Monday, October 20, 2008

ನೀ ಮುಂದೆ

ಬೆಟ್ಟದ ಮೇಲಿನ ಮಂಜಿನೊಳಗಿನಾಕೃತಿಯಂತೆ
ಕಣ್ಣ ಮುಂದೆ ಮಂಜು ಮಂಜು ನೆನಪು ನಿನ್ನದು
ಎಂದೋ ಎಲ್ಲೋ ನೋಡಿದಂತೆ!

ಕಿವಿಯ ತುಂಬಿಲ್ಲ ದನಿಯು, ಸ್ಪರ್ಶ ತೋಳನು, ನೋಟ ಕಣ್ಣನು.
ಕೈ ಹಿಡಿದು ಆಟವಾಡುವ ಮುನ್ನವೇ ಹೊಕ್ಕೆ ನೀ ಮಣ್ಣನು
ಗಿಡದೊಳೇ ಹೂ ಬಾಡಿ ಉದುರಿದಂತೆ!
ನುಡಿಯಲೆಂಬ ತವಕ ನಾಲಿಗೆಗೆ, ಆಲಿಸಲು ಕಿವಿಗೆ.
ನೋಡಬಯಸಿದ ಕಣ್ಣಿಗೇನು ಉತ್ತರ ಹೇಳಲಿ?
ಚಿತ್ರಪಟವೇನೋ ಮುಂದಿದೆ, ಚಿತ್ರವೇ ಕಲ್ಪನೆ.

ನಾ ಬಂದೆ, ನೀ ಹೋದೆ
ಇಷ್ಟೆ ನನಗೆ ತಿಳಿದುದು.
ನೀನಿರದೆ ಇಂದು ಇಲ್ಲಿ
ಇಷ್ಟೆ ನಾನು ಬೆಳೆದುದು.

ಹೇಳುವರು ಹಿರಿಯರು
ನೂಲಿನಂತೆ ಸೀರೆ, ತಂದೆಯಂತೆ ಮಗನು.
ಉಳಿಸಿಲ್ಲ ನೀನೆನಗೊಂದೂ ಆದರ್ಶವನು
ಬೆಳೆಸಿರಬಹುದು ರಕ್ತದಲಿ, ಅರಿಯೆನು!

ದೇವರು ದಿಂಡರು ಸಾಸಿರ ಜಗಕೆ, ಜನಕೆ
ನಾನು ನಿನ್ನ ಕಲ್ಪಿಸುವಂತೆ!
ಕಾಲುಶತಮಾನ, ಬಂದು ನಾನು ಇಂದಿಗೆ!
ನೀನೆನಗೆ ಮಂಜಿನೊಳಗಿನಾಕೃತಿಯು
ಮಂಜಿನೊಳಗೇ ಮರೆಯಾಗಿ ಹದಿನೆಂಟಾಗಿ ಹೋಯಿತೇ?
ಕಾಲವು ಮುಂದೆ ಮುಂದೆ ಮುಂದೆ ಮುಂದೆ!!!
ನೀ ಮುಂದೆ, ನಾ ಹಿಂದೆ - ಎಂದೋ ಗೊತ್ತಿಲ್ಲವಷ್ಟೆ!

-ಅ
20.10.2008
7.20PM

11 comments:

 1. ಹೇಳುವರು ಹಿರಿಯರು
  ನೂಲಿನಂತೆ ಸೀರೆ, ತಂದೆಯಂತೆ ಮಗನು.
  ಉಳಿಸಿಲ್ಲ ನೀನೆನಗೊಂದೂ ಆದರ್ಶವನು
  ಬೆಳೆಸಿರಬಹುದು ರಕ್ತದಲಿ, ಅರಿಯೆನು!

  --> ಈ ಸಾಲು ಸೂಪರ್ರು.. hmmm... ರಕ್ತದಲ್ಲೇ ಬಂದಿವೆ ಆದರ್ಶಗಳು.. y worry?

  super kavana man..
  ಭಾವಪೂರ್ಣವಾಗಿದೆ!! ಅರ್ಥಪೂರ್ಣವಾಗಿದೆ!!

  ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ;
  ಬೇಡಲೊಳಿತಾವುದೆಂಬುದರರಿವುಮಿಲ್ಲ!
  ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ
  ನೀಡುಗೆದೆಗಟ್ಟಿಯನು - ಮಂಕುತಿಮ್ಮ....

  ReplyDelete
 2. ಕಾವ್ಯ ಚೆನ್ನಾಗಿದೆ ಆದರೆ ಅರ್ಥ ಬೇಸರ ತರಿಸುತ್ತೆ. ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತ ಬೆಳೆದಿದ್ದೀಯ. ನಡೆದು ಹೋದುದರ ಬಗ್ಗೆ ಯೋಚಿಸಿಕೊಂಡು ಕುಳಿತುಕೊಳ್ಳುವಲ್ಲಿ ಅರ್ಥವಿಲ್ಲ. ನೆನ್ನೆ ನೆನ್ನೆಗೆ ಬಿಡು. ಸುಂದರ ನಾಳೆಗಳ ನನ್ನ ಹಾರೈಕೆ ಇಂದು ನಿನಗಿರಲಿ. ಮತ್ತು, ನಾಳೆಗೆ ನನ್ನ ಕಡೆಯಿಂದ ಹುಟ್ಟು-ಹಬ್ಬದ ಶುಭಾಶಯಗಳು ನಿನಗಿರಲಿ.

  "ಬದುಕು ಜಟಕಾ ಬಂಡಿ..." [ನಿನಗೂ ಕಗ್ಗ ಗೊತ್ತು; ನೆನಪಿಸಿದೆ ಅಷ್ಟೆ]

  ReplyDelete
 3. [ಗಂಭೇ] ನೋ ವರೀಸ್.

  [ಶ್ರೀಕಾಂತ್] ನೆನ್ನೆಯನ್ನು ಮರೆತಿದ್ದರೆ ಈ ಕವನ ಹೇಗಪ್ಪ ಬರೆಯೋಕೆ ಆಗ್ತಿತ್ತು??

  ನೆನ್ನೆಗಳು ಇಂದು ಮತ್ತು ನಾಳೆಗಳಿಗೆ ಬೇರುಗಳು ನನ್ನ ಪಾಲಿಗೆ. ಇರಲಿ. ನೀ ಹೇಳಿದ "ಕವನದ ಅರ್ಥ"ದೊಂದಿಗೆ ಹೇಗೆ ಬೆಳೆಯಬೇಕೆಂಬುದನ್ನು, ಬದುಕಬೇಕೆಂಬುದನ್ನು ನಾನು ಕಲಿತಿದ್ದೇನೆ. ಅದನ್ನು enjoy ಕೂಡ ಮಾಡ್ತಿದ್ದೀನಿ. ಅದು ನನ್ನ ಜೀವಾಳ ಕೂಡ ಆಗೋಗಿದೆ.

  ನಿನ್ನ ಅಡ್ವೈಸು ಬಹಳ ಪ್ರ್ಯಾಕ್ಟಿಕಲ್ ಆಗಿದೆ. ಆದರೆ ನಾನೇ ಪ್ರ್ಯಾಕ್ಟಿಕಲ್ ಮನುಷ್ಯನೇ ಅಲ್ಲ ಅನ್ನಿಸುತ್ತೆ. :-(

  ತುಂಬಾ ಥ್ಯಾಂಕ್ಸ್ ಕಣಯ್ಯಾ.. ನಿನ್ ಹುಟ್ಟುಹಬ್ಬಕ್ಕೆ ಬಸ್ ಅಲ್ಲಿ "ಸ್ವೀಟ್" ಕಟ್ ಮಾಡಿದ್ದು ನೆನಪಾಗ್ತಾ ಇದೆ.

  ReplyDelete
 4. manjiinalli karagi hogake biDade mansalli sthiravaagi uLsko..huttu saavu eradara madhye mooru dinada baaLu anno arthadalli neene bardidiyaa,,,,bere kalpanegaLanna bittu nijavannaritu baaLu... nee mundhe naa hindhe annodu jeevanadalli katusatya....

  ReplyDelete
 5. Huttu habbada haardikha shubhaashayagaLu.. :-)

  ReplyDelete
 6. oLLe sridhara.. birthday wish maaDakke bere platform-e siglilveno? yappppaaaaaaaa!!!!

  ReplyDelete
 7. srinivasa - naan wish maaDiddu noDi avanoo maaDirbeku... kavana artha aagalvalla avanige... :-)

  ReplyDelete
 8. ninne reader nalli odidde ... .poorti kavana irle illa alli ... 3 stanza maatra ittu ... mikkiddu ivatte odiddu ... ontharaa aaytu .... enu antha helokke aagtilla.
  sanje ice cream tinnonva? please?

  nin kavanadalli nange artha aagde iro padagaliddaglella nange daadl daadl nenpaagutte :-)
  Love you ...

  ReplyDelete
 9. ನೋಡಬಯಸಿದ ಕಣ್ಣಿಗೇನು ಉತ್ತರ ಹೇಳಲಿ?
  ಚಿತ್ರಪಟವೇನೋ ಮುಂದಿದೆ, ಚಿತ್ರವೇ ಕಲ್ಪನೆ.

  im unable to get over this ... :-( :-(

  ReplyDelete
 10. [ಭವ್ಯಾ] ಏನೇನೋ ಕಟುಸತ್ಯಗಳಿವೆ - ಅನಗತ್ಯ.

  [ಶ್ರೀಧರ ರಾಜು] ನೀನೊಬ್ನೇ ನೋಡೋ ಕವನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವುದು!!

  [ಗಂಭೇ] ನನ್ ಹುಟ್ಟುಹಬ್ಬದ ಶುಭಾಶಯವನ್ನು "ಪ್ಲಾಟ್‍ಫಾರಂ" ಅಲ್ಲಿ ನೀಡು ಅಂತ ಹೇಳ್ಕೊಡ್ತೀಯಾ? ಧಿಕ್ಕಾರ!!

  [ಶ್ರೀಕಾಂತ್] ಕವನಗಳು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು.

  [ವಿಜಯಾ] ದಾದ್ಲ್ ದಾದ್ಲ್... ನಂಗೆ ಕಾಕ್ಮ್ ಬೇಕು ಈಗ.

  [ವಿಜಯಾ - ಮತ್ತೊಮ್ಮೆ] ಕೆಲವು ಒಗಟು, ಮತ್ತೆ ಕೆಲವು 'ಕಟುಸತ್ಯ'.

  ReplyDelete
 11. ಅರುಣ್ - ಕವನಗಳು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ನಿಜ. ಆದರೆ ಶ್ರೀಧರನಿಗೆ ಹೇಗೂ ಅರ್ಥವಾಗಲ್ಲ, ಅವನೇ ಹೇಳುವ ಪ್ರಕಾರ. ಇದಕ್ಕೇನು ಹೇಳ್ತೀಯೋ ಗೊತ್ತಿಲ್ಲ.

  ReplyDelete