Saturday, November 1, 2008

ಇನ್ನೊಂದು ಘಟ್ಟ

ಆ ದಿನಗಳಲ್ಲಿ ನನಗೆ RHM ಹೊರೆತಾಗಿ ಬೇರೆ ಉದ್ಯೋಗವಿರಲಿಲ್ಲ. ಹೆಚ್ಚಾಗಿ ಸಂಪಾದಿಸಲಾಗದೇ ಇದ್ದರೂ ತಕ್ಕ ಮಟ್ಟಿಗೆ ನನ್ನ ಗೌರವವನ್ನು ಕಾಪಾಡಿರುವುದು ಈ ಸಂಸ್ಥೆ. ನಿದ್ದೆಯಲ್ಲೂ RHM ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಂಡಿದ್ದ ನನಗೆ, ಅರ್ಧ ನಿದ್ದೆಯಲ್ಲೊಮ್ಮೆ "Speak to Nature" ಎಂಬ ಬೈಲೈನು ಹೊಳೆದು, ಮಧ್ಯರಾತ್ರಿಯೇ ನಾಮಕರಣ ಮಾಡಿಬಿಟ್ಟೆ! ನಾನು, ಗೆಳೆಯರೊಡಗೂಡಿ Rambling Holiday Makers ಆರಂಭಿಸಿ ಮೂರು ವರ್ಷಗಳ ನಂತರ ಜಾಹೀರಾತನ್ನು ಅಂತರ್ಜಾಲದಲ್ಲಿ ನೀಡಬೇಕೆಂಬುದು ಹೊಳೆಯಿತು. ಆಗ ಖಾಸಗಿ ವೆಬ್‍ಸೈಟನ್ನಾಗಲೀ, ಉಚಿತ ವೆಬ್‍ಸೈಟುಗಳನ್ನಾಗಲೀ ಮಾಡಲು ನನಗೆ ಅರಿವಿರಲಿಲ್ಲ.

ಈ ಗೂಗಲ್ ಪೇಜಸ್‍ನ ಅರಿವಾಗುವ ಮುಂಚೆ ಕಾರ್ಯಕ್ರಮಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ನನಗೆ ಮೊದಲು ನೆರವಾಗಿದ್ದು ಬ್ಲಾಗರ್.ಕಾಂ. ಜೂನ್ 2006-ರಲ್ಲಿ speaktonature.blogspot.com ಜನಿಸಿದ್ದು ಹೀಗೆ! ಹಲವು ತಿಂಗಳುಗಳ ನಂತರ ಶ್ರೀಕಾಂತನ ಕೃಪೆ, ಗೂಗಲ್ ಪೇಜಸ್‍ನಲ್ಲಿ RHM ಬಂದಿತ್ತು. ಈ speak to nature ಬ್ಲಾಗಿನಲ್ಲಿ ಲೇಖನಗಳಾಗಲೀ, ಅಂಕಣಗಳಾಗಲೀ ಏನೂ ಇರಲಿಲ್ಲ. ಕೇವಲ ಜಾಹೀರಾತುಗಳಿದ್ದವು. ನಾನು ಎಲ್ಲರಿಗೂ ಈಮೇಲ್ ಕಳಿಸುತ್ತೇನಲ್ಲಾ, ಇಂತಿಂಥ ಟ್ರೆಕ್ಕು, ಇಂತಿಂಥ ಕಾರ್ಯಕ್ರಮ - ಹೀಗೆ, ಈ ಎಲ್ಲವನ್ನೂ ಆಮೂಲಾಗ್ರವಾಗಿ ಪ್ರಕಟಿಸುತ್ತಿದ್ದೆ.

ಬರೆಯುವ ಹವ್ಯಾಸ ಚಿಕ್ಕಂದಿನಿಂದಲೂ ಇದ್ದಿದ್ದು, ಅದರಲ್ಲೂ ಕಂಪ್ಯೂಟರಿನಲ್ಲಿ ಕನ್ನಡ ನೋಡಿ ವಿಪರೀತ ಖುಷಿಯಾಗಿ ಹಾಳೆಯ ಮೇಲೆ ಬರೆದಿದ್ದನ್ನು ಅದೇ ಸಮಯದಲ್ಲಿ ಕಂಪ್ಯೂಟರೀಕರಿಸುತ್ತಿದ್ದೆ. esnips.com ಅನ್ನು ನಾನು ಮರೆಯುವಂತಿಲ್ಲ. ಅಂತರ್ಜಾಲದಲ್ಲೂ ಕನ್ನಡ ಬಳಸಿ, ಅಲ್ಲಿ ಲೇಖನಗಳನ್ನು ಪ್ರಕಟಿಸಬಹುದೆಂಬ ಅರಿವೂ ನನಗೆ ಇರಲಿಲ್ಲ. esnipsನಲ್ಲಿ ಮೊದಲ ಲೇಖನ ಬರೆದಿಟ್ಟುಕೊಂಡಾಗ ಏನೋ ಆನಂದ. ನವೆಂಬರ್ ತಿಂಗಳಿನಲ್ಲಿ ಯಾವಾಗ RHMಗೆ ಗೂಗಲ್ ಪೇಜಸ್ ಸಿಕ್ಕಿತೋ, ಆಗ ಅಷ್ಟೇನೂ features ಇಲ್ಲದ esnipsನ ಬರಹವನ್ನು ಬ್ಲಾಗರ್‍ನ speaktonature.blogspot.com ಗೆ ವರ್ಗಾಯಿಸಿಬಿಟ್ಟೆ!

ಅದಕ್ಕೊಂದು ಹೆಸರನ್ನೂ ಕಷ್ಟ ಪಟ್ಟು ಕೊಟ್ಟೆ - ಕ್ಷಿತಿಜದೆಡೆಗೆ ಅಂತ.

ಶ್ರೀನಿವಾಸ, ಮತ್ತು ನಾನು ಆ ದಿನಗಳಲ್ಲಿ ಮಧ್ಯರಾತ್ರಿ ಮೂರುವರೆವರೆಗೂ chat ಮಾಡುತ್ತಿದ್ದೆವು. ಈ ಬ್ಲಾಗರ್.ಕಾಂ ಬಗ್ಗೆ ಐಡಿಯಾ ಕೊಟ್ಟಿದ್ದು ಅವನೇ. ಜೊತೆಗೆ ಒಟ್ಟಿಗೇ ಇಬ್ಬರೂ ಆರಂಭಿಸಿಕೊಂಡೆವು ನಮ್ಮ ನಮ್ಮ ಬ್ಲಾಗನ್ನು! ಆಗ ನನ್ನ ಬ್ಲಾಗಿಗಿದ್ದ ಓದುಗ ಅವನು, ಅವನ ಬ್ಲಾಗಿಗೆ ನಾನು!!

ನಾನು ನನ್ನ ಪ್ರಯಾಣದ ಲೇಖನಗಳನ್ನು ಬರೆಯಲು ಬಹಳ ಇಷ್ಟ ಪಡುತ್ತಿದ್ದೆ. ಆದರೆ, ಜೊತೆಗೆ ಏನೇನೋ ಬೇರೆ ಎಲ್ಲಾ ಬರೀತಾನೂ ಇದ್ದೆ. ಒಂದು ದಿನ, ಒಳ್ಳೇ ಬುದ್ಧನಿಗೆ ಜ್ಞಾನೋದಯವಾದ ಹಾಗೆ ಥಟ್ಟನೆ ಹೊಳೆಯಿತು. ಹೆಸರು ನೋಡಿದರೆ speak to nature ಅಂತ ಇದೆ, ಇದರಲ್ಲಿರುವ ಲೇಖನಗಳು ಹೆಸರಿಗೆ ಪೂರಕವಾಗೇ ಇಲ್ಲವಲ್ಲಾ ಅಂತ. ಆಗ ಕ್ಷಿತಿಜಾನಿಸಿಕೆಯನ್ನು ಆರಂಭಿಸಿ, speak to nature ಅನ್ನು ನೇಚರ್‍ಗೇ ಸೀಮಿತಗೊಳಿಸಿದೆ. ಅಂದಿನಿಂದ ಇಂದಿನವರೆಗೂ - ಎರಡು ವರ್ಷದಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ, ಪ್ರಕೃತಿಯ ನನ್ನ ಒಲವನ್ನು ಪದಗಳನ್ನಾಗಿಸೋಕೆ!

ಕ್ಷಿತಿಜದೆಡೆಗೆ ಬ್ಲಾಗು ನನಗೆ ಹಲವಾರು ಗೆಳೆಯರನ್ನು ಕೊಟ್ಟಿದೆ. ಈಗ ದಟ್ಸ್ ಕನ್ನಡಕ್ಕೆ ಹೋಗಿ ತನ್ನ ಬ್ಲಾಗನ್ನು ಹೆಚ್ಚು ಗಮನಿಸದೇ ಇರುವ ಶ್ರೀನಿಧಿ (;-)), ಕನ್ನಡ ಬ್ಲಾಗ್ ಪ್ರಪಂಚದಲ್ಲಿ ವಿಖ್ಯಾತನಾಗಿರುವ ಸುಶ್ರುತ, ಶಮರ (ಅಮರ), ಚಿತ್ರಕಾರ ಹರ್ಷ, ಪುಷ್ಪಲತಾ, ಬ್ಲಾಗೋತ್ತಮೆ ಲಕುಮಿ, ಪ್ರವೀಣರಾದ ಅರ್ಜುನ ಮತ್ತು ಹರೀಶ, ರಮೇಶ್, ಶಶಾಂಕ್, ಜಯಶಂಕರ್ ಹೀಗೆ ಹಲವಾರು ಮಿತ್ರರು ನನಗೆ ದೊರಕಿದ್ದು ಬ್ಲಾಗಿನ ದೆಸೆಯಿಂದಲೇ. ಕಗ್ಗದ ಶ್ರೀನಿವಾಸ, ಗೀತೆ ಶ್ರೀಕಾಂತ, ಕಾಪಿ-ಪೇಸ್ಟ್ ಶ್ರೀಧರ - ಇಂಥವರ ಗೆಳೆತನ ದಿನೇ ದಿನೇ ದೃಢವಾಗುತ್ತಿದೆ. ಅಕ್ಕ ವಿಜಯಾಳ ಪ್ರೋತ್ಸಾಹ ಪೊರೆಯುತ್ತಿದೆ.

ಈ ಎರಡು ವರ್ಷದಲ್ಲಿ ಬೆಟ್ಟದಲ್ಲಿ ಸಾವನ್ನಪ್ಪಿದವರ ಬಗ್ಗೆ, ಇಪ್ಪತ್ತು ರೂಪಾಯಿ ನೋಟಿನ ಬಗ್ಗೆ, ವನ್ಯಜೀವಿಗಳ ವಿಶ್ವ ಸೌಂದರ್ಯ ಸ್ಪರ್ಧೆ, ಇಂಥವು ನನಗೇ ಬಹಳ ಇಷ್ಟವಾದ ಲೇಖನಗಳು.

ಅಪ್ಪನ ಕಥೆ ಒಂದಷ್ಟು ಪ್ರಸಿದ್ಧಯನ್ನೂ ತಂದುಕೊಂಡಿತು. ಅದ್ಯಾಕೋ ಗೊತ್ತಿಲ್ಲ. ಅದನ್ನು ರಚಿಸಿದಾಗ ನಾನೂ ಬಹಳ ಥ್ರಿಲ್ ಆಗಿದ್ದೆ. ನಂತರ ಕೆಲವು ಪ್ರಾಣಿಗಳ ಆಯುಷ್ಯದ ಬಗ್ಗೆ ಇದ್ದ "ಅರಸ ಕೇಳ್, ಆಯುಷ್ಯವುಳ್ಳರೆ.." ಎಂಬ ಲೇಖನವನ್ನು ಕನ್ನಡಪ್ರಭದವರು ಭಾನುವಾರದ ಸಂಚಿಕೆಯೊಂದರಲ್ಲಿ ಪ್ರಕಟಿಸಿ ಕ್ಷಿತಿಜದೆಡೆಗೆ ಎಂಬ ಬ್ಲಾಗನ್ನು ಒಂದಷ್ಟು ಮನೆಗಳಿಗೂ ತಲುಪಿಸಿದರು. ಇದಕ್ಕಾಗಿ ನಾನು ಋಣಿ. ಮತ್ತೆ ಪ್ರಕೃತಿಯ ಬಗ್ಗೆ ಹಲವರಂತೆ ನನಗೂ ಇರುವ ಸಂದೇಹಗಳನ್ನೊಳಗೊಂಡ "ಯಾಕೆ" ಲೇಖನವನ್ನು 'ಅವಧಿ'ಯವರು ಗುರುತಿಸಿ ಪ್ರಕಟಿಸಿದ್ದಕ್ಕೆ ಅವರಿಗೂ ಥ್ಯಾಂಕ್ಸ್. ದಟ್ಸ್ ಕನ್ನಡದವರು ಹಿಂದೆ ಒಂದೆರಡು ಬರಹಗಳನ್ನೂ ತಮ್ಮ ವೆಬ್‍ಸೈಟಿನಲ್ಲಿ ಪ್ರಕಟಿಸಿ ಪ್ರಕೃತಿಯ ವಿಷಯಗಳನ್ನು ಹತ್ತು ಹಲವು ಕಡೆಗೆ ಕೊಂಡೊಯ್ದಿದ್ದಾರೆ. ಈ ಎಲ್ಲರಿಗೂ ನಾನು ಕೃತಜ್ಞ.

ಕೆಲವು ಲೇಖನಗಳನ್ನು ಓದಿಕೊಂಡು "ಥೂ! ಏನು ಇಷ್ಟು ಕೆಟ್ಟದಾಗಿದೆ ನಾನ್ ಬರೆದಿರೋದು" ಎಂದುಕೊಂಡಿರುವ ಪ್ರಸಂಗವೂ ಉಂಟು. ಆ ಲೇಖನಗಳ ಹೆಸರುಗಳು ಯಾಕೀಗ! ಮುಂದೆ ಮುಂದೆ ಬರೆಯುವಾಗ ಇನ್ನಷ್ಟು ಕಲಿತು, ಮತ್ತಷ್ಟು ಪಕ್ವವಾಗಿರುವ ಲೇಖನಗಳನ್ನು speak to nature-ನಲ್ಲಿರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ತಪ್ಪುಗಳನ್ನೂ ಮಾಡಿದ್ದೇನೆ. ಓದುಗರು ತಿದ್ದಿದ್ದಾರೆ. ಇನ್ನು ಮುಂದೆಯೂ ಮಾಡುತ್ತೇನೆ, ಇನ್ನು ಮುಂದೆಯೂ ತಿದ್ದುತ್ತಾರೆ! ತಿದ್ದಿಕೊಳ್ಳುತ್ತೇನೆ.

ಕ್ಷಿತಿಜದೆಡೆಗೆ - ಇದರಿಂದ ನನ್ನ ಪಾಲಿಗೆ ದೊರಕಿದ ಮತ್ತೊಂದು ಭಾಗ್ಯವೆಂದರೆ "ಚಿತ್ರಚಾಪ" ಪುಸ್ತಕ. ಇಂಥಾ ಪುಸ್ತಕದ ರಚನೆಯಲ್ಲಿ ಮತ್ತೂ ಭಾಗವಹಿಸುವಂತಾಗಲಿ ಎಂದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ.

ಅಂತೂ ಎರಡು ವರ್ಷ ಸಂದಿದೆ.
ಇನ್ನೂ ಕ್ಷಿತಿಜದೆಡೆಗೆ ಪಯಣ ಮುಂದಿದೆ.

ಆಲ್ ದಿ ಬೆಸ್ಟ್, ಅರುಣ. :-)


.....................................................................................

--> ಸಮಸ್ತ ಕನ್ನಡಿಗರಿಗೂ ರಾಜ್ಯೋತ್ಸವದ ಶುಭಾಶಯಗಳು

--> ಒಂದು ಕಾಲದಲ್ಲಿ ನನಗೆ ಅತ್ಯಂತ ಪ್ರಿಯ ನಟನಾಗಿದ್ದ ಶಾಹ್‍ರುಖ್ - ಈಗಲೂ ತಕ್ಕಮಟ್ಟಿಗೆ ಇಷ್ಟವಾಗುತ್ತಾನೆ. ಆದರೆ ರಾಮ್ ಜಾನೇ, ರಾಜು ಬನ್‍ಗಯಾ ಜೆಂಟ್ಲ್‍ಮ್ಯಾನ್, ಕಭೀ ಹಾನ್ ಕಭೀ ನಾ, ದಿಲ್‍ವಾಲೇ - ಕಾಲದ ಶಾಹ್‍ರುಖ್ ಹೆಚ್ಚು ಇಷ್ಟ ಆಗುತ್ತಾನೆ. ಸ್ವದೇಸ್, ಚಕ್ ದೇ ಚಿತ್ರಗಳಲ್ಲಿ ಪರಿಪಕ್ವತೆ ಕಂಡುಬಂದಿದ್ದು ಮೆಚ್ಚುಗೆಯಾದ. ಉತ್ತಮ ಪಾತ್ರಗಳು, ಉತ್ತಮ ಚಿತ್ರಗಳು ಈತನ ಪಾಲಿಗೆ ದೊರಕಲಿ. ಹುಟ್ಟುಹಬ್ಬದ ಶುಭಾಶಯಗಳು ಶಾಹ್‍ರುಖ್.

--> ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದ ಕಾಲದ ಮಿತ್ರ ಸಂದೀಪ್ ಜನ್ಮದಿನ ಕೂಡ ಇಂದೇ. ಅವನಿಗೊಂದು ಶುಭಾಶಯ!

--> ಶಾಲೆಯಲ್ಲಿ ವಂಡರ್ ಲಾ ಕಿರುಪ್ರವಾಸಕ್ಕೆ ಹತ್ತು ವರ್ಷದ ಒಳಗಿನ ಮಕ್ಕಳನ್ನು ಕರೆದೊಯ್ದ ಬಗ್ಗೆ ನನಗೆ ಅಸಮಾಧಾನವಿದ್ದರೂ ಆ ಮಕ್ಕಳೊಡನೆ ಸುಸಂದರ್ಭದ ಮೆಲುಕು ಹಾಕಲು ಮನಸ್ಸು ಮುದಗೊಳ್ಳುತ್ತೆ. ಒಟ್ಟು 150 ಮಕ್ಕಳನ್ನು ಕರೆದುಕೊಂಡು ಹೋಗಿದ್ದೆವು. ನನ್ನ ಜವಾಬ್ದಾರಿಯಲ್ಲಿ 11 ಮಕ್ಕಳಿದ್ದೂ, "ಹೆದ್ರ್‍ಕೋಬೇಡ್ರೋ, ಹೋಗಿ ಆಟ ಆಡಿ ಎಲ್ಲವನ್ನೂ." ಎಂದು ಹೇಳಿ, ಸಿಕ್ಕಸಿಕ್ಕ ಆಟಗಳನ್ನೆಲ್ಲಾ ಆಡಿಸಿ ಮಕ್ಕಳೂ ಸಂತಸಗೊಂಡು, ನಾನೂ ಸಂತಸಗೊಂಡೆ. ಬೇರೆ ಮಕ್ಕಳಿಗೆ ನನ್ನ ಮಕ್ಕಳು - "ನಾವು ರೋಲರ್ ಕೋಸ್ಟರ್ ಆಡಿದ್ವಿ, ನಾವು ಕೊಲಂಬಸ್ ಆಡಿದ್ವಿ - ನಿಮ್ಮನ್ನ ಕರ್ಕೊಂಡ್ ಹೋಗ್ಲೇ ಇಲ್ಲ ನಿಮ್ ಟೀಚರ್ರು.." ಎಂದು ಆಡಿಕೊಳ್ಳುತ್ತಿದ್ದಾಗ ಏನು ಹೇಳಬೇಕೋ ತೋಚಲೇ ಇಲ್ಲ.

--> ಸರ್ವೇ ಭವಂತು ಸುಖಿನಃ.

-ಅ
02.11.2008
2.45PM

15 comments:

 1. congratulations and all the best gurugaLe.

  Ondu sanna correction - naanu ಬ್ಲಾಗೋತ್ತಮೆ alla, obbaLu ati shrisaamaanya blogger.

  ReplyDelete
 2. ಅರುಣ್,
  ಅಭಿನಂದನೆಗಳು :)

  ReplyDelete
 3. very good.. congratulations kanayya :-)

  all the best, future ge.. heege bareetaa iru.. innashtu prasiddhanagtiru. ninna doDD doDD programmegaLige karskonDaaga naanu ondu visitor pass iTkonD bandu noDtini ninna :P

  ReplyDelete
 4. ನಿನ್ನ ಬ್ಲಾಗುಗಳನ್ನು ಸುಮಾರು ಎರಡು ವರ್ಷದಿಂದಲೂ ಇಷ್ಟ ಪಟ್ಟು ಓದ್ತಿದೀನಿ [ಆದರೆ, ಆ ಇಪ್ಪತ್ತು ರೂಪಾಯಿ ನೋಟಿನ ಕಥೆ ಬರೆದಿದ್ದೀಯಲ್ಲ
  ... ಅದನ್ನ ಓದಿದ್ರೆ ನಿ
  ನ್ನ ಮೇಲೆ ಅನುಕಂಪ ಬರತ್ತೆ :-(]. ಚೆನ್ನಾಗಿ ಬರೀತಿದೀಯ. ಮುಂದೆ ಕೂಡ ಚೆನ್ನಾಗಿ ಬರೀತೀಯ. ಆದರೂ ಹೇಳ್ತೀನಿ, ನನ್ನ ಕಡೆಯಿಂದ ಮುಂಬರುವ ದಿನಗಳಿಗೆ "ಆಲ್ ದ ಬೆಸ್ಟ್" ಕಣಯ್ಯ.

  ಇದನ್ನ ಹೇಳಕ್ಕೆ ಈ ಜಾಗ ಸರಿಯೋ ಇಲ್ಲವೋ ಗೊತ್ತಿಲ್ಲ. ಆದರೂ ಹೇಳಿಬಿಡ್ತೀನಿ. RHM ಬಗ್ಗೆ ಓದಿದಾಗ ಇದನ್ನು ಹೇಳಬೇಕು ಅನ್ನಿಸ್ತು. 'ಗುರು' ಚಿತ್ರದ ಹಾಡಿನ ಸಾಲಿದು...

  "ಜಾಗೇ ಹೈ ದೇರ್ ತಕ್ ಹಮೇ; ಕುಚ್ ದೇರ್ ಸೋನೆ ದೋ... ಥೋಡೀ ಸಿ ರಾತ್ ಔರ್ ಹೈ; ಸುಬಹ್ ತೊ ಹೋನೆ ದೋ..."

  ಬಿರುದು ಏನೋ ಕೊಟ್ಬಿಟ್ಟಿದ್ದೀಯ 'ಗೀತೆ ಶ್ರೀಕಾಂತ' ಅಂತ, ಆದರೆ, ಗೊತ್ತಿರೋ ಎರಡು-ಮೂರು ಶ್ಲೋಕಗಳಿಗೆ ಬಿರುದು ದೊಡ್ಡದಾಯಿತು. ನಿನ್ನ ಬಿರುದಿಗೋಸ್ಕರನಾದ್ರೂ ಈ ಕಮೆಂಟಲ್ಲಿ ಸ್ವಲ್ಪ ವೇದಾಂತ ಕೊರಿಯೋಣ ಅನ್ಕೊಂಡೆ. ಆದ್ರೆ ಏನ್ ಕೊರೀಬೇಕು ಗೊತ್ತಾಗ್ತಿಲ್ಲ. ಹಾಗಾಗಿ, ಬಿರುದಿಗೆ ಅಪಚಾರ ಮಾಡ್ತಿದೀನಿ. ಕ್ಷಮಿಸು. ಮುಂದೆ ಯಾವಾಗಾದ್ರೂ ಇದಕ್ಕೆ ತಕ್ಕ ಗೀತೆ ಶ್ಲೋಕ ಹುಡುಕಿ ಕಮೆಂಟ್ ಮಾಡಿ ನಿನ್ನ ಬಿರುದಿನ ಋಣ ತೀರಿಸ್ತೀನಿ!

  ಕಗ್ಗದ ಶ್ರೀನಿವಾಸನೂ ಕಮೆಂಟಲ್ಲಿ ಕಗ್ಗ ಹಾಕ್ದೇ ಬಿರುದಿಗೆ ಅಪಚಾರ ಮಾಡಿದಾನೆ. ಅವನೂ ಕ್ಷಮೆ ಕೋರತಕ್ಕದ್ದು. ಇನ್ನು, ಕಾಪಿ-ಪೇಸ್ಟ್ ಶ್ರೀಧರ ಕಮೆಂಟಲ್ಲಿ ಏನಾದ್ರೂ ಕಾಪಿ-ಪೇಸ್ಟ್ ಮಾಡಿ ಬಿರುದಿಗೆ ಮರ್ಯಾದೆ ಕೊಡ್ತಾನೋ ಏನೋ... ನೋಡೋಣ!

  ReplyDelete
 5. :) ಶುಭಾಶಯಗಳು ಅರುಣ್.. ಹೀಗೆ ಮುಂದುವರೆಸಿ, ಇನ್ನೊಂದು ನೂರು ವರ್ಷ.. ನಿಮ್ಮ ಪ್ರತಿಯೊಂದು ಲೇಖನ ಓದಿದಮೇಲೆ ಕೇವಲ "ಬಹಳ ಚೆನ್ನಾಗಿದೆ" ಅಂತ ಕಮೆಂಟಿಸುವುದಕ್ಕೆ ನನಗೆ ಮುಜುಗುರ ಆಗುತ್ತೆ. ಆದ್ರೆ ಏನು ಮಾಡೋದು, ಅದಕ್ಕಿಂತ ಹೆಚ್ಚಿಗೆ ಬರೆಯುವುದಕ್ಕೆ ಬರೊದಿಲ್ಲ ನನಗೆ. ಕೇವಲ ಓದಿ ಖುಶಿ ಪಡೋದೊಂದೇ ನನ್ನ ಕೆಲಸ.. ;)

  ReplyDelete
 6. ನೀನು ಪದೇ ನನ್ನ ಮೇಲೆ ಆಪಾದ್ನೆ ಮಾಡ್ತಿದ್ರೆ ಸರಿ ಇರಲ್ಲ ನೋಡ್ತಿರು! ತೀರಾ ಎರಡು ವರ್ಷ ಮತ್ತು ರಾಜ್ಯೋತ್ಸವ ಇತ್ಯಾದಿ ಶುಭ ಸಮಾಚಾರಗಳು ಇರೋದ್ರಿಂದ ಹೆಚ್ಗೆ ಬೈಯಲ್ಲ ಇಲ್ಲ! ಹಾಳ್ ಬಿದ್ ಹೋಗು, ಒಳ್ಳೇದಾಗ್ಲಿ.

  ReplyDelete
 7. ಶುಭಾಯಗಳು ಅರುಣ್.. ವಿಖ್ಯಾತಿ ಪ್ರಖ್ಯಾತಿಗಳಿಗಿಂತ ಹೆಚ್ಚಾಗಿ ಪ್ರೀತಿ ಸಿಕ್ಕಿದೆ, ಎಷ್ಟೋ ಹೊಸಬರ ಸ್ನೇಹ ಸಿಕ್ಕಿದೆ.. ಅದಕ್ಕಾಗಿ ನಾವು ಬ್ಲಾಗ್ ಪ್ರಪಂಚಕ್ಕೆ ಋಣಿಯಾಗಿರಬೇಕು, ಅಲ್ವಾ?

  ReplyDelete
 8. yaako abhinandenegalu annokinta aasheervaadagalu anbeku anstide .. neenu heege bareetiru.
  Amele , heege sumne barkondre aagalla ...
  "ಇಂಥಾ ಪುಸ್ತಕದ ರಚನೆಯಲ್ಲಿ ಮತ್ತೂ ಭಾಗವಹಿಸುವಂತಾಗಲಿ ಎಂದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ."
  adakke kelsa noo maadbeku ;-) (this applies to everyone else in the team too! )

  ReplyDelete
 9. ಅರುಣ,

  ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ನೀನು ಬರೆಯುವಂತಾಗಲಿ.... ಜೊತೆ ಹೆಚ್ಚಿನ ಜನರಿಗೆ ತಲುಪುವಂತಾಗಲಿ ..... :)

  ಬದುಕು ಸುಂದರವಾಗಿರಲಿ
  -ಅಮರ

  ReplyDelete
 10. ಅರುಣ್,
  ಅಭಿನಂದನೆಗಳು mattu dhanyavaadagaLu :)

  ReplyDelete
 11. All the best kaNappa...nin baravaNige heege saagtirli.. :-)

  nan comment -u...driven by ctrl+c, powered by ctrl+v... ;-)

  ReplyDelete
 12. ಕಂಗ್ರಾಟ್ಸು, ಆಲ್ ದ ಬೆಸ್ಟು:)

  ReplyDelete
 13. [ಲಕುಮಿ] ಧನ್ಯವಾದಗಳು, and correction rejected.

  [ಅಂತರ್ವಾಣಿ]ಧನ್ಯವಾದಗಳು ಸರ್.

  [ಗಂಭೇ] ವಿಸಿಟರ್ ಪಾಸ್ ಅಂತೆ! ಇಬ್ರೂ ಕ್ಯೂನಲ್ಲಿ ನಿಂತು ಟಿಕೆಟ್ ತೊಗೊಂಡು ಹೋಗೋಣ!! ಏನಂತೀಯಾ?

  [ಶ್ರೀಕಾಂತ್] ಒಳ್ಳೇ ಅನುಕಂಪ. ಈ ಜಗತ್ತಿನಲ್ಲಿ ಬೆಕ್ಕು ಅಡ್ಡ ಹೋಗುವುದರಿಂದ ಹಿಡಿದು ಸೃಷ್ಟಿಕರ್ತ ಬ್ರಹ್ಮನೆಂಬುವವರೆಗೂ, ಬಲಗಾಲಿಟ್ಟು ಒಳಗೆ ಹೋಗುವುದರಿಂದ ಹಿಡಿದು ಭಗವಂತನ ಕೃಪೆಯವರೆಗೂ ಬರೀ ಮೂಢನಂಬಿಕೆಗಳೇ!! ಇಪ್ಪತ್ತು ರೂಪಾಯಿ ನೋಟಿನ ನಂಬಿಕೆಯ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವ ಅವಶ್ಯವಿಲ್ಲ ಬಿಡು. ಅದರ ಬಗ್ಗೆ ನನಗೂ ಅನುಕಂಪವಿದೆ. ಅದಕ್ಕಿಂತ ದೊಡ್ಡ ದೊಡ್ಡ ಮೌಢ್ಯಗಳನ್ನು ಮೇಲೆ ಹೆಸರಿಸಿದ್ದೇನಲ್ಲಾ, ಎಲ್ಲವೂ ಅನುಕಂಪನೀಯವೇ!! ;-)

  ಬಹಳ ಧನ್ಯವಾದಗಳು ಕಣಪ್ಪಾ, ನಿನ್ನ ವಿಷಸ್‍ಗೆ!!

  ಗೀತೆಯ ಒಂದು ತುಣುಕನ್ನು ಓದುವ ಆಸೆ. ಅತಿ ಶೀಘ್ರದಲ್ಲೇ ಇದರೊಂದಿಗೆ ಲಗತ್ತಿಸಿಬಿಡು, ಅತ್ಲಾಗೆ!!

  ಶ್ರೀನಿವಾಸನು ತನ್ನ ಬಿರುದಿಗೆ ಮಾಡಿರುವ ಮೋಸವನ್ನೇ ನೀನೂ ಮಾಡಬೇಡ. ಅವನಿಗೂ ಹೇಳುತ್ತೇನೆ! :-)

  [ಅನಂತ] ಅನಂತಾನಂತ ಧನ್ಯವಾದಗಳು ಸರ್.

  [ಶ್ರೀನಿಧಿ] ಆಪಾದನೆಯಂತೆ! ನೀನು ಮಾಡಿರೋ ಕೆಲ್ಸಕ್ಕೆ ಆಪಾದನೆ ಏನು, ಮರಣದಂಡನೆ ಶಿಕ್ಷೆಗೆ ಗುರಿ ಪಡಿಸಬೇಕು!

  [ಸುಶ್ರುತ ದೊಡ್ಡೇರಿ] ಚಿನ್ನದಂಥಾ ಮಾತು ಕಣಪ್ಪಾ.. ಆದ್ರೂ ಪ್ರಖ್ಯಾತಿಯೂ ಸಿಕ್ಕಿದೆ ಅಂತ ಒಪ್ಪಿಕೋ! ;-)

  [ವಿಜಯಾ] ಸೀರಿಯಸ್ಸಾಗಿ ಕೆಲಸ ಮಾಡ್ತಾ ಇದ್ದೀನಿ.

  [ಭವ್ಯಾ] ಥ್ಯಾಂಕ್ಸ್.

  [ಅಮರ] ಬದುಕಿನ ಸೌಂದರ್ಯ ಮಾಸುವುದೇ ಇಲ್ಲವೆಂಬ ನಂಬಿಕೆಯಿದೆ. ಧನ್ಯವಾದಗಳು ಕಣಪ್ಪಾ..

  [ವಿಕಾಸ್] ವಂದನೆಗಳು.

  [ಶ್ರೀಧರ] ಇದು ಯಾವುದರ ಕಾಪಿ - ಪೇಸ್ಟು?? ಅಂದ ಹಾಗೆ, ಇದು ಶ್ಲೇಷಾಲಂಕಾರ ಕಣಯ್ಯಾ, ನಿನ್ ವಿಷಯದಲ್ಲಿ "ಕಾಪಿ" - ಪೇಸ್ಟ್ ಅನ್ನೋದು!

  [ಶ್ರೀ] ಥ್ಯಾಂಕ್ಸು!!

  ReplyDelete
 14. [ಅರುಣ್, ಶ್ರೀಧರ] - ತಿದ್ದುಪಡಿಯೊಂದಿದೆ (ಶ್ರೀಧರನ ಭಾಷೆಯಲ್ಲಿ errata) - ಕಾಪಿ ಮಾತ್ರ ಶ್ಲೇಷ. ಪೇಸ್ಟ್ ಏನೋ ಗೊತ್ತಿಲ್ಲ.

  ReplyDelete