Monday, December 15, 2008

ಅಯ್ಯಪ್ಪನ ಪಾಡು

ನಮ್ಮ ದೇಶದಲ್ಲಿ ಎಷ್ಟು ದೇವರುಗಳ ಸೃಷ್ಟಿಯಾಗಿದೆಯೋ ಅಷ್ಟೇ ಭಕ್ತರ ಸೃಷ್ಟಿಯೂ ಆಗಿದೆ. ಸತತವಾಗಿ ಈ ಕಾರ್ಯವು ಯಶಸ್ವಿಯಾಗಿ ನಡೆಯುತ್ತಲೇ ಇದೆ. ಪ್ಲೇಗಮ್ಮ ಮತ್ತು ಏಡ್ಸಮ್ಮ - ಈ ಎರಡು ದೇವತೆಗಳು ಅತ್ಯಂತ ಆಧುನಿಕವಾದವು. ಇವರಿಗೆ ಹೋಲಿಸಿದರೆ ಅಯ್ಯಪ್ಪ ಬಹಳ ಹಳಬ.

ವಿಷಯ ಅದಲ್ಲ.

ಹಿಂದಿನ ಕಾಲದಲ್ಲಿ ವೇದಘೋಶಗಳಿಂದಲೋ, ಹೋಮ ಹವನಗಳಿಂದಲೋ, ತಪಸ್ಸುಗಳಿಂದಲೋ ದೇವತೆಗಳನ್ನು ಒಲಿಸಿಕೊಳ್ಳುತ್ತಿದ್ದರು. ಭಜನೆಗಳು ಮನಸ್ಸಿಗೆ ಆಹ್ಲಾದಕರವಾಗುವಂತೆ ಸಾಗುತ್ತಿತ್ತು. ಈಗಲೂ ಅನೇಕ ಭಜನೆಗಳನ್ನು ಆನಂದಿಸಬಹುದು. ಮೀರಾ ಭಜನೆಯನ್ನು ಕೇಳುತ್ತಿದ್ದರೆ ಕಳೆದು ಹೋಗದೇ ಇರಲು ಸಾಧ್ಯವೇ? ರಾಮಕೃಷ್ಣಾಶ್ರಮದ ನಮ್ಮ ಕಿಟ್ಟಿ ಮೇಷ್ಟ್ರು ಹೇಳಿಕೊಟ್ಟ ಭಜನೆಗಳು ನಾನಿರುವವರೆಗೂ ನನ್ನಲ್ಲಿ ಪ್ರತಿಧ್ವನಿಸದೇ ಇರಲು ಸಾಧ್ಯವೇ? ಆದರೆ ಇಲ್ಲಿ ನಡೆಯುತ್ತಿರುವ ಪ್ರತಿಧ್ವನಿಯೇ ಬೇರೆ!

ಈತ ಬಹಳ ಬೇಗ ಪ್ರಸಿದ್ಧಿಯನ್ನು ಪಡೆದ ದೇವರು. ನೂರೈವತ್ತು ವರ್ಷ ಹಿಂದೆ ಹೋದರೆ ಈತನ ಹೆಸರು ಇಲ್ಲಿನ (ಕರ್ನಾಟಕದ) ದೇವಸ್ಥಾನದ ಚರಿತ್ರೆಗಳಲ್ಲಿ ಕಾಣಸಿಗುವುದಿಲ್ಲ. ಪುರಾಣಗಳಲ್ಲಂತೂ ಈತನ ಹೆಸರೇ ಬರುವುದಿಲ್ಲ. ಈತನೇ ಅಯ್ಯಪ್ಪ. ಅಯ್ಯಪ್ಪನ ಸೃಷ್ಟಿ ಹೇಗಾಯಿತು, ಏಕಾಯಿತು ಎಂಬುದು ಇಲ್ಲಿ ಅಪ್ರಸ್ತುತ. ಆದರೆ ಈತನಿಗಿರುವ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಈತನಿಗೇ ವ್ಯಸನವಾಗುವಂತಿದೆಯೆಂದರೆ ಇಲ್ಲಿ ಮೈದಾನವೊಂದರಲ್ಲಿ ನಡೆಯುತ್ತಿರುವ ಪ್ರತಿಧ್ವನಿಯೇ ಸಾಕ್ಷಿ. ಇಂಥಾ "ಭಜನೆಗಳು" ನಗರದಲ್ಲಿ ಅದೆಷ್ಟು ಕಡೆ ಭರದಿಂದ ಸಾಗುತ್ತಿದೆಯೋ ಏನೋ..

ಅಯ್ಯಪ್ಪನು ಇನ್ನೂ ಏನೆಲ್ಲಾ ಅನುಭವಿಸಬೇಕೋ, ಆತನ ಪ್ರಾರಬ್ಧ.

ಒಂದಷ್ಟು ಧ್ವನಿಗಳು ಇಲ್ಲಿ....

ಒಂದು.
ಅಯ್ಯಾ ಅಯ್ಯಾ ನೋಡ್ದೆ ನೋಡ್ದೆ
ಅಯ್ಯಪ್ಪ ಸ್ವಾಮಿಯ ನಾನ್ ನೋಡ್ದೆ....

(ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾ ನೋಡ್ದೆ....)

ಎರಡು.
ಅಯ್ಯಪ ಸ್ವಾಮಿ, ಅಯ್ಯಪ ಸ್ವಾಮಿ [ಅಯ್ಯಪ್ಪ ಎಂದು ಒತ್ತಕ್ಷರವಿಲ್ಲ]
ಕಟ್ಟಿ ಬಂದೆ ಇರ್ಮುಡೀನ್ನಾ...
ಶಬರಿಮಲೇಗೇ ಹೋಗಲು ಬಂದೆ
ಹರಸು ನಿನ್ನ ಭಕ್ತ್ರನ್ನ...

(ಸುಂಟರಗಾಳಿ, ಸುಂಟರಗಾಳಿ....)

ಮೂರು.
ಹರಿಹರಸುತನೇ ಶಬ್ರಿಗಿರಿ ವಾಸನೇ
ಶರಣಮ್ ಅಯ್ಯಪ್ಪಾ....
ಈ ಮಾಲೆ ಧರಿಸಿ ಭಕ್ತಿಯಿಂದ ಬಂದೇವಪ್ಪಾ...

(ಹೊಡಿ ಮಗ ಹೊಡಿ ಮಗ...)

ನಾಲ್ಕು.
ಅಯ್ಯಪ್ಪಾ ಸ್ವಾಮಿ.. ರತ್ತೋ ರತ್ತೋ (ಇಲ್ಲಿ ರತ್ತೋ ರತ್ತೋ ಯಾಕೆ ಬಂತು ಅಂತ ಗೊತ್ತಿಲ್ಲ)
ಮಣಿಕಂಠ ಸ್ವಾಮಿ.. ಬಿತ್ತೋ ಬಿತ್ತೋ (ಇದಂತೂ ಕರ್ಮಕಾಂಡ)
ಪಂಪಾ ನದಿ, ಸ್ನಾನ ಆಯ್ತೋ
ಇರುಮುಡಿ, ಹೊತ್ತಾಯಿತೋ
ಹೊತ್ತಾಯಿತೋ, ನಡೆದಾಯಿತೋ
ನಾವೆಲ್ಲ ಮಾಲೆಯನ್ನು ಹಾಕಿಕೊಂಡು
ಜುಂ ಜುಂ ಜುಂ ಜು ಜುಂ ಜುಂ.....

(ಯಾವ ಹಾಡು ಅಂತ ಹೇಳಲೇ ಬೇಕಾ? ಸಂಕ್ರಾಂತೀ ಬಂತು....)

ಸ್ವಾಮಿಯೇ ಶರಣಂ ಅಯ್ಯಪ್ಪ.

-ಅ
16.12.2008
12AM

27 comments:

 1. ಅಯ್ಯಪ್ಪನಿಗೆ ಹಳೇ ಹಾಡು ಹಾಡಿ ಹಾಡಿ ಯಾಕೆ ಬೋರ್ ಹೊಡಿಸೋದು ಅಂತ ಭಕ್ತರು ಹೀಗೆ upgrade ಮಾಡಿದ್ದಾರೆ :)

  ReplyDelete
 2. ಅರುಣ್ ಸಾರ್,.
  ಆಯ್ಯಪ್ಪ ಸ್ವಾಮಿ..ರತ್ತೋ ರತ್ತೋ..
  ಮಣಿಕಂಠ ಸ್ವಾಮಿ...ಬಿತ್ತೊ ಬಿತ್ತ್ತೊ...

  ಬಲು ಮಜವಿದೆಯಲ್ಲಾ ! ಮತ್ತು ಗಿರಿಜಕ್ಕನ ಅಭಿಪ್ರಾಯವೇ ನನ್ನದು ಕೂಡ...

  ReplyDelete
 3. ಕನ್ನಡಿಗರೇ ಧನ್ಯರು. ಕೇವಲ ಅಯ್ಯಪ್ಪನ ಪದ್ಯ ಮಾತ್ರ ಇದೆ. ಉತ್ತರ ಭಾರತದಲ್ಲಿ ಎಲ್ಲಾ ದೇವರ ಇಂತಹ ಪದ್ಯಗಳಿವೆ. ಕೆಲವು ಪದ್ಯಗಳ ಅರ್ಥ ವಾಕರಿಕೆ ಬರುವಂತೆ ಇದೆ. ಅಂತವುಗಳನ್ನೇ ಹಾಡುವ ಗಾಯಕರಿಗೂ ಒಳ್ಳ್ಲೆಯ ಬೇಡಿಕೆ ಇದೆ. ಅಂತಹ ಪದ್ಯಗಳನ್ನು ಕೇಳುವಾಗ ಒರಿಜಿನಲ್ ಪದ್ಯ ( ಕೆಲವು ಅಶ್ಲೀಲ) ಮನಸ್ಸಿಗೆ ಬರುತ್ತದೆಯೇ ವಿನಃ ದೇವರು ಕಾಣುವುದೇ ಇಲ್ಲ. ಈ ಕಡೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ೯೫% ಇಂತಹ ಪದ್ಯಗಳೇ.

  ReplyDelete
 4. ಅಂದ ಹಾಗೆ ನಾನು ಕೇಳಿದ ಒಂದು ಹಳೆ ಪದ್ಯ -
  ಅಯ್ಯಪ್ಪಾ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ( ಊರ್ವಶೀ ಊರ್ವಶಿ take ಇಟ್ ಈಸಿ ಊರ್ವಶಿ )
  ಈ ಪದ್ಯಕ್ಕೆ ಪ್ರಭು ದೇವನ್ ಡಾನ್ಸ್ ಹಾಕಿದರೆ ಪಕ್ಕಾ ರಿಮಿಕ್ಸ್

  ReplyDelete
 5. :) :) :) :) :) ಸ್ವಾಮಿಯೇ.....ಶರಣಮ್ ಅಯ್ಯಪ್ಪ !

  ReplyDelete
 6. ಅಯ್ಯಪ್ಪಂಗೆ ನನ್ ಶರಣು. ಶಬರಿ ಮಲೆಗೆ ನಾ ಬರನು.
  (ಬಿನ್ ಲಾಡೆನ್ನು ನಮ್ ಮಾವ ಥರ)

  ಸ್ವಲ್ಪ ವಿಭಕ್ತಿ ತಪ್ಪುಗಳಿರಬಹುದು. ಕ್ಷಮಿಸಿ.

  ReplyDelete
 7. ಅಯ್ಯಪ್ಪಾ........................!!!

  ReplyDelete
 8. ಅಯ್ಯಪ್ಪ ಸ್ವಾಮಿಯೇ ಇಂತಹವರಿಗೆ ಶರಣು ಎನ್ನುತಾನಷ್ಟೇ! ಅಯ್ಯಯ್ಯಪ್ಪೋ ಎಂದು ಹೇಳದಿದ್ದರೆ ಸಾಕು ಅಷ್ಟೇ :) :)

  ReplyDelete
 9. This comment has been removed by the author.

  ReplyDelete
 10. uhahhahha! E reethi HaadagaLanna naanu keLi sumar 5 varsha aagithu Eega idanna Odhi sakkth nagu aden lyrics en kathe!

  ReplyDelete
 11. ಈ ಪೋಸ್ಟ್‌ನಲ್ಲಿ 'ಪ್ರಾರಬ್ಧ' ಪದಪ್ರಯೋಗ ನೋಡಿ ಖುಷಿ ಆಯ್ತು. :-)

  ReplyDelete
 12. haa haa haa haa haa haa haa haa :-)

  ReplyDelete
 13. [ಆದಿತ್ಯ, ಶ್ರೀ, ಅನಂತ, ಸುಶ್ರುತ] ಪಾಪ, ನಗ್ತೀರಾ ಅಯ್ಯಪ್ಪನ ಪಾಡು ನೋಡಿ, ಇರ್ಲಿ ಇರ್ಲಿ...

  [ನೀಲ್‍ಗಿರಿ] ಅವರು ಅಪ್‍ಗ್ರೇಡ್ ಆಗಿ, ಭಕ್ತಿಯನ್ನು ಡೀಗ್ರೇಡ್ ಮಾಡ್ತಿದ್ದಾರೆ ಕರ್ಮಕ್ಕೆ! ಆದರೂ ನಮ್ಮಂಥವರಿಗೆ ಕೆಲವು ಸಲ ಒಳ್ಳೇ ಮನರಂಜನೆ. ಕೆಲವು ಸಲ ತಲೆ ಚಿಟ್ಟು!!

  [ಶಿವು] ಒಳ್ಳೇ ಮಜ ಕಣ್ರೀ..

  [ಡಿ.ವಿ.ಕಿಣಿ] ಎಲ್ಲಾ ದೇವರಿಗೂ ಸಿನಿಮಾ ಹಾಡಿನ ರಾಗವೇ? ಪಾಪ!! ಊರ್ವಶಿ ಊರ್ವಶಿ ಹಾಡು ಅಯ್ಯಪ್ಪನ ಭಜನೆಗೆ ಸಕ್ಕತ್ತಾಗಿ ಹೊಂದುತ್ತೆ!!!

  [ಲಕುಮಿ] ಹಾಗಲ್ಲ, ಸ್ವಾಮಿಯೇSSSSSSSSSS, ಏಯ್ಯ್... ಅನ್ಬೇಕು..

  [ಅರ್ಜುನ] ವಿಭಕ್ತಿ ಬೇರೆ ಇದಕ್ಕೆ!! ಇದರ ರೆಕಾರ್ಡಿಂಗ್ ಮಾಡ್ಬೋದು ನೋಡು ನಾವು.

  [ಕೆನೆ-ಕಾಫಿ] ಒಳ್ಳೇ ಚೆನ್ನಾಗಿದೆ ಕೆನೆ-ಕಾಫಿ ಹೆಸರು.

  [ಮಾನಸ ಹೆಗಡೆ] ಯಾರಿಗ್ಗೊತ್ತು, ಅಯ್ಯಯ್ಯಪ್ಪೋ ಅನ್ನುತ್ತಿರಬಹುದು ಪುಣ್ಯಾತ್ಮ.

  [ಪುಷ್ಪಲತಾ] ನೋಡು, ನೀನು ಕವಿತೆ ಬರೀತೀಯ, ಇಂಥಾ ಸಾಹಿತ್ಯ ನೋಡಿ ಕಲಿ ನೀನೂನೂ... ;-)

  [ಗಂಭೇ] ಪ್ರಾರಬ್ಧವು ಅಯ್ಯಪ್ಪನನ್ನೂ ಬಿಡುವುದಿಲ್ಲ ನೋಡು. ನಿನಗೆ ಖುಷಿಯಾಗಿದ್ದು ನಿನ್ನ ಪ್ರಾರಬ್ಧ.

  [ಆನಾ-ನಿಮಸ್] :-) :-) :-)

  ReplyDelete
 14. ಸ್ವಾಮಿಯೇ ಅಯ್ಯಪ್ಪೋ... ಸ್ವಾಮಿಯೇ ಅಯ್ಯಪ್ಪೋ... ಸ್ವಾಮಿಯೇ ಅಯ್ಯಪ್ಪೋ...

  ಸ್ವಾಮಿಯೇ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ..ಏ ಶರಣಮಯ್ಯಪ್ಪೋ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..ಓ..

  [ನಮ್ಮನೆ ಹತ್ರ ಹಿಂಗೇ ಕೂಗೋದು]

  ReplyDelete
 15. [ಶ್ರೀಕಾಂತ್] ನೀನು ಇಲ್ಲಿ ಮತೀಯ ಗಲಭೆ ಮತ್ತು ಕೋಮು ಗಲಭೆಯನ್ನು ಪ್ರಚೋದಿಸುತ್ತಿದ್ದೀಯ.

  ReplyDelete
 16. alla ... yaaroo shararappan ayyappa, sharanamman ayyappa anta kooge illa illi.
  Neenu ondu shloka kalsidde nodu ... yaaryaaru nannannannu heg hege nodbeku andkotaaro, naanu haaghaage avrige sigteeni anta no ... kaanteeni antha no ... idu haage ... ayyappanoo full take it easy policy follow maadtirtaarem

  ReplyDelete
 17. [ವಿಜಯಾ] ನಿಜ. ಗೀತೆಯ ರಚನಾಕಾರರು ಭಗವಂತನ ಕೈಯಲ್ಲಿ ಹೇಳಿಸಿದ ಮಾತು ಅದು.

  ಯೋ ಯೋ ಯಾಂ ಯಾಂ ತನು ಭಕ್ತಃ
  ಶ್ರದ ಯಾSರ್ಚಿತುಮಿಚ್ಛತಿ |
  ತಸ್ಯ ತಸ್ಯಾಚಲಾಂ ಶ್ರದ್ಧಾಂ
  ತಾಮೇವ ವಿದಧಾಮ್ಯಹಮ್ ||

  ಹೀಗೆ ಈ ಜನರು ಅಯ್ಯಪ್ಪನಲ್ಲಿ ದೇವರನ್ನು ಕಾಣುತ್ತಿದ್ದಾರೆ.

  ಇದೇ ತತ್ತ್ವವು ದೇವರಿಗೂ ಅನ್ವಯಿಸುವುದೆಂದರೆ, ಅಯ್ಯಪ್ಪನು ಇಂಥಾ ಹಾಡುಗಳನ್ನು ಭಕ್ತಿಯ ಅರ್ಚನೆಯೆಂದೇ ಭಾವಿಸುತ್ತಾನೆ, ಮತ್ತು ಇಂಥಾ ಭಕ್ತರನ್ನು ಸಲಹುತ್ತಾನೆ. ಶಿವನು ಕಣ್ಣಪ್ಪನಿಂದ ಮಾಂಸದ ನೈವೇದ್ಯವನ್ನು ಸ್ವೀಕರಿಸಲಿಲ್ಲವೇ? ರಾಮನು ಶಬರಿಯ ಎಂಜಲು ಹಣ್ಣನ್ನು ತಿನ್ನಲಿಲ್ಲವೇ? ಹಾಗೆ.

  ಅದೇನೇ ಆಗಲಿ, ಯಾವುದೇ ಪೂಜೆ ವ್ರತ ಭಜನೆ ಇತ್ಯಾದಿಗಳು ಅನ್ಯರಿಗೆ ತೊಂದರೆಯಾಗುವಂತಿರಬಾರದಷ್ಟೆ. ಕರ್ಕಶ ಕಂಠದಲ್ಲಿ ಧ್ವನಿವರ್ಧಕವನ್ನು ಬೇರೇ ಹಾಕಿಕೊಂಡು ಕಿರುಚಿ ನಮಗೆಲ್ಲಾ ಹಿಂಸಿಸುವುದು ತರವಲ್ಲ..

  ReplyDelete
 18. ಸ್ವಾಮಿಯೇಯ್... ಶರಣಮಯ್ಯಪ್ಪ!!

  ನೀವು ಹೀಗೆಲ್ಲ ಹೇಳಿದ್ರೆ ಸ್ವತಃ ಅಯ್ಯಪ್ಪನೇ ಅಯ್ಯಯ್ಯಪ್ಪಾ ಅಂತ ಓಡಿ ಹೋಗ್ತಾನಷ್ಟೇ..

  ReplyDelete
 19. [ಹರೀಶ] ಸಿನಿಮಾ ಹಾಡಿನ ಟ್ಯೂನ್ ಅಲ್ಲಿ ಹೇಳೋಕಿಂತ ವಾಸಿ ಅನ್ಸುತ್ತೆ... ;-)

  ReplyDelete
 20. arun,
  a good write up.

  beware of ayyappa swamis / bhaktas.
  there may be a controversy on this article.!!!

  anyways, let ayyappa also enjoy all these entertaining songs in his own divine style. !!!

  ReplyDelete
 21. [ಹೇಮಾಶ್ರೀ] ಹೌದಾ, ಕಾಂಟ್ರೋವರ್ಸಿ ಆಗೋ ಹಾಗಿದೆಯಾ? ಅಲ್ಲಾ, ಹುಚ್ಚ್ ಹಾಡನ್ನೆಲ್ಲಾ ಅಯ್ಯಪ್ಪನಿಗೆ ಕೇಳಿಸುವವರ, ಜೊತೆಗೆ ನಮ್ಮನ್ನು ಪೀಡಿಸುವವರ ಬಗ್ಗೆ ಅಸಮಾಧಾನವೇ ಹೊರೆತು, ಕಟ್ಟುನಿಟ್ಟಾಗಿ ವ್ರತ ಮಾಡುತ್ತಾ, ಬೇರೆಯವರಿಗೆ ಎಳ್ಳಷ್ಟೂ ತೊಂದರೆ ಮಾಡದವರ ಬಗ್ಗೆ ನನ್ನಲ್ಲಿ ಅಪಾರ ಗೌರವವಿದೆ.

  [ವಿಕಾಸ್] ಹೆ ಹ್ಹೆ, ಥ್ಯಾಂಕ್ಸ್...

  ReplyDelete
 22. ನಿಮ್ಮ ಅಭಿಪ್ರಾಯದಲ್ಲಿ ಸತ್ಯವಿದೆ

  ReplyDelete