Tuesday, November 25, 2008

ವಿಚಿತ್ರಮಂಜರಿ

ಛೆ! ನಾನೂ ಇರಬೇಕಿತ್ತು!! - ಎನಿಸದೇ ಇರಲು ಸಾಧ್ಯವಿಲ್ಲ. ಆದರೆ ಅನಿವಾರ್ಯ ಕಾರಣ, ನನ್ನುಪಸ್ಥಿತಿ ಇನ್ನೆಲ್ಲೋ ಅವಶ್ಯವಿದೆ.

ಗೆಳೆಯರು ಅರ್ಜುನ, ಹರೀಶ, ಶರತ್ ಹಿಂದೆಂದೋ ಆರಂಭಿಸಿದ ಗುಂಪಿಗೆ ನಾನು ಸೇರ್ಪಡೆಯಾಗಿ ಹೆಚ್ಚು ಕಾಲ ಸಂದಿಲ್ಲ. ಸ್ವರೂಪನ ವಿಶೇಷ ಪ್ರತಿಭೆಯು ಇವರೊಂದಿಗೆ ಕೆಲಕಾಲವಿದ್ದು ಈಗ ಅಮೆರಿಕಾದಲ್ಲಿ ಓದಲು ಸೆಟ್ಲ್ ಆಗಿಬಿಟ್ಟಿದ್ದಾನೆ! ಬೇಗ ಬಾರಯ್ಯ!!

ಅರ್ಜುನನ ಚಾಣಾಕ್ಷತನವನ್ನು ರಂಗದ ಮೇಲೆ ನೋಡುವ ಕಾತುರ ಇಲ್ಲದಿರುತ್ತೆಯೇ? "ಅವರೇನ್ ಕುಕ್ಕರ್ರೇನ್ರೀ, ಒಂದೇ ಥರ ಕೂಗಕ್ಕೆ?" ಎಂದು ಸಾರಾಸಗಟಾಗಿ ಹೇಳುವ ಅರ್ಜುನ ನಾಣಿ ಅರೇನಾದಲ್ಲಿ ಹೇಗೆ ನಟಿಸಿಯಾನು ಎಂದು ನೋಡಲು ಕಾಯುತ್ತಿದ್ದೇನೆ. ಎಸ್.ಕೆ.ಜೈನ್ ಖ್ಯಾತಿಯ ಹರೀಶನ ಅಭಿಮಾನಿ ನಾನು. ಏನು ಮಾಡಲು ಬೇಕಾದರೂ ಸೈ ಎನ್ನುವ ಹರೀಶನು ಸ್ಟೇಜ್ ಮೇಲೆ ಬಂದು ಎಲ್ಲರನ್ನೂ ರಂಜಿಸುವ ಗ್ಯಾರೆಂಟಿಯನ್ನು ನಾನು ವಿಶೇಷವಾಗಿ ಕೊಡಬೇಕಾಗಿಲ್ಲ. ಶರತ್ ಅಂತೂ ಸಂಪೂರ್ಣ ತೊಡಗಿಸಿಕೊಳ್ಳುವ ವ್ಯಕ್ತಿ. ನಾಲಿಗೆಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಿರುಗಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಜಯಂತ್, ಸುಜಿತ್ ಮತ್ತು ಪೂಜಾ - ಇವರನ್ನು ನಾನೂ ಭೇಟಿ ಮಾಡಬೇಕು. ಆದರೆ ಇವರ ಪ್ರತಿಭೆಯ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.



ಎಲ್ಲಾ ಸೇರಿ ಉತ್ತಮ "ಶೋ" ನೀಡುತ್ತಾರೆಂಬ ನಂಬಿಕೆ ನನ್ನಲ್ಲಿದೆ.

ಈ ಭಾನುವಾರ - ಮಧ್ಯಾಹ್ನ ಮೂರೂವರೆಗೆ ಮತ್ತು ಸಂಜೆ ಏಳು ಗಂಟೆಗೆ.

ಈ ವಾರದ ಟಿಕೆಟ್ಟುಗಳು ಸೋಲ್ಡ್ ಔಟ್.

ಆಲ್ ದಿ ಬೆಸ್ಟ್, ಗೆಳೆಯರೇ. ಚೆನ್ನಾಗಿ ಮಾಡಿ. ಮುಂದಿನ ಸಲ ನಾನೂ ಜೊತೆಗಿರುತ್ತೇನೆ!! ನನ್ನಿಂದಲೂ ಚೆನ್ನಾಗಿ ಮಾಡಿಸಿ!!!

-ಅ
26.11.2008
12AM

5 comments:

  1. [ಶ್ರೀಧರ] ಆಗೋಯ್ತು.

    [ಶ್ರೀಕಾಂತ್] ಮುಂದಿನ ಸಲ. ಕಂಪೆನಿಗೆ ನಾನೂ ಇರ್ತೀನಿ.

    ReplyDelete
  2. ಬಹಳ ಧನ್ಯವಾದಗಳು, ಅರುಣ್. ನೀವು ಈ ನಾಟಕದ ಭಾಗವಾಗಿಲ್ಲ ಎಂಬುದೇ ನಮಗೆ ಬಹು ದುಃಖಕರ ವಿಷಯ. ಮುಂದಿನ ಬಾರಿ ಖಂಡಿತ ಬನ್ನಿಪ್ಪಾ. ಈ ಸಲ ನಿಮಗೆ ಮಾಫಿ.

    [ಶ್ರೀಕಾಂತ್ ಮತ್ತು ಶ್ರೀಧರ್] ಕ್ಷಮಿಸಿ, ಗೆಳೆಯರೇ. ಟಿಕೇಟ್-ಗಳು ಮುಗಿದುಹೋದವು. ಕ್ಷಮೆ ಯಾಚಿಸುವುದು ಬಿಟ್ಟು ಬೇರೇನೂ ಮಾಡಲಾರೆ ಈಗ. ಮುಂದಿನ ಕಾರ್ಯಕ್ರಮಕ್ಕೆ ನೀವು ಖಂಡಿತ ವಿಶೇಷ ಅತಿಥಿಗಳಾಗಿ ಬರಬೇಕೆಂದು ನನ್ನ ವಿನಂತಿ.

    ReplyDelete
  3. Arun,
    en maadsodu nin kainalli?

    Arjun,
    Naanu?

    ReplyDelete