳ ನೆಲೆಯು
ಕಂಗೊಳಿಸಿ ಕಂಗೆಡಿಸಬಲ್ಲ ದಟ್ಟಡವಿ.

ಹೆಜ್ಜೆಯೊಂದರಲಿ ಹಳ್ಳಕೊಳ್ಳ
ಮರುಹೆಜ್ಜೆ ಬಯಲು ಹಾದಿ.
ಇನ್ನಾವ ಹೆಜ್ಜೆಗಿಹುದೋ ಆಳದ ಬಾವಿಯ ಬುನಾದಿ?
ಬಿರುಕು ನೆಲವೆಂದು ಸಿಡಿಯುವುದೋ ಚೂರು ಚೂರಾಗಿ?
ಭುವಿಯೇನು, ಬದುಕೇನು?
ಎಷ್ಟು ಜೀವವುಳಿವುದೋ ಪಾರಾಗಿ!?!

ಒಣಗಿದೊಂದು ಜಾಲಿಮರದ ಕೆಳಗೆ, ಆರೀತು ದಣಿವೆಂದು ಭ್ರಮಿಸಿ
ಬಳಿಯಲಿರುವ ಹೊಂಗೆಯ ಮರೆವುದೇನು ಬದುಕೇ?
ಜಾಲಿಯೋ ಹೊಂಗೆಯೋ ತಿಳಿಯದೊಂದೂ ದಣಿವಿಗೆ
ಹೆಜ್ಜೆಗೇನು ಸಿಗುವುದೋ ಅದೇ ಆಸರೆ.
ಪುಷ್ಪವೋ ಪರ್ಣವೋ ಮುಳ್ಳೋ ಬಿದ್ದುದ ಸಹಿಸುತ
ಮೌನದಿಂದಿರುವ ಭುವಿಯೇನು, ಬದುಕೇನು!!

-ಅ
12.10.2008
6PM

13 comments:

 1. ಪುಷ್ಪವೋ ಪರ್ಣವೋ ಮುಳ್ಳೋ ಬಿದ್ದುದ ಸಹಿಸುತ
  ಮೌನದಿಂದಿರುವ ಭುವಿಯೇನು, ಬದುಕೇನು!!

  super lines ! poem onthara lilting aagide.

  ReplyDelete
 2. ಕವನ ಚೆನ್ನಾಗಿದೆ.

  ReplyDelete
 3. chennagide man.. oLLe contrasting picturization-u.. :)

  ReplyDelete
 4. ಭುವಿಯು ಕಂಪಿಸಿ ಕಾಲ ಕಾಲಕೆ
  ಇಟ್ಟಿಗಿಟ್ಟಿಗೆ ಜೋಡಿಸಿ ಕಟ್ಟಿದ
  ಬೃಹತ್ ಕಟ್ಟಡವನ್ನೆಲ್ಲಾ ಕೆಡವಿ,
  ತಲೆಹೊತ್ತು ದೆಸೆಗೆಟ್ಟ ಬಾಳ್ಬಡವಿ.

  yaavaga yaav intensity nalli kampisutto ...
  aadroo ...

  life is never so bad that it cannot get worse alwa ?? :-)

  ReplyDelete
 5. [ಲಕುಮಿ] ಅರ್ಥವೇ ಆಗಲಿಲ್ಲ ನಿನ್ನ ಮಾತುಗಳು.

  [ಸುನಾಥ್] ಧನ್ಯವಾದಗಳು, ಸುನಾಥ್ ಅವರೇ.

  [ಗಂಡಭೇರುಂಡ] ಒಂದೇ ಥರ ಇದ್ದರೆ ಕವನ ಯಾರ್ ಬರೀತಾರೆ ಅಂದುಬಿಡಲ್ವಾ? ;-)

  ಲೇಯ್, ನನ್ನ ನಿನ್ನ ಒಪ್ಪಂದಕ್ಕೆ ನೀನು ಸರಿಯಾಗಿ ಸ್ಪಂದಿಸುತ್ತಿಲ್ಲವಾದ್ದರಿಂದ ಒಂದು ಬೃಹತ್ ಕಮೆಂಟನ್ನು ನಿನ್ನ ಬ್ಲಾಗಿನಲ್ಲಿ "ನಮೂದಿಸಿದ್ದೇನೆ" . (ಪದಗಳ ಜೋಡಣೆ ಕೃಪೆ - ಶ್ರೀಧರ)

  [ಜಯಶಂಕರ್] ಧನ್ಯವಾದಗಳು ಸ್ವಾಮಿ.

  [ವಿಜಯಾ] ಕಂಪನವು ಯಾವ "ಇಂಟೆನ್ಸಿಟಿ"ಯಲ್ಲಿದ್ದರೂ ಸಹಿಸಿಕೊಳ್ಳುವುದೊಂದೇ ದಾರಿ ಇರುವುದರಿಂದ ಸುಮ್ನೆ ಕವನ ಓದ್ಕೊಂಡು, ಬರ್ಕೊಂಡು ಕೂತ್ಕೊಬೇಕಾಗಿದೆ ಅಷ್ಟೆ..

  ಆ ಕೊನೆಯ ಮಾತಿನ ಅರ್ಥ ಇಷ್ಟೆ. ನಾಳೆ ಏನು ಎಂಬುದನ್ನು ಯಾರೂ ಅರಿತಿಲ್ಲ. ಹಾಗಾಗಿ, ನಾಳೆ ಇವತ್ತು ಅನುಭವಿಸುತ್ತಿರುವುದಕ್ಕಿಂತ ಭೀಕರ ಅನುಭವವಾಗಬಹುದು ಎಂಬ ಎಚ್ಚರಿಕೆಯ ಮಾತುಗಳಷ್ಟೆ ಅವು.. ಆದರೆ ನಾಳೆಯ ಭೀಕರತೆಯು ನಾಡಿದ್ದಿಗೆ ಕಮ್ಮಿಯಾಗುತ್ತೆ, ಯಾಕೆಂದರೆ ನಾಡಿದ್ದು ಇನ್ನೂ ಭೀಕರವಾಗಿರುತ್ತೆ ಅಂತ ಹೇಳುವುದನ್ನು 'ಪಾಲಿಷ್' ಮಾಡಿ ಹೀಗೆ ಹೇಳಿದ್ದಾರೆ.. ಆಗಲಿ, ನೋಡೇ ಬಿಡೋಣ ಎಷ್ಟು ಭೀಕರ ಅಂತ. ;-)

  ReplyDelete
 6. ಕವನ ಚೆನ್ನಾಗಿದೆ.

  ಭುವಿಯೇನು, ಬದುಕೇನು? - ಅದ್ವೈತದ ಪ್ರಕಾರ ಎರಡೂ ಭ್ರಮೆ!

  ನನ್ನ ಪ್ರಕಾರ,

  ಭುವಿ - ಬದುಕನ್ನನುಭವಿಸುವ ಸ್ಥಳ
  ಬದುಕು - ಭುವಿಯಿಂದ ಪಾರಾಗಲು ನಮಗೆ ಸಿಕ್ಕಿರುವ ಸಾಧನ

  ReplyDelete
 7. ಒಳ್ಳೇ ಅದ್ವೈತ, ಎಲ್ಲಾದನ್ನೂ ಒಂದೇ ಅಂದ್ಬಿಡುತ್ತೆ. ಅನ್ನೋಕೇನು! ಅನ್ನೋದೇ ಬೇರೆ, ಅನುಭವಿಸೋದೇ ಬೇರೆ. ಇರಲಿ.

  ಬದುಕು ಭುವಿಯಿಂದ ಪಾರಾಗಲು ಇರುವ ಸಾಧನವೇ? ಹೇಗೆ? ಭುವಿಯಿಂದ ಪಾರಾಗುವುದು ಎಂದರೆ??

  ಕವನ ಚೆನ್ನಾಗಿದೆಯೆಂದಿದ್ದಕ್ಕೆ ಧನ್ಯವಾದ.

  ReplyDelete
 8. uhu ... sumne sahiskolodu ellithanaka annodu nam nam capacity mele hogutte ashte. Adaadmele nam namde aada reeti nalli react maade maadteevi.

  hoon .. naale innoo bheekara aagirbahudu anno bhaavane iddaga, ivatte naanu heege react maadbeka illa adanna mundoodabeka antha yochsteevalla ... haage dina munde hogutte ... it is helpful if your reaction is in a negative way. onthara .."naale baa" antha baagila mele bardhaage.

  ReplyDelete
 9. ಮನುಷ್ಯನ ದುರಾಸೆ, ದುರ್ಬುದ್ಧಿಗಳೆಲ್ಲದುದರ ಪ್ರತಿ ಭುವಿಯು ತೋರುವ ಅಪಾರ ತಾಳ್ಮೆ, ಸಹನೆಯನ್ನು ನಮ್ಮ ಬದುಕಿನಲ್ಲೂ ಕೊಂಚ ಅಳವಡಿಸಿಕೊಂಡರೆ ಹೆಚ್ಚು ಭೂಕಂಪನವಾಗದು, ಮನುಷ್ಯರ ಬದುಕು ಅಸಹನೀಯವೆನಿಸದು. ಚೆನ್ನಾಗಿದೆ ಕವನ.

  ReplyDelete
 10. [ತೇಜಸ್ವಿನಿ ಹೆಗಡೆ] ನಾವು ವಾಸ್ತವದಲ್ಲಿ ಭೂಮಿಯಂತೆ ಇರುವುದು ಹೇಗೆ? ಕಣ್ಣಿದ್ದೂ ಕುರುಡಾಗಿ, ಕಿವಿಯಿದ್ದೂ ಕಿವುಡಾಗಿ, ಬಾಯಿದ್ದೂ ಮೂಕರಾಗಿ - ಮನಸಿದ್ದೂ ಕಲ್ಲಾಗಿ ಇರುವುದು ಹೇಗೆ?

  [ವಿಜಯಾ] ಒಳ್ಳೇ ಕೂಗುಮಾರಿ ಥರ!

  ReplyDelete
 11. ನೀವು ಯಾವರ್ಥದಲ್ಲಿ ಪ್ರತಿಕ್ರಿಯಿಸಿದ್ದೀರಿ ಎಂದೇ ಅರ್ಥವಾಗುತ್ತಿಲ್ಲ!! :)ಇಲ್ಲಾ ನಾನೇ ನಿಮ್ಮ ಕವನವನ್ನು ತಪ್ಪರ್ಥೈಸಿಕೊಂಡುರುವೆನೋ ಏನೋ. ಆದರೂ ಕವನವೆನ್ನುವು ಅವರವರ ಭಾವಕ್ಕೆ ತಾನೇ?...

  ಭೂಮಿ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡಾಗಿಲ್ಲ ಅರುಣ್ ಅವರೆ... ಅದು ತನ್ನ ಮಕ್ಕಳ ಪ್ರತಿ ಅಪಾರ ತಾಳ್ಮೆ, ಸಹನೆಯನ್ನೊಳಗೊಂಡಿದೆ. ಅದರೊಳಗಡಗಿರುವುದು ಕ್ಷಮಾಗುಣ ಮಾತ್ರ. ಆದರೂ ನಮ್ಮ ಅತಿಯಾದ ಆಮಿಷಕ್ಕೆ ಕೆಲವೊಮ್ಮೆ ಮೈ ಕೊಡವಿ ಬೆದರಿಸುತ್ತಿದೆ. ತಾಯಿ ಮಕ್ಕಳನ್ನು ಎಚ್ಚರಿಸುವಂತೆ. ನಾವು ಸ್ವಲ್ಪವಾದರೂ ನಮ್ಮ ದುರಾಸೆಗೆ ಕಡಿವಾಣಹಾಕಿದರೆ ಮತ್ತೆ ಮತ್ತೆ ಎಚ್ಚರಿಸುವ ಪ್ರಮೇಯ ಬರದು. ಅಂತೆಯೇ ಪರಸ್ಪರ ಸಹಕಾರ, ಗೌರವಗಳಿದ್ದರೆ ನಮ್ಮ ಬದುಕೂ ಸಹನೀಯವೆನಿಸುವುದು ಎನ್ನುವುದು ನನ್ನ ಅನಿಸಿಕೆಯಾಗಿತ್ತು.

  [ವಿಜ್ಞಾನಿಗಳ ದೃಷ್ಟಿಯಲ್ಲಿ ಭೂಮಿಯೊಂದು ಖಜಾನೆಗಳ ಗಣಿಯಷ್ಟೇ. ಅಲ್ಲಿ ನಾನು ಹೇಳಿದ ಭಾವನೆಗಳಿಗೇನೂ ಸ್ಥಾನವಿಲ್ಲ!]

  ReplyDelete
 12. ಇಲ್ಲ, ನೀವು ತಪ್ಪರ್ಥೈಸಿಕೊಂಡಿಲ್ಲ.

  ಭೂಮಿಯು ಎಷ್ಟೋ ಸಹಸ್ರಕೋಟಿ ವರ್ಷಗಳಿಂದ ಇದೆಯಾದ್ದರಿಂದ ಅದು "ಒಮ್ಮೊಮ್ಮೆ" ಮೈಕೊಡವಿಕೊಳ್ಳುವಂತೆ... ಅದರ ಕಾಲಮಾನದಂತೇ proportionate ಆಗಿ ನಮ್ಮ ಕಾಲವನ್ನು ತೆಗೆದುಕೊಂಡರೆ, ನಾವು ಗಳಿಗೆ ಗಳಿಗೆಗೂ ಮೈ ಕೊಡವಿಕೊಳ್ಳಬೇಕಲ್ಲವೇ? ನಾವು ಬದುಕುವುದು ಯ:ಕಶ್ಚಿತ್ ಎಂಭತ್ತು ತೊಂಭತ್ತು ವರ್ಷವಷ್ಟೆ. ಈ ದೃಷ್ಟಿಯಲ್ಲಿ ನೋಡಿದರೆ ಮನುಷ್ಯನು ಭೂಮಿಗಿಂತಲೂ ತಾಳ್ಮೆಯುಳ್ಳವನು.. (ಇದೆಂಥಾ ಕಿತ್ತೋದ್ ತರ್ಕಾನೋ ಗೊತ್ತಿಲ್ಲ)

  ಅಸಲಿಗೆ ಭೂಮಿಯು ಮೈಕೊಡವಿಕೊಳ್ಳಲು "ನಮ್ಮ" ಆಮಿಷೆಗಳು ಮಾತ್ರವೇ ಕಾರಣವೆಂದು ಹೇಳಲಾಗುವುದಿಲ್ಲ. ತನಗೆ ಬೇಕಾದಾಗ ಕೊಡವಿಕೊಂಡಿರುವ ಉದಾಹರಣೆಗಳೂ ಇವೆ. (ನಮ್ಮ, ಅಂದರೆ ಮನುಷ್ಯರ ಸೃಷ್ಟಿಯಾಗುವ ಮುಂಚೆಯಿಂದಲೂ).

  ವಿಜ್ಞಾನಿಗಳ ದೃಷ್ಟಿಯಲ್ಲಿ ಭೂಮಿಯು ಒಂದು ಕಲ್ಲುಗುಂಡಾದರೂ ಭೂಮಿಯ ಸಹನೆಯ ಪ್ರತಿನಿಧಿಯೆಂದು ಅವರೂ ಒಪ್ಪುತ್ತಾರೆ. ವರ್ಷವರ್ಷಗಳಿಂದ ಒತ್ತಡಗಳನ್ನು ಸಹಿಸುತ್ತಾ ಬಂದಿದೆ. ಆದರೆ, ಈ ವಿಜ್ಞಾನಿಗಳು ನಂಬಿರುವ ಭೂಸಹನೆಯನ್ನು ಆಮೂಲಾಗ್ರವಾಗಿ ಕೆಣಕುವ ದುಷ್ಟ ಸಾಮರ್ಥ್ಯ ಮನುಷ್ಯನೆಂಬ ಬುದ್ಧಿಜೀವಿಗೆ ಇರುವುದರಿಂದ ಮೇಲೆ ನೀವು ಹೇಳಿರುವ ’ಭಾವನೆ’ಗಳೆಲ್ಲಾ ಬರಡಾದೀತು.

  ReplyDelete