Monday, November 10, 2008

ಕಂಟಕ

ನನ್ನ ಜೀವಕ್ಕೆ ಕಂಟಕ.

ಕಾರಣ, ಮೊನ್ನೆ ಗಾಡಿಯಲ್ಲಿ ಹೋಗುತ್ತಿದ್ದಾಗ ಒಂದು ಕಾಗೆ ನನ್ನ ತಲೆಗೆ ರಪ್ಪನೆ ಬಡಿದು ಹೋಯಿತು. ಹೆಗಲ ಮೇಲೆ ಸವಾರಿಯೂ ಮಾಡಿಬಿಡುತ್ತಿತ್ತು ಇನ್ನು ಸ್ವಲ್ಪವಿದ್ದಿದ್ದರೆ!

ಗಾಡಿಯಿಂದ ಬೀಳುವಂತಾದ ನಾನು ನಿಲ್ಲಿಸಿ, "ಅಯ್ಯೋ 'ಗೂಬೆ' ಮುಂಡೇದೆ (ಕಾಗೆಗೆ ಗೂಬೆಯೆಂದು ಬೈಯ್ಯೋದೂ ಉಂಟು!!), ನಾನೇನಾದ್ರೂ ಬಿದ್ದಿದ್ರೆ ನಿನ್ ಮೇಲೆ ಇರೋ ಅಪಶಕುನದ ಆರೋಪ ನಿಜ ಆಗೋಗ್ತಿತ್ತಲ್ಲೋ, ಹೋಪ್‍ಲೆಸ್ ಫೆಲೋ.." ಎಂದು ಬೈದು ಮತ್ತೆ ಹೊರಟೆ!

ಪಾಪ, ಬಡಪಾಯಿ ಕಾಗೆ.

ಹಿಂದೊಂದು ದಿನ ಕಾಗೆಯೊಂದು ಚಲಿಸುತ್ತಿದ್ದ ನನ್ನ ಬೈಕಿನ ಗೇರ್ ಲಿವರ್‍ ಬಳಿಯೇ ಸಿಲುಕಿ, ನನ್ನ ಕಾಲು ಸಂದಿಯಲ್ಲಿಯೇ ಇಂಜಿನ್ನಿನ ಬಿಸಿ ತಗುಲಿ ಪ್ರಾಣ ಬಿಟ್ಟಿತ್ತು! ನನ್ನ ಕೈಯ್ಯಾರೆ ಆ ಕಾಕಶವವನ್ನು ತೆಗೆದು ಮರದ ಕೆಳಗೆ ಬಿಸುಟಿದ್ದೆ. ಅಯ್ಯೋ, ಅನ್ಯಾಯವಾಗಿ ಸತ್ತು ಹೋಯಿತಲ್ಲಾ ಎನ್ನುವ ನೋವೊಂದು ಬಿಟ್ಟರೆ ನನಗೆ ಇನ್ಯಾವ ಅಪಶಕುನವೂ ಆಗಿಲ್ಲ. ಈಗ ತಲೆ ಮೇಲೆ ಕುಳಿತಿರುವ ಕಾಗೆಯು ಏನು ಅಪಶಕುನವನ್ನು ತರುತ್ತೋ ನೋಡಬೇಕು! ನಾನೂ ಕಾಯುತ್ತಲೇ ಇದ್ದೀನಿ.

ನನ್ನ ಜ್ಯೋತಿಷಿ ಮಿತ್ರರು "ಕಂಟಕ ಇದೆ, ಶನಿ ದೇವರ ಪೂಜೆ ಮಾಡು (ಎಷ್ಟೋ ದಿನ), ಎಳ್ಳು ದೀಪ ಹಚ್ಚು" ಎಂದಾಗ ನಾನು ಅವರಿಗೆ ಕೊಟ್ಟ ಉತ್ತರ "ಕಂಟಕವೇ? ನನಗೋ ಕಾಗೆಗೋ??"

-ಅ
10.11.2008
11.15PM

16 comments:

 1. ನಾವೂ ಕಾದು ನೋಡುತ್ತೇವೆ!

  ReplyDelete
 2. aaga ninna kaal hatra adoo bike gear lever(spelling correctto tappo gottilla.., tappaagidre correct maadbeku)ge sikki sath hoytu.. kaal, kaigella taagdre enu dosha illa. tale ge taakdre maatra.. paapa adeno heLidaaralla ninna jyotishi mitraru avr heLdhaag keLu swalpa.. anyways neen avr heLid maadde idru(maadalla antha gottu adakke ee mundhina words) ninge enu aagde irli antha nanna ondu chikka praarthane aa devaralli..... take care.... devaru illa anno ninna nambke suLLagli....hushaaraagi iru.

  ReplyDelete
 3. Hitchcock-na THE BIRDS nenpaaythu! :-)

  ReplyDelete
 4. [ಶ್ರೀ] ಬರ್ಡ್ಸ್ ಚಿತ್ರದಲ್ಲಿ ಬಹುಶಃ, ನನಗೆ ನೆನಪಿದ್ದರೆ, ಅಟ್ಯಾಕ್ ಮಾಡುವುದು "ಸೀ ಗಲ್" ಪಕ್ಷಿಯಲ್ಲವೇ? ನನಗೆ ಈಗ ಅಡಿಗರ ಕವನ ನೆನಪಾಯಿತು. ಪಾತ್ರಗಳು ಅವೇ, ಪಾತ್ರಧಾರಿಗಳು ಬೇರೆ ಯುಧಿಷ್ಠಿರನಿಗೆ ದುರ್ಯೋಧನನ ವೇಷ...

  [ಭವ್ಯಾ] ಹೆ ಹ್ಹೆ ಹ್ಹೆ... ದೇವರಿದ್ದರೂ ಇರದಿದ್ದರೂ ಕಾಕಸ್ಪರ್ಶಕ್ಕೂ ದೇವರಿಗೂ ಯಾವುದೇ ಸಂಬಂಧ ಇಲ್ಲ ಬಿಡು.. ಪಾಪ, ಬಡಪಾಯಿ ದೇವರು!

  [ಹರೀಶ್] ನೋಡಿ, ನೋಡಿ. ಆದ್ರೆ, ಜೀವಕ್ಕೆ ಕಂಟಕ ಇದೆ ಅಂದೋರು ಸಮಯ ಮಾತ್ರ ಹೇಳಿಲ್ಲ. ಹಾಗೆ ನೋಡೋಕೆ ಹೋದರೆ ಪ್ರತಿಯೊಬ್ಬ ಮನುಷ್ಯನ ಜೀವಕ್ಕೂ ಪ್ರತಿಕ್ಷಣವೂ ಕಂಟಕ ಇದ್ದೇ ಇರುತ್ತೆ. ಯಾವಾಗ ಬೇಕಾದರೂ ಯಾರ ಜೀವ ಬೇಕಾದರೂ ಕಾಗೆಯಂತೆಯೇ ಹಾರಿ ಹೋಗಬಹುದು!! ನಾನು ಓದಿರುವ ಪ್ರಕಾರ ಈ ಕಂಟಕಗಳಿಗೆ ಒಂದು ವರ್ಷ validity. ಅಷ್ಟ್ರಲ್ಲಿ ನಾನು ಹೋಗ್ಬಿಟ್ರೆ.. :-)

  ReplyDelete
 5. "ನನ್ನ ಜೀವಕ್ಕೆ ಕಂಟಕ."

  ಎಂಥ ಡೈಲಾಗ್ ಹೊಡೆದುಬಿಟ್ಯಪ್ಪ!!

  ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಂ |
  ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ || [ಭ.ಗೀ. ೨-೨೧]

  [(ಪಾರ್ಥ,) ಹುಟ್ಟು-ಸಾವುಗಳಿರದ, ಬದಲಾಗದ, ಯಾವುದರಂದಲೂ ಅಳಿಯದ ಈ ಜೀವವನ್ನು ಬಲ್ಲವರು ಯಾವುದನ್ನು ಕೊಲ್ಲುವರು? ಯಾವುದನ್ನು ಕೊಲ್ಲಿಸುವರು?]

  ನೈನಂ ಛಿನ್ದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
  ನ ಚೈನಂ ಕ್ಲೇದಯನ್ತ್ಯಾಪೋ ನ ಶೋಷಯತಿ ಮಾರುತಃ || [ಭ.ಗೀ. ೨-೨೩]

  [ಜೀವವನ್ನು ಆಯುಧಗಳು ತುಂಡರಿಸವು, ಬೆಂಕಿಯು ಸುಡದು, ನೀರು ನೆನೆಸದು, ಗಾಳಿ ಒಣಗಿಸದು]

  ReplyDelete
 6. [ಶ್ರೀಕಾಂತ್] ಹೆ ಹ್ಹೆ.. ಇದೂ ಒಂದ್ ಥರಾ ಸೊಗಸಾದ ನಂಬಿಕೆ. ಬದುಕೋದಕ್ಕೆ ಏನಾದ್ರೂ ನಂಬಿಕೆಗಳು ಇರಲೇ ಬೇಕು. ಇಪ್ಪತ್ ರೂಪಾಯಿ ನೋಟ್ ಇದ್ದ ಹಾಗೆ!! ;-)

  ReplyDelete
 7. ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು
  ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ!
  ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು,
  ಅದಟದಿರು ನೀನವನ - ಮಂಕುತಿಮ್ಮ...

  ReplyDelete
 8. [ಗಂಭೇ] ಆ ವಿಧಿಯೇ ಕಾಗೆಯ ರೂಪದಲ್ಲಿ ಬಂದಿದ್ದಾನೆ ನೋಡ್ತಿರು!! ;-)

  ReplyDelete
 9. hinge aadre nalku jana olle manushyarige ootakke hakisi dakshine kodbekanthe. nanu ready idini, innu mooru jananna hudki bega. :)

  ReplyDelete
 10. [ವಿಕಾಸ್] ಇದ್ದಾರಲ್ಲಾ, ಮೇಲೆ.. ಅವರಿಗೇ ಯಾರಿಗಾದ್ರೂ ಹಾಕ್ಬಿಡಿ - ವಡೆ ಪಾಯ್ಸಾನ.. ;-)

  ReplyDelete
 11. chi ... iden saayodu vade paayasa maatu ... ee varsha thadoyokke iro shakti meeri kettad aagi aagide ... please stop this discussion :-(

  vade paaysa tinle beku antidre haage tindraaytu ..

  kaage goobe inda kantaka sullu anno ninna nambike nija aagli!

  ReplyDelete
 12. [ವಿಜಯಾ] ಸತ್ ಮೇಲೆ ಅವರ ಹೆಸರು ಹೇಳ್ಕೊಂಡ್ ತಿನ್ನೋದು ವಡೆ - ಪಾಯ್ಸ ತಾನೆ? ಹಾಗೇನೂ ತಿನ್ಬೋದು. ಹಾಗೇನೇ ಗರುಡ ಪುರಾಣಾನೂ ಓದ್ಬೋದು! ಹ್ಯಾರಿ ಪಾಟರ್ ಬದಲು.

  ಈ ವರ್ಷ ಇಷ್ಟೊಂದ್ ಕೆಟ್ಟದ್ ಆಗಿದೆ ಅಂತ ಮತ್ತೂ ಕೆಟ್ಟದ್ ಆಗ್ಬಾರ್ದು ಅಂತ ಯಾವ್ ಕಾನೂನು? ನಾನಂತೂ ರೆಡಿ!!! ;-)

  ಕಾಗೆ ಗೂಬೆ ಕಂಟಕ ಎಲ್ಲಾ ಬರೀ ಬೊಕಳೆ!! ಸೃಷ್ಟಿ - ನಾಶ ಇದು ಮಾತ್ರ ಸತ್ಯ.

  ReplyDelete
 13. intha article ella baribeda inmele...

  ReplyDelete
 14. ನೀವು ಹೇಳಿದಂತೆ ಕಾಗೆ ಹಾಗೆಲ್ಲಾ ಬಂದು ಹೋದರೆ ನನ್ನಕ್ಕ ನನ್ನಮ್ಮ ಶನಿ ದೋಷ ಅನ್ನುತ್ತಾರೆ. ನಾನೇನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರೂ ಅವರ ಸಮಾಧಾನಕ್ಕೆ ದೇವಸ್ಥಾನಕ್ಕೆ ಹೋಗಿ ಬರ್ತಿನಿ.

  ReplyDelete
 15. [ಶಿವು] ನಿಜ, ಹಾಗೆ ಅವರ ಸಮಾಧಾನಕ್ಕೆ ಹೋಗಿ ಬರುವುದರಿಂದ ನಾವು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಬದಲಿಗೆ, ಅವರ ಮನಸ್ಸಿಗೊಂದಿಷ್ಟು ನೆಮ್ಮದಿಯಿರುತ್ತೆ. ದೇವಸ್ಥಾನಕ್ಕೆ ಹೋಗೋದ್ರಿಂದ ನಮಗೆ ಕಂಟಕ ಆಗುವುದು ತಪ್ಪುತ್ತೋ ಬಿಡುತ್ತೋ ಗೊತ್ತಿಲ್ಲ, ಆದರೆ ಅವರಿಗೆ ನೆಮ್ಮದಿ. ಇದೇ ದೇವಸ್ಥಾನದ advantage.

  ಆದರೆ, ತೀರಾ ಆಚರಣೆಯಲ್ಲಿ ಸಿಲುಕಿಸಿಬಿಟ್ಟರೆ ಕಷ್ಟ ಅನ್ಸುತ್ತೆ ನನಗೆ. ಮೂಢ ಆಚರಣೆಗಳಿಗೆ ಮನಸೊಡ್ಡುವುದಿಲ್ಲ. ಎಳ್ಳು ದೀಪ ಹಚ್ಚು ನಲವತ್ತೈದು ದಿನ, ಇನ್ಯಾವುದೋ ಬದನೇಕಾಯಿ ಹೋಮ ಮಾಡು, ಮತ್ತೊಂದು ಮಾಡು ಅಂತ ಹೇಳ್ಬಿಟ್ಟು, ಮೊದಲೇ ತೂತಾಗಿರುವ ಜೇಬನ್ನು ಹರಿದು ಹಾಕಿ, ಇನ್ಯಾರೋ ಪುಣ್ಯಾತ್ಮ ಪುರೋಹಿತನ ಜೇಬನ್ನು ಭರ್ತಿ ಮಾಡುವುದರಿಂದ ತೊಂದರೆಯೇ ಅಧಿಕ. ಅದಕ್ಕೇ ಸೈಲೆಂಟಾಗಿ ಸೈಡಲ್ಲಿದ್ಬಿಡೋದು ಒಳ್ಳೇದು.

  [ಭವ್ಯಾ] ಹೆ ಹ್ಹೆ, "ಇಂಥಾ" ಅಂದ್ರೆ ಸಾಲದು, ಮುಂದಿನ ಆರ್ಟಿಕಲ್‍ಗಳಲ್ಲಿ ಅವು "ಇಂಥಾ" ಆರ್ಟಿಕಲ್ ಪಟ್ಟಿಗೆ ಸೇರಿಸೋದು ಬಿಡೋದು ನಿನಗೆ ಬಿಟ್ಟಿದ್ದು!!

  ReplyDelete
 16. naanu "intha" article pattige sersde iro haage neen bari.

  ReplyDelete