Tuesday, November 4, 2008

ಕೆರೆಯ ಧೋರಣೆ

ಯಾವುದೋ ಗಿರಿಯೊಳು ಹುಟ್ಟಿ
ಕಂದರಗಳ ದಾಟಿ, ಬಂಡೆಗಳ ಮೀಟಿ
ಸುಳಿಯೊಳು ಸಿಲುಕಿಸಿ
ಚಳಿಯೊಳು ಪುಲಕಿಸಿ
ದೊಣ್ಣೆನಾಯಕನಪ್ಪಣೆಯಿಲ್ಲದಿದ್ದರೂ
ಹರಿಯಲು ನಿಲುಕಿಸಿ
ಇನ್ನೆಲ್ಲೋ ಶಾಶ್ವತ ಪಯಣಗೈವ ನದಿಯು ನಾನಲ್ಲ.

ಮಳೆಯೇನು, ಹೊಳೆಯೇನು?
ಬುವಿಯೊಳಗಿನ ಜಳವೇನು?
ಶಾಂತವಾಗಿ ನುಂಗಿ ನುಂಗಿ
ಒಮ್ಮೆ ಜನರನು, ಮತ್ತೊಮ್ಮೆ ಜೀವನವನು
ಶಾಂತವಾಗಿ ನುಂಗಿ ನುಂಗಿ
ಎಂದೂ ಬತ್ತದೆ ತುಂಬಿಯೂ ತುಳುಕದ
ದಿಗಂತದಾಚೆಗಿನ ಮುನ್ನೀರು ನಾನಲ್ಲ.

ಬತ್ತುವುದು ನನ್ನ ಧರ್ಮ
ಕಾಲಕಾಲಕ್ಕೆ!
ಅದು ನಿಮ್ಮದೇ ಕುಕರ್ಮ
ಕೇಡುಗಾಲಕ್ಕೆ!!
ನಾ ಬತ್ತಿದರೆ ನಿಮಗೆ ಮಳೆ
ನನ್ನ ಮೈ ಮಾತ್ರ ಅಶುಚಿ, ಕೊಳೆ.
ಮಳೆಯೆಂದೂ ಕೊಳೆಯಲ್ಲ
ಚಿರಸ್ಫಟಿಕವು!

-ಅ
04.11.2008
10.30PM

5 comments:

  1. ಕೆರೆಗೂ ಸಹ ಅದರದೇ ಮಹತ್ವವಿದೆಯಲ್ಲವೆ?
    Good Idea.

    ReplyDelete
  2. hmmm... rain water harvesting system-u.. ಚೆನ್ನಾಗಿದೆ :-)

    ನಾ ಬತ್ತಿದರೆ ನಿಮಗೆ ಮಳೆ --> ಅಲ್ವೋ.. ಸಮುದ್ರದಲ್ಲಿ ನೀರು ಆವಿ ಆದರೂ ಮಳೆ ಬರುತ್ತೆ! :P

    ReplyDelete
  3. [ಸುನಾಥ್] ಹೆ ಹೆ, ಐಡಿಯಾನಾ??

    [ಅಂತರ್ವಾಣಿ] ಒಳ್ಳೇ ಸ್ಪೀಚು!

    [ಗಂಭೇ] ನಂಗೆ, ನಿಂಗೆ ಗೊತ್ತು - ಆದ್ರೆ ಕೆರೆಗೆ ಗೊತ್ತಿಲ್ಲ. ತನ್ನಿಂದಲೇ ಮಳೆ ಅಂದುಕೊಂಡಿರೋದು ಕೆರೆ.

    ReplyDelete
  4. hmm..
    ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್
    ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು
    ನೂನದಿಂದೆಲ್ಲವೆನುವಬ್ಧಿಯೊಳಗದನಿರಿಸೆ
    ಮೌನವದು ಮಣ್ಕರಗಿ - ಮಂಕುತಿಮ್ಮ...

    ReplyDelete