Tuesday, December 30, 2008

ಹೇಗೆ ಕಳೆಯಿತೋ?

ಬದುಕಿನ ಮೊದಲ ಇಪ್ಪತ್ತೈದು ವರ್ಷದ್ದು ಒಂದು ತೂಕವಾದರೆ ಈ ವರ್ಷದ್ದೇ ಬೇರೊಂದು ತೂಕ. ಅದುವರೆಗೂ ಪಯಣಿಸುತ್ತಿದ್ದ ಹಾದಿಯನ್ನು ಅಚಾನಕ್ಕಾಗಿ ನಿರ್ದಾಕ್ಷಿಣ್ಯವಾಗಿ ನಿರರ್ಗಳವಾಗಿ ಬದಲಿಸಿಬಿಟ್ಟ ಕೀರ್ತಿ ಈ ವರ್ಷಕ್ಕೆ ಸಲ್ಲಬೇಕು. ಶುಭಾಶುಭಗಳನ್ನು ತೋಲಿಸಲು ಕುಳಿತಿಲ್ಲ. ಹೀಗೇ, ನೆನಪು ಮಾಡಿಕೊಳ್ಳುತ್ತಾ ಕುಳಿತಿದ್ದೇನಷ್ಟೆ.

ಕೊಡಗಿನ ಶಿಖರವು ಮುನ್ನುಡಿಯ ಬರೆದಿರಲು
ಸಂತಸದ ಹೊನ್ನ ಕನಲು
ಒಡಲಿನ ಶಕುತಿಯು ಮಸಣದಲಿ ನೆರೆದಿರಲು
ಚಿತ್ರಿಸಿದ ಶಾಂತ ಕಡಲು
ಕಣ್ಣೆದುರೆ ಭ್ರಾಂತ ಸುಡಲು.

ಮಿತಿಯಿರದೆ ಚಿತೆಗೊಂದರ ತಾ ಹಿಂದೊಂದು
ಶಿಕ್ಷಕನ ಮೊರೆಯೇನಿಹುದು?
ಬೆನ್ನ ಹಿಂದೆಯೇ ಬೆಳಗಿರಲು ಮೊನೆಕಡುಗವು
ರಕ್ಷಕನ ಪೊರೆಯೆಲ್ಲಿಹುದು?
ಈ ಬಾಳು ಧರೆಯಲ್ಲಿಹುದು!

ಗುರಿಯಿರದ ಮಿತಿಯಿರದ ಕಪ್ಪು ಆಗಸದಲಿ
ಭವ್ಯ ತಾರೆಯೊಂದು ಹೊಳೆದು
ಮದುವೆಗೊಮ್ಮೆ ಜನನಕಿನ್ನೊಮ್ಮೆ ಸೆಳೆಯುತ
ರುದ್ರಭೂಮಿಯೆಡೆಗೆ ಬೆಳೆದು
ಮಾಯವಾಯಿತೆಲ್ಲಿ ಕಳೆದು?

ಅಲೆದಾಟ ತೊಳಲಾಟ ಭೀತಿ ಬೀಭತ್ಸದಲಿ
ಶಾಂತಿ ಸಮರಸದಲಿ ನಡೆದು
ಕಂಗೆಡದೆ ಧೃತಿಗೆಡದೆ ಪ್ರೀತಿ ಈ ವಕ್ಷದಲಿ
ಅಪಜಯದ ವರವ ಪಡೆದು
ಶಿರಬಾಗಿ ಸೋಲಗೊಡದು.

ಮುಂದಿರದೆ ಸಕಾಲವು ಹಿಂದೆ ಕಳೆದಂತೆ?
ಮತ್ತೆ ಬೆಳಗದೆ ಗಗನವು ಚಿತ್ರಚಾಪದಿ?
ಬೂದಿ ಭಸ್ಮವೇ ಬಾಳು ಬಿದಿಯ ತಾಪದಿ?
ನಿಜಭ್ರಮೆಯು ಇದು ಬರಿಯೆ.
ಬದುಕೆಂದೂ ಬಲು ಸಿರಿಯೆ!

-ಅ
30.12.2008
9.25AM

8 comments:

  1. ಬದುಕು ಬರಿ ಭ್ರಮೆ ಅಲ್ಲ; ಇದು ನಿಜದ ಸಿರಿಯೇ ಸೈ!

    ReplyDelete
  2. [ಸುನಾಥ್] ಒಂದು ಪೂರ್ಣವಿರಾಮವನ್ನು ನಾನು "ಮಿಸ್" ಮಾಡಿದ್ದೆ. ಈಗ ತಿದ್ದಿದ್ದೀನಿ. ಕವನದ ತಾತ್ಪರ್ಯವೂ ನಿಮ್ಮ ಕಮೆಂಟೇ. ಧನ್ಯವಾದಗಳು..

    ReplyDelete
  3. I dont know what to say ... both of us are sailing in the same ship ... facing the same hurricane ... ninnashtu aashavada bartilla nange ... helkolokke naanu "hoplessly optimistic" ... and most of the times i am... ivattu yaako sikkapatte cynicism, adrinda pessimism aagide!
    hadagu ninnade, kadalu ninnade ... mulugadirali baduku ... anno haad nenpaagtide...
    ninna 25 varsha, nanna 30+ years(henmakkala vayassu helbaardalla adakke ;-) ) eradoo seridroo ee varshaddu bere ne thooka aagutte.

    ReplyDelete
  4. ಬದುಕೆಂದೂ ಬಲು ಸಿರಿಯೆ! -> :) ಸತ್ಯವಾದ ಮಾತು...

    ReplyDelete
  5. [ವಿಜಯಾ] ಒಳ್ಳೇ ತೂಕ! ಒಂಥರಾ ತುಲಾ ಭಾರ ಇದ್ದ ಹಾಗೆ!!

    ಈ ಪದಪ್ರಯೋಗ ಚೆನ್ನಾಗಿದೆ. "hoplessly optimistic".

    [ಅಂತರ್ವಾಣಿ] ಸತ್ಯ ಹೇಳಬೇಕು ನೋಡಿ ಯಾವಾಗಲೂ!! ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು!

    ReplyDelete
  6. Hu ... Rukmini haakdhaage ondu tulasi dala da korate ashte :-) ... yendamoori tulasi dala alla!!!!

    ReplyDelete
  7. ಪರಿಸರ ಪ್ರಮಿಗಳೇ,
    ಕವನ ಒಳ್ಳೆ ಹಿಡಿತದಲ್ಲಿದೆ. ಮತ್ತು ಅರ್ಥಗರ್ಭಿತವಾಗಿದೆ....
    ಹೊಸ ವರ್ಷದ ಶುಭಾಶಯಗಳು...

    ReplyDelete
  8. [ವಿಜಯಾ] ಯಂಡಮೂರಿ ಬಿಡು, RAM ಉಪಯೋಗಿಸಿಕೊಂಡು transformer ಕೆಲ್ಸ ಮಾಡ್ಸ್ತಾರೆ, ಜೀವಂತವಾಗಿ ಇರೋ ಪೇಷಂಟಿಗೆ autopsy ಮಾಡಿಸುತ್ತಾರೆ!!!

    [ಶಿವು] ಹೌದಾ?? ಥ್ಯಾಂಕ್ಸ್ ಸರ್..

    ReplyDelete