Friday, January 9, 2009

ಪ್ರೇಮರಾಗವನ್ನು ಕೇಳು

ಪ್ರೇಮರಾಗವನ್ನು ಕೇಳು
ಹಾಡುತಿರಲು ಎದೆಯ ದುಂಬಿ
ಪುಟ್ಟ ಹೃದಯವನ್ನು ತುಂಬಿ!

ಕೆಂಗುಲಾಬಿ ನೀನೆ ತಾನೆ?
ಅರಳಿ ನಿಂತ ಚೆಲುವನಂತ
ನಿನ್ನ ಮೊಗದಿ ನಿಜವಸಂತ!
ಪ್ರೇಮರಾಗವಾಯ್ತು ಕೇಳು
ಎದೆಯ ಗಣಿಯ ಚಿನ್ನವಿಂದು
ತುಟಿಯ ನಡುವೆ ಹೊಳೆಯಿತೆಂದು!

ನೊಂದ ಕಣ್ಣ ಹನಿಗಳಂತೆ
ಕುಸಿಯದಿರಲಿ ನೀನು ಧರೆಗೆ
ನಾನು ಹೋದರೇನು ಮರೆಗೆ?
ಪ್ರೇಮರಾಗವನ್ನು ಕೇಳು
ವಿರಹ ಗಗನವನ್ನೆ ದಾಟಿ
ಹುಟ್ಟಿಬರಲು ಏನು ಸಾಟಿ?

ತಣಿವ ಹಾದಿಯೊಳಗೆ ನಾನು
ದಣಿದು ಕೂರುವವನೆ? ಹೇಳು.
ನಿನ್ನ ಒಡನೆಯಿಹುದೆ ಬಾಳು!
ಹೃದಯದರಸಿ, ಪ್ರೇಮರಾಗ
ಇನಿದು ನೀನು ಜೊತೆಗೆ ಹಾಡೆ
ಕಣ್ಣು-ಕಣ್ಣು ಜೊತೆಗೆ ಕೂಡೆ!

ಬಾಳ ಹಂಬಲವನು ತರಲು
ನನಗೆ ನಿನ್ನ ಪ್ರೇಮನುಡಿಯು,
ಮೋಹಗೊಳಿಸುವಂಥ ನಡೆಯು,
ಕಣ್ಣನೋಟದಮೃತವುಣಿಸಿ
ಒಯ್ಯಲೆನ್ನನು ಪ್ರಣಯಕೆ
ಕೈಯ ಹಿಡಿದು ಹೊಸ ಪಯಣಕೆ!

ಹೃದಯದುಂಬಿ ಹಾಡುತಿಹುದು
ಪ್ರೇಮರಾಗವನ್ನು, ಕೇಳು.
ಇನಿದು ಸವಿಯು ನಮ್ಮ ಬಾಳು!

-ಅ
09.01.2009
2.40AM

11 comments:

 1. ಬೇಗ ಮದ್ವೆ ಆಗು ಮಾರಾಯಾ:)

  ReplyDelete
 2. idu BMW effect ansutte nange :-)

  ReplyDelete
 3. (ಶ್ರೀನಿಧಿಯವರೆ)ಪ್ರೇಮರಾಗವನ್ನು ಹಾಡುವದು ಮದುವೆಗೆ ಮೊದಲು ಮಾತ್ರ, ಅಲ್ಲವೆ? ಇಷ್ಟು ಚೆನ್ನಾಗಿ ಹಾಡುತ್ತಿದ್ದಾರೆ, ಇನ್ನೂ ಕೆಲ ದಿನ ಹಾಡಲಿ, ಬಿಡಿ.

  ReplyDelete
 4. ಬಾಳ ಹಂಬಲವನು -- ಈ ಚರಣದಲ್ಲಿ ಪ್ರೇಮರಾಗ ಪದವಿಲ್ಲ ಯಾಕೆ?

  ಮದುವೆ ಆಗುವ ಕಾಲ ಬಂದಿದೆ ಅಂತ ಹೇಳಿಕೊಳ್ಳುತ್ತಿದ್ದೀರಾ ಅರುಣ್?

  ReplyDelete
 5. 28-50 full swing nallide. tadeyoke aagtilla anta kaansutte.
  aaaaaaaaaaaaahhhhhhhaaaaaaaa

  ReplyDelete
 6. [ಸತ್ಯಪ್ರಕಾಶ್] ಹ್ಞೂಂ... 28-58 ಅಲ್ವಾ ಎಷ್ಟೇ ಆದ್ರೂ!!

  [ಅಂತರ್ವಾಣಿ] ಒಳ್ಳೇ ವಿಮರ್ಶೆ ನೋಡಿ ನಿಮ್ದು!! ಮದುವೆ ಕಾಲ ಬಂದ್ರೆ ಹೀಗ್ ಆಗುತ್ತಾ? ವಿನಾಶ ಕಾಲೇ ವಿಪರೀತ ಬುದ್ಧಿಃ ಅನ್ನೋ ಥರ.

  [ಲಕುಮಿ] ಡಿಟೋ ಶ್ರೀಧರನ ಕಮೆಂಟು.

  [ಶ್ರೀನಿಧಿ] ನಿಮ್ಮ ಮಾತಿನ "ಒಳ" ಅರ್ಥ ತಿಳಿಯಿತು ಬಿಡಿ... ಮದುವೆ ಆದಮೇಲೆ ಹೀಗೆಲ್ಲಾ ಎಲ್ಲಿ ಹಾಡೋಕೆ ಆಗುತ್ತೆ ಅಂತ ತಾನೆ? ;-)

  [ವಿಜಯಾ] ವಾಚಕರ ಹಿತದೃಷ್ಟಿಯಿಂದ ಈ ಒಂದು ಮೋಟುಗೋಡೆ ಶಬ್ದ ಪ್ರಯೋಗದ ವಿವರಣೆಯನ್ನು ನಾನೇ ಕೊಡುತ್ತೇನೆ. BMW = Baby Making Weather!! ಕರ್ಮಕಾಂಡ. ಈ ಹಾಡು ದೇವಾನಂದ್ ಎಫೆಕ್ಟು.

  [ಶ್ರೀನಿಧಿ] ಡಿಟೋ ಲಕುಮಿಗೆ ನಾನು ಮಾಡಿರೋ ಕಮೆಂಟು.

  ReplyDelete
 7. ಲೋ ಅಣ್ಣಾ, ನಿನ್ನ ಮದುವೆ ಸ್ವಲ್ಪ ಮುಂದೂಡಕ್ಕಾಗಲ್ವೇನೋ? ಮುಂದೂಡಿದ್ರೆ ಈ ಥರ ಕವನ ಇನ್ನೊಂದಷ್ಟು ಓದಕ್ಕೆ ಸಿಗತ್ತೆ ನಮ್ಗೆ!

  ಲಕುಮಿ - ಈಚೆಗೆ ಡಿಟ್ಟೋ ಜಾಸ್ತಿ ಆಯ್ತು ನಿಮ್ದು. ಅಲ್ಲ, ನಿಮಗೆ ಅತ್ಲಾಗೆ ಕಾಪಿ-ಪೇಸ್ಟ್ ಮಾಡಕ್ಕೂ ಸೋಮಾರಿತನ! ಅದಿಕ್ಕೆ ಡಿಟ್ಟೋ ಅನ್ನೋದು! (ಶ್ರೀಧರ ನಿಮಗಿಂತ ಎಷ್ಟೋ ವಾಸಿ ಬಿಡಿ! ಅಟ್ ಲೀಸ್ಟ್, ಕಾಪಿ-ಪೇಸ್ಟ್ ಆದರೂ ಮಾಡ್ತಾನೆ)... ಹಾಗಾಗಿ, ನಿಮಗೆ ಇವತ್ತಿಂದ ನಿಮ್ಗೆ ಹೊಸ ಹೆಸರು - "ಡಿಟ್ಟೋ".

  ReplyDelete
 8. ಸಿಕ್ಕಾಪಟ್ಟೆ ಇಷ್ಟ ಆಯ್ತು man ಈ ಕವನ... rather, ತರ್ಜುಮೆ?.. ಮೂಲ ಯಾವ ಹಾಡು ಅಂತ ಗೊತ್ತಾಗ್ಲಿಲ್ಲ... ಹಿಂದಿ ಹಾಡುಗಳು ತಿಳಿದಿರೋದು ಕಡಿಮೆ. ಆದರೂ ಈ ತರ್ಜುಮೆ ಓದಿ ಬಹಳ ಖುಷಿ ಆಯ್ತು. ನಿನ್ನ typical 5 liner ನೋಡಿ ಬಹಳ ದಿನ ಆಗಿತ್ತು.. ಇದು ಅರ್ಥಪೂರ್ಣವಾಗಿಯೂ ಇದೆ, ಛಂದೋಬದ್ಧವಾಗಿಯೂ ಇದೆ.. good good... ಹೀಗೇ ಬರೀತಾ ಇರು. :-)

  ReplyDelete
 9. thu thu... correction.. 5 liner alla. idu 6 liner-u :D sorry... mistake aaghoytu.

  ReplyDelete
 10. [ಗಂಭೇ] ಹೆ ಹ್ಹೆ ಹ್ಹೆ.. ಲೆಕ್ಕಾಚಾರ ಮಾಡೋದ್ ಕಲ್ತಿದ್ದೀಯ.. ಗುಡ್.. ;-)

  ಮತ್ತೆ, ಇದು ತರ್ಜುಮೆ ಅಲ್ಲ ಕಣಯ್ಯಾ, ಸುಮ್ನೆ ಒಂದು ಪ್ರೇರೇಪಣೆ ಅಷ್ಟೆ!! ಛಂದಸ್ಸಿನ ಬಗ್ಗೆ ಶ್ರೀಕಾಂತನಿಗೆ ಒಂದು ಥ್ಯಾಂಕ್ಸ್ ಹೇಳ್ಬೇಕು!

  [ಶ್ರೀಕಾಂತ್] ಮುಂದೂಡಿ ಕವನ ಬರಿ ಅಂತೀಯಾ??? :-)

  ReplyDelete