Friday, January 16, 2009

ಆನಂದ ಕೊಡುವ ಶೋಕಗೀತೆಗಳು

Zinda Hoon Is Tarah Ke Ghame Zindagi Nahin
Jalta Hua Diya Hoon Magar Roshni Nahin..

ಮೈ ಜುಮ್ಮೆನ್ನದೇ ಇರುತ್ತಾ?

ಮುಖೇಶನ ಹೊರೆತು ಇನ್ನಾರಿಗೆ ದೊರೆತೀತು ಇಂಥಾ ಹಾಡನ್ನು ಹಾಡುವ ಭಾಗ್ಯ!! ನಮಗಲ್ಲದೆ ಇನ್ನಾರಿಗೆ ದೊರೆತೀತು ಇದನ್ನು ಕೇಳುವ ಭಾಗ್ಯ!!

ಶೋಕಗೀತೆಗಳ ಜಾಯಮಾನವೇ ಹಾಗೆ, ಶೋಕರಸದಿಂದ ತುಂಬಿ ತುಳುಕುತ್ತಿದ್ದರೂ ಕೇಳಿದಾಗ ಮನಸ್ಸಿನ ಮೇಲೆ ಬೀರುವ ಪರಿಣಾಮವು ಆನಂದದಾಯಕವಾಗಿರುತ್ತೆ! ಏನ್ ಚೆನ್ನಾಗ್ ಬರ್ದಿದಾನೆ ಈ ಹಾಡನ್ನು ಎನ್ನುತ್ತೇವೆ!!

Barbaadiyon Ki Ajab Daastaan Hoon
Shabnam Bhi Roye Me Woh Aasmaan Hoon..

ಮುಖೇಶನ ಧ್ವನಿ ಶೋಕಗೀತೆಗಳಿಗೆ ಹೇಳಿ ಮಾಡಿಸಿದ್ದು ಎಂದು ಬಾಲಿವುಡ್ ತಜ್ಞರು ಅಭಿಪ್ರಾಯ ಪಡುತ್ತಾರೆ. ಇದನ್ನು ಸಮ್ಮತಿಸದವರು ಯಾರೂ ಇಲ್ಲ.

ಈಗಿನ ಹಾಡುಗಳಲ್ಲಿ ಶೋಕರಸವು ನಾಪತ್ತೆಯಾಗಿರುವುದು ಗೋಚರಿಸುತ್ತಾದರೂ "ಗೊಳೋ ಅನ್ನೋ ಹಾಡು ಯಾವನು ಕೇಳ್ತಾನೆ" ಎಂಬ ವಾದವನ್ನು ಈಗಿನವರು ಮುಂದಿಡುತ್ತಾರೆ. ಆದರೆ ಶೋಕಗೀತೆಯೆಂದ ಮಾತ್ರಕ್ಕೆ ಹಾಡು "ಗೊಳೋ" ಎನ್ನುವುದಿಲ್ಲ ಎಂಬ ಸತ್ಯವನ್ನು ಮರೆತಿರುತ್ತಾರೆ. ಆಗಿನವರ ಪದಜೋಡಣೆ, ಛಂದಸ್ಸು, ಗೀತರಚನೆ, ಸಂಗೀತ, ಹಾಡುಗಾರಿಕೆ ಈಗಿನವರಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲವೆಂಬುದು ನನ್ನ ದೃಢನಂಬಿಕೆ. ಅದು ಮತ್ತೆ ಬರಲಿ ಎಂಬ ಆಶಯ.

Tanhaayeee... Tanhaayee.. ಎಂದು ಸೋನು ನಿಗಮ್ ಹಾಡಿದರೆ ಅದು ಚೆನ್ನಾಗಿಲ್ಲವೆಂದೆನಿಸುವುದಿಲ್ಲ. ಚೆನ್ನಾಗೇ ಇದೆ. ಆದರೆ ಅದೇ ತನ್‍ಹಾಯೀ ಹಾಡು

Aankh Se Tapti Jo Chingaari
Har Aasoon Me Chabbi Tumhaari..

ಎಂಬ ರಫಿಯ ಹಾಡಿಗೆ ಸಾಟಿಯಾಗಬಲ್ಲುದೇ?

ಅಥವಾ

Aankh Bhar Aayi Agar
Ashkon Ko Mein Peeloonga
Aah Nikli Jo Kabhi
Hoton Ko Mein Seeloonga
Tujhse Waada Hai Kiya
Is Liye Mein Jeeloonga...

ಎಂಬ ಪವಿತ್ರ್ ಪಾಪಿ ಚಿತ್ರದ ಕಿಶೋರ್ ಹಾಡಿಗೆ ಹೋಲಿಕೆಯಾದೀತೆ??

ಮುಖೇಶನು ಶೋಕಗೀತೆಗಳ ರಾಜನೆಂಬುದನ್ನು ಒಪ್ಪಿಕೊಂಡರೂ ಸಹ, ರಫಿ ಮತ್ತು ಕಿಶೋರರೂ ಸಹ ಉಸ್ತಾದರು ಎಂಬುದು ಪರಮ ಸತ್ಯ.

Shaam Tanhaayi Ki Hai
Aayegi Manzil Kaise?
Jo Mujhe Raah Dikhaaye
Wohi Taara Na Raha..

ಈ ಗೀತೆಯನ್ನು ಕೇಳಿದವರ ಕಣ್ಣು ತೇವವಾಗದೇ ಇರದು!

ಲತಾ ಮಂಗೇಶ್ಕರ್ ಕೂಡ ಏನು ಕಮ್ಮಿಯಿಲ್ಲ. ಅರವತ್ತು ವರ್ಷಗಳ ಕಾಲ ಬಾಲಿವುಡ್ಡನ್ನು ಆಳಿದಾಕೆ!!

Rooth Gayi Re Sapne Saare
Toot Gayi Re Aasha
Nain Behre Ganga Moray
Phir Bhi Man Hai Pyaasa..

ಆಹ್.. ಬೇರೆಯವರ ಧ್ವನಿಯನ್ನು ಈ ಹಾಡಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆನ್ನಿಸುತ್ತೆ.

ಎಷ್ಟೋ ಬಾರಿ ಈ ಶೋಕಗೀತೆಗಳನ್ನು ಕೇಳುವಾಗ ಅನ್ನಿಸುತ್ತೆ, ಈ ಹಾಡನ್ನು ಹೇಗೆ ಬರೆದರು? ಬರೆಯಲು ಹೇಗೆ ಸಾಧ್ಯವಾಯಿತು? ಅವರ ಅನುಭವ ಎಂಥದ್ದಿರಬೇಕು?? ಅದಕ್ಕೆ ಇಷ್ಟು ಸೊಗಸಾದ ಜೀವ ಕೊಡಲು ಸಂಗೀತ ನಿರ್ದೇಶಕನ ಅನುಭವ ಎಂಥದ್ದಿರಬೇಕು? ಅದನ್ನು ಹಾಡಿದವನ ಅನುಭವ ಇನ್ನೆಂಥದ್ದಿರಬೇಕು??

Dil Ko Teri Hi Tamanna
Dil Ko Hai Tujhse Hi Pyaar
Chaahe Tu Aaye Na Aaye
Hum Karenge Intezar!!

ಕೇವಲ ಸಾಹಿತ್ಯ ಜ್ಞಾನದಿಂದ ಇಂಥಾ ಹಾಡುಗಳ ರಚನೆಯಾಗುವುದೇ? ಕೇವಲ ಸಂಗೀತ ಪರಿಣತಿಯಿಂದ ಇಂಥಾ ಅಮೋಘ ಸ್ವರ ಸಂಯೋಜನೆ ಸಾಧ್ಯವೇ? ಕೇವಲ ಹಾಡುಗಾರಿಕೆಯ ಅಭ್ಯಾಸದಿಂದ ಇಷ್ಟು ಚೆನ್ನಾಗಿ ಹಾಡಲು ಸಾಧ್ಯವೇ? ಆ ಬರೆಯುವ, ಆ ಸ್ವರ ಸಂಯೋಜಿಸುವ, ಆ ಹಾಡುವ ಹೃದಯದಲ್ಲಿ ನೋವಿಲ್ಲದೆ ಇದ್ದರೆ ಈ ಕೃತಿ ಸಾಧ್ಯವೇ ಇಲ್ಲವೆಂದು ದೃಢವಾಗಿ ನಂಬಿದ್ದೇನೆ.

Aake Zara Dekh Toh Teri Kaatir
Hum Kis Tarah Jeeye
Aasoon Ke Dhaage Se Seete Rahe Hum
Jo Zakhm Tu Ne Diye
Chaahat Ki Mehfil Me Gham Tera Lekar
Kismat Se Khela Jhua
Duniya Se Jeete Par Tujhse Haare
Yun Khel Apna Hua..

ಶ್ರೀಕಾಂತನು ಹಿಂದಿಯನ್ನು ಅರಿಯದಿದ್ದರೂ ಮುಖೇಶನ ಸಂಗೀತವನ್ನು ಆಸ್ವಾದಿಸುತ್ತಾನೆ. ಆ ಹಾಡಿನಲ್ಲೇ, ಆ ಧ್ವನಿಯಲ್ಲೇ, ಆ ಗೀತೆಯಲ್ಲೇ ಇರುವ ನೋವನ್ನು ತನ್ನದೆಂದು ಅನುಭವಿಸದಿದ್ದರೂ, ಅದಕ್ಕೆ ಸ್ಪಂದಿಸುತ್ತಾನೆ. ಇಂಥಾ ಸ್ಪಂದನವನ್ನುಂಟು ಮಾಡುವುದೇ ತಾನೆ ಸಂಗೀತದ ಉದ್ದಿಶ್ಯ?

Looto Na Mujhe Is Tarah
Do Raahe Pe Laake.. Do Raahe Pe Laake..
Aawaaz Na Do Ek Nayi
Raah Dikhaake.. Nayi Raah Dikhaake..
Sambhlaa Hoon Mein
Gir Girke Mujhe Phir Na Giraao..
Ab Chain Se Rehne Do
Mere Paas Na Aao
Bhuli Hui Yaadon
Mujhe Itna Na SataaO..

ಇಂಥಾ ಅದ್ಭುತ ಕೃತಿಯನ್ನು ನಿಸ್ಸಾರರು "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನೆಪೇ" ಎಂದಾಗಿಸಲಿಲ್ಲವೇ?

ಈ ಕೃತಿಗಳು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತೆಂದರೆ ಅತಿಶಯೋಕ್ತಿಯಲ್ಲ. ಆ ಪರಿಣಾಮವು ಆನಂದಮಯವಾಗಿರುತ್ತೆಂಬುದೂ ಅಷ್ಟೇ ಸತ್ಯ.

[ಕೃತಿಗಳ ರಚನಾಕಾರರಿಗೆ ಸಲ್ಲಬೇಕಾದ ಮನ್ನಣೆಯನ್ನು ನಾನು ಇಲ್ಲಿ ಗಾಯಕರಿಗೆ ಕೊಟ್ಟಿರುವುದು ಅಪರಾಧವಷ್ಟೆ. ಆದರೆ ಇದಕ್ಕೆ ಕಾರಣವಿದೆ. ನನ್ನನ್ನು ತಲುಪಿರುವುದು ಮುಖೇಶ್, ಕಿಶೋರ್, ರಫಿ, ಲತಾ, ಹೇಮಂತ್ ಕುಮಾರ್ - ಇವರುಗಳ ಧ್ವನಿಯು. ಇವರುಗಳ ಮೂಲಕ ಆ ಸಂಗೀತ ರಚನಾಕಾರರಿಗೆ, ಗೀತ ರಚನಾಕಾರರಿಗೆ ನಮಸ್ಕರಿಸುತ್ತೇನೆ. ಇಂಥಾ ಕರ್ತೃಗಳು ಮತ್ತೆ ಮತ್ತೆ ಹುಟ್ಟಿ ಬರಲಿ, ಸಂಗೀತ ಕದಿಯುವ ಅನು ಮಲ್ಲಿಕ್‍ನಂಥವರ ಜಾಗಕ್ಕೆ!]

-ಅ
16.01.2009
11.30PM

12 comments:

 1. ದುಖದಲ್ಲೂ ಒಂದು ಸುಖವಿದೆ ..

  ReplyDelete
 2. koi hota jisko apna hum apna kehlete yaaro
  paas nahin toh door bhi hota lekin koi mera apna...

  chingaari koi bhadke ...

  na koi umang hai, na koi tarang hai
  meri zindagi hain kya? ek kati patang hai

  shishaa ho ya dil ho aakhir toot jaata hai

  meri bheegi bheegi si ....

  ivella nanna top rated and most favourite shokageetegalu. "sikkaapatte busy" irovaaga idanna keLtirtini. neev list maadiro haadugaLa bagge gottirlilla. ivugaLa video orkut nalli haaki, illandre youtube link kalsi, naanu ettaakoLtini.

  ReplyDelete
 3. Jab darda nahin tha seene me,
  Tab khaak mazaa tha jeene me

  ಅನ್ನೋ ಕಿಶೋರ್ ಕುಮಾರ್ ಹಾಡು ನೆನಪಾಯ್ತು.
  ಬ್ಲಾಗ್ ತುಂಬಾ ಚೆನ್ನಾಗಿದೆ.

  ReplyDelete
 4. ಎಷ್ಟೆಲ್ಲಾ ಸುಂದರ ಶೋಕಗೀತೆಗಳನ್ನು ನೆನಪಿಸಿದಿರಿ;ಧನ್ಯವಾದ ನಿಮಗೆ.

  ReplyDelete
 5. [ಸಂದೀಪ್] ದುಃಖದಲ್ಲಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ದುಃಖಭರಿತ ಹಾಡುಗಳಲ್ಲಂತೂ ಇದೆ..

  [ಲಕುಮಿ] ಆಹ್ಹಾ, ನಾನು ಲಿಸ್ಟ್ ಮಾಡಿರೋ ಹಾಡುಗಳನ್ನು "ಸರ್ಚ್" ಮಾಡು, ಸಿಗಬಹುದು.

  [ಜ್ಯೋತಿ] ಒಳ್ಳೇ ಹಾಡು!! ಮತ್ತೆ ಧನ್ಯವಾದಗಳು ಕೂಡ.

  [ಸುನಾಥ್] ನಿಮಗೂ ಹೀಗೆ ಶೋಕಗೀತೆಗಳ ಶೋಕಿಯಿದೆಯೇ?

  ReplyDelete
 6. ಅರುಣ್ ಸಾರ್,

  ಶೋಕ ಗೀತೆಯಲ್ಲೂ ಒಂದು ಹಿತವಿದೆ..ಮತ್ತು ಚೆನ್ನಾಗಿವೆ...

  ಸಾರ್, ನನ್ನ ಬ್ಲಾಗಿನಲ್ಲಿ ಹೊಸದೊಂದು ಭಾವಪೂರ್ಣವಾದ ಲೇಖನವನ್ನು ಹಾಕಿದ್ದೇನೆ....ಬಿಡುವು ಮಾಡಿಕೊಂಡು ಬನ್ನಿ.....

  ReplyDelete
 7. ಎಂಥ ಒಳ್ಳೊಳ್ಳೆ ಹಾಡುಗಳನ್ನು ನೆನಪಿಸಿದ್ದೀರಾ, ಅರುಣ್! ದಕ್ಷಿಣದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಳೆಯ ಹಿಂದಿ ಹಾಡುಗಳನ್ನು ಕೇಳಿದವರು, ಕೇಳುವವರು ಕಡಿಮೆ. ಇಂದೇನಿದ್ದರೂ ’ಬಂಗಾರಿ ನೀ ಯಾರೇ ಬುಲ್‌ಬುಲ್..’, ’ಅಂತೂ ಇಂತೂ ಪ್ರೀತಿ ಬಂತು..’, ’ಆಕಾಶ ಇಷ್ಟೇ ಯಾಕಿದೆಯೋ..’ ಎಂಬಂಥ ಹಾಡುಗಳ ಕಾಲ. ನಿಮ್ಮ ಈ ಅಂಕಣವನ್ನು ಓದಿ ತುಂಬಾ ಸಂತೋಷವಾಯಿತು. ಓದುತ್ತಿದ್ದರೆ ಎನ್ನು ಎಷ್ಟೆಲ್ಲ ಹಾಡುಗಳು ನೆನಪಾಗುತ್ತಿವೆ.

  ’ವಕ್ತ ನೆ ಕಿಯಾ ಕ್ಯಾ ಹಸೀಂ ಸಿತಮ್, ತುಮ್ ರಹೇ ನ ತುಮ್, ಹಮ್ ರಹೇ ನ ಹಮ್’ ಎನ್ನುವ ಗೀತಾ ದತ್‌ಳ ಹಾಡು, ’ಜೋ ಪ್ಯಾರ ತೂನೆ ಮುಝ್ ಕೋ ದಿಯಾ ಥಾ, ಓ ಪ್ಯಾರ ತೇರಾ ಮೈಂ ಲೌಟಾ ರಹಾ ಹೂಂ..’ ಎನ್ನುವ ಮುಖೇಶ್ ಹಾಡು, ’ದಿಲ್ ಕೆ ಅರಮಾಂ ಆಂಸುವೊಂ ಮೆ ಬೆಹಗಯೇಮ್ ಹಮ್ ವಫಾ ಕರಕೇ ಭೀ ತನಹಾ ರೆಹಗಯೇ..’ ಎನ್ನುವ ಸಲ್ಮಾ ಆಘಾಳ ಹಾಡು, ’ಜಾನೆ ಓ ಕೈಸೆ ಲೋಗ್ ಥೆ ಜಿನ್ ಕೆ ಪ್ಯಾರ ಕೊ ಪ್ಯಾರ್ ಮಿಲಾ, ಹಮ್ ನೆ ತೊ ಜಬ್ ಕಲಿಯಾಂ ಮಾಂಗೀ ಕಾಂಟೊಂ ಕಾ ಹಾರ ಮಿಲಾ..’ ಎನ್ನುವ ಹೇಮಂತ್ ಕುಮಾರ್ ಹಾಡು..

  ಅಂದಹಾಗೆ ನೀವು ಗಜಲ್ ಕೇಳುತ್ತೀರಾ? ಶೋಕ, ಸಾಹಿತ್ಯ, ಸಂಗೀತ ಎಲ್ಲದರಲ್ಲೂ ಗಜಲ್‌ಗಳದ್ದು ಮೇಲುಗೈ. ಬೆಂಗಳೂರಿನಲ್ಲಿ ಒಳ್ಳೆಯ ಗಜಲ್‌ಗಳು ಸಿಗುವುದು ಅಪರೂಪ. www.artmap.wordpress.com ನಲ್ಲಿ ಗಜಲ್‌ಗಳ ಮತ್ತು ಹಳೆಯ ಹಾಡುಗಳನ್ನು ಒಳ್ಲೆಯ ಗುಣಮಟ್ಟದ aduio fileಗಳ ರೂಪದಲ್ಲಿ ಉಚಿತವಾಗಿ download ಮಾಡಬಹುದು. ಸುಮ್ಮನೆ ನಿಮಗೆ ಹೇಳೋಣ ಅನಿಸಿ ಹೇಳಿದೆ. ನಿಮ್ಮ ಓದುಗರಿಗೆ ಅನುಕೂಲವಾದರೆ ಇನ್ನೂ ಸಂತೋಷ.

  ಹೀಗೆಯೇ ಬರೆಯುತ್ತಿರಿ..

  ~ಪ್ರಸಾದ್

  ReplyDelete
 8. kahin door jab din dhal jaaye
  saanjh ke dulhan badan churaye
  chup ke se aaye ...

  ReplyDelete
 9. [ವಿಜಯಾ] jeene ko jeena chaahe, maangu toh maut na aaye.....

  [ಪ್ರಸಾದ್] ಬಹಳ ಒಳ್ಳೊಳ್ಳೆ ಗೀತೆಗಳನ್ನು ಸ್ಮರಿಸಿದಿರಿ. ನನಗೆ ರಫಿ ಮತ್ತು ಸೈಗಲ್ ಗಜಲ್‍ಗಳು ಇಷ್ಟವಾಗುತ್ತೆ. :-)

  [ಶಿವು] ಹೌದು. ಒಳ್ಳೇ ಹಿತ.

  ReplyDelete
 10. ಹಳೆಯ ಶೋಕ ಗೀತೆಗಳ ಮೆಲುಕು ಹಾಕುವುದೇ ಮನಸ್ಸಿಗೆ ಒಂದು ಮುದ ನೀಡತ್ತೆ,
  ಆ ಹಾಡುಗಳಿಗೆ ಕಾಲ, ದೇಶ, ಭಾಷೆಯ ಮಿತಿಯಿರುವುದಿಲ್ಲ..
  'ದಿಲ್ ಎಸಾ ಹಿಸಿನೆ ಮೆರಾ ತೊಡಾ', 'ದೋ ದಿಲ್ ಟೂಟೆ ದೋ ದಿಲ್ ಹಾರೆ', 'ದುನಿಯಾ ಬದಲ್ ಗಯಿ', 'ಗುಮ್ ನಾಮ್ ಹೈ ಕೊಯಿ', 'ಕಹಿ ದೀಪ್ ಜಲೆ ಹಕಿ ದಿಲ್', 'ಆಪ್ ಕಿ ನಜರೊನೆ ಸಮಝಾ ಪ್ಯಾರ್ ಕೆ ಕಾಬಿಲ್ ಹಮೆ', ಕನ್ನಡದಲ್ಲಿ - 'ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ', 'ನೀನೆಲ್ಲಿ ನಡೆವೆ ದೂರ', 'ಕಾಣದ ಊರಲಿ ನೀ ಕುಳಿತಿರುವೆ', 'ಬಾಡಿ ಹೋದ ಬಳ್ಳಿಯಲ್ಲಿ'.. ಬಿಡಿ ಹೇಳುತ್ತಾ ಹೋದರೆ, ನಿಮ್ಮ ಅಂಕಣ ಸಾಲುವುದಿಲ್ಲ :), ಯಾರ ಅಂಕಣವೂ ಸಾಲುವುದಿಲ್ಲ :)
  ನೀವು ನಿಸಾರ್ ಅವರ ಒಂದು ಹಾಡು ಪ್ರಸ್ತಾಪಿಸಿದ್ದೀರಿ, ಅವರ ಅದೇ ಕವನ ಸಂಕಲನದ ಮತ್ತೊಂದು ಗೀತೆಗೆ ತಲತ್ ಮೆಹಮೊದರ ಪ್ರೇರಣೆ ಹೀಗಿದೆ:

  फिर वहि शाम, वहि गम, वहि तन्हायी है
  दिल को समझाने तेरि याद चलि आयी है

  फिर कसम्बुर तेरे पेहलु मै बिठा जायेगा
  फिर गया वक्त घडी भर को पलट आयेग
  दिल बेहेर जायेग आखिर को तो सौदायि है

  जाने अब तुझ्से मुलाकात कभी हो के न हो
  जो अधूरि रहि वो बात कभी हो के न हो
  मेरि मन्जिल तेरि मन्जिल से बिचड आयी है

  ReplyDelete
 11. [ವಿನುತಾ] ಬಹಳ ಉತ್ತಮವಾದ ಹಾಡುಗಳನ್ನು ನೆನಪು ಮಾಡಿದಿರಿ. "ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ..." ಯಾರು ತಾನೆ ಮರೆಯಲಾದೀತು?

  dil aisa kisine mera toda... ಈ ಹಾಡನ್ನು ಒಂದು ಕಾಲದಲ್ಲಿ ದಿನಕ್ಕೆ ಹದಿನೈದು ಸಲ ಕೇಳುತ್ತಿದ್ದೆ. ಇದರ ಜೊತೆಗೆ koi hota jisko apna...

  ReplyDelete
 12. ಒಳ್ಳೇ ಅಭಿಪ್ರಾಯವನ್ನ ಹಂಚಿಕೊಂಡಿದ್ದೀರ.. ಓದಿ ಖುಷಿಯಾಯ್ತು..
  ಒಂಥರಾ ಮೂಡಲ್ಲಿದ್ದಾಗ ಈ ಶೋಕಗೀತೆಗಳು ತುಂಬಾನೆ ಇಷ್ಟ ಆಗ್ತವೆ..

  "ಕಣ್ಣೀರ ಧಾರೆ.. ಇದೇಕೆ..? ಇದೇಕೆ..? "

  ಈ ಹಾಡು ನಂಗಿಷ್ಟ..

  ReplyDelete