Thursday, February 5, 2009

ನರ-ಸಿಂಹ ಯುದ್ಧಮ್ - ಒಂದು ಪ್ರೇಮದ ಕಥೆ

ರಾಜಕೀಯಕ್ಕೂ ನನಗೂ ಮೈಲಿಗಟ್ಟಲೆ ದೂರವೆಂದು ಗೊತ್ತಿದ್ದೂ ನನಗೊಂದು ಪಾತ್ರವನ್ನು ಕೊಟ್ಟಿದ್ದಾರೆ "ಮೈಂಡ್-ಡ್ರೈ" ಚಾನೆಲ್ಲಿನವರು! ರಾಜಕೀಯದಲ್ಲೂ ಪ್ರೇಮಕಥೆಯುಂಟು. ರಾಜಕೀಯ ಪ್ರೇಮಕಥೆಯಲ್ಲೂ ಹಾಸ್ಯವುಂಟು. ಹಾಸ್ಯದಲ್ಲಿ ನರ-ಸಿಂಹ ಯುದ್ಧವುಂಟು.

ನಾನೆಂದೂ ಸ್ಟೇಜನ್ನೇರಿದವನಲ್ಲ. ಸ್ಕೂಲಿನಲ್ಲಿ ಮಾಡಿದ ಅಕ್ಬರನ ಪಾತ್ರವೊಂದನ್ನು ಹೊರೆತು ಪಡಿಸಿ, ನಾಟಕ ಬೂಟಕ ಎಲ್ಲವನ್ನೂ ನಾನು ಪ್ರೇಕ್ಷಕನಾಗೇ ಸವಿದಿದ್ದೇನೆ. ಈ ಬಾರಿ ನನ್ನ ರಂಗಪ್ರವೇಶವಾಗಲಿದೆ. ನೋಡಬೇಕು, ಮೊದಲೇ ಮರೆಗುಳಿ ಮನುಜನಾದ ನಾನು ಹಾಸ್ಯವನ್ನು ಮಾಡುತ್ತೇನೋ ನಾನೇ ಹಾಸ್ಯವಾಗುತ್ತೇನೋ ಎಂಬ ಭೀತಿಯೂ ಒಮ್ಮೊಮ್ಮೆ ಕಾಡುತ್ತಿರುತ್ತೆ ನನ್ನನ್ನು. ಸಾವಿನ ಭೀತಿಗಿಂತ ಸ್ಟೇಜಿನ ಭೀತಿ ಅತಿ ಕ್ರೂರಿಯೆಂದು ಹಿರಿಯ ಕಲಾವಿದರೊಬ್ಬರು ಹೇಳಿದ್ದಾರಂತೆ.

ಕೆಲವು ತಿಂಗಳುಗಳ ಹಿಂದೆ ವಿಚಿತ್ರಮಂಜರಿಯೆಂಬ ನಗೆ ನಾಟಕದ ಮೂಲಕ ರಂಗ ಪ್ರವೇಶ ಮಾಡಿದ "ಮೈಂಡ್-ಡ್ರೈ" ಜೊತೆಗೆ ನಾನೂ ಇರಬೇಕಿತ್ತು. ಅದೇ ವೇಳೆಯಲ್ಲಿ ತೀರ ವಯಕ್ತಿಕ ಕಾರಣವಿದ್ದಿದ್ದರಿಂದ ನಾನು ಎರಡನೆಯ ಪ್ರಯತ್ನದಲ್ಲಿ ಕೈಗೂಡಿಸಿದ್ದೇನೆ.

ವಿಚಿತ್ರಮಂಜರಿಯ ಮೊದಲ ಪ್ರಯತ್ನ ಮುಗಿದ ನಂತರ "ನಾಟಕ ಹೇಗಾಯ್ತು?" ಎಂದು ಹರೀಶರನ್ನು ಕೇಳಿದೆ. "ಚೆನ್ನಾಗಾಯ್ತು ಅನ್ಸುತ್ತೆ, ನಾವು ಜೋಕ್ ಎಂದುಕೊಂಡ ಕಡೆಯೆಲ್ಲ ಜನ ನಕ್ರು. ಸೋ, ಚೆನ್ನಾಗಿತ್ತು ಎನ್ನಿಸುತ್ತೆ" ಎಂದು ಪ್ರಾಮಾಣಿಕವಾಗಿ ಹೇಳಿದರು. ಇನ್ನು ಅರ್ಜುನ್ ಶರ್ಮಾ ಅವರು "ಮುಂದಿನ ನಾಟಕಕ್ಕೆ ಸಿದ್ಧವಾಗಬೇಕಪ್ಪಾ" ಎಂದು ಹೇಳಿದಾಗ ಅವರ ಹುಮ್ಮಸ್ಸನ್ನು ಕಂಡು ಖುಷಿಯಾಯಿತು. ದೊಡ್ಡದಾಗಿ "ನಾನೂ ಇರ್ತೀನಿ.." ಎಂದು ಏನೋ ಒಳ್ಳೇ ಧೀರನ ಹಾಗೆ ಅಭಯವಿತ್ತೆ!

ಈ "ನರ-ಸಿಂಹ ಯುದ್ಧಮ್" ಬಗ್ಗೆ ಹೆಚ್ಚು ಬರೆಯುವುದಿಲ್ಲ. ನನಗೆ ಗೊತ್ತು, ನೋಡಿದವರು ಬರೆದೇ ಬರೆಯುತ್ತಾರೆಂದು, ಒಳಿತನ್ನು ಬರೆಯುವಂತಿರಲೆಂದು ಆಶಿಸುತ್ತೇನಷ್ಟೆ. ಅಭ್ಯಾಸ, ಪ್ರಯತ್ನ ಎರಡನ್ನೂ ಪ್ರಾಮಾಣಿಕವಾಗಿ ಮಾಡಿ ಯುದ್ಧದ ರಣರಂಗಕ್ಕಿಳಿಯುತ್ತಿದ್ದೇವೆ. ಪ್ರೋತ್ಸಾಹವನ್ನು ನೀಡಲು ಬಂಧು ಮಿತ್ರರ ಕೈಗಳು ಸಿದ್ಧವಾಗಿರುವಂತೆ, ಸ್ವೀಕರಿಸಲು ನಮ್ಮ ಬೆನ್ನುಗಳೂ ಸಿದ್ಧ! ಟಿಕೆಟ್ಟು ನಮ್ಮ ಗುಂಪಿನವರೆಲ್ಲರ ಹತ್ತಿರವೂ ಪಡೆದುಕೊಳ್ಳಬಹುದು. ಆರಂಭಿಕ "ಕಲಾವಿದ"ರಾಗಿರುವ, ಮುಂದೆ ಕಲಾವಿದರಾಗ ಹೊರಟಿರುವ ನಾವು ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಮುಂದಿನ ಭಾನುವಾರ ಸಂಜೆ 6.15ಗೆ (ಹತ್ತು ನಿಮಿಷ ಮುಂಚೆಯೇ ಬಂದರೊಳಿತು), ಯುದ್ಧದ ಕಹಳೆ ಮೊಳಗಲಿದೆ. ಪ್ರೇಕ್ಷಕರು ನೀವು!ನನ್ನ ದೂರವಾಣಿ ಸಂಖ್ಯೆ: 98864-17252

ನಾನು ಶಾಲಾ ಮೇಷ್ಟ್ರಾದ ಕಾರಣ ಶಾಲೆಯ ಅವಧಿಯಲ್ಲಿ ಕರೆ ಮಾಡಿದರೆ ನಾನು ಉತ್ತರಿಸಲಾಗುವುದಿಲ್ಲ. ಫೋನ್ ಮಾಡಿ ಎಂದುಬಿಟ್ಟು, ಫೋನ್ ಎತ್ತದೇ ಇರುವ ನನ್ನ ಕುಕೃತ್ಯಕ್ಕೆ ಶಾಪ ಹಾಕುವುದರ ಬದಲು ನಮ್ಮ "ಮಂಡ್-ಡ್ರೈ" ತಂಡದ ಇತರರಿಗೆ ಕರೆ ಮಾಡಿದರೆ ಉತ್ತರ ಸಿಗುವುದು ಸುಲಭಸಾಧ್ಯವಾದೀತು!

ಹರೀಶ್: 99001-28840
ಅರ್ಜುನ್: 98867-03164

ಒಂದೇ ಒಂದು ಮಾತು. ಉದ್ಧಟತನವೆನ್ನಿಸಿದರೆ.......

ಏನೂ ಮಾಡೋಕಾಗಲ್ಲ.

ಟಿಕೆಟುಗಳನ್ನು ಮುಗಿದು ಹೋಗುವ ಮುನ್ನ ಪಡೆದುಕೊಳ್ಳಬೇಕಾಗಿ ವಿನಂತಿಯಷ್ಟೆ..

ಇಂತು

ಪ್ರೋತ್ಸಾಹಾರ್ಥಿ

-ಅ
05.02.2009
7PM

13 comments:

 1. ನಾನು ಬರುತ್ತಿದ್ದೇನೆ ...ಯುದ್ಧ ನೋಡಕ್ಕೆ ! :) all the best for all of you!

  ReplyDelete
 2. Good luck!
  ಮುಂದೆ ಕಲಾವಿದರಾಗ ಹೊರಟಿರುವ ನಾವು ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಮುಂದಿನ ಭಾನುವಾರ ಸಂಜೆ 6.15ಗೆ (ಹತ್ತು ನಿಮಿಷ ಮುಂಚೆಯೇ ಬಂದರೊಳಿತು), ಯುದ್ಧದ ಕಹಳೆ ಮೊಳಗಲಿದೆ. ... yaako sentence saree hoglilla.

  ReplyDelete
 3. mindry -ಇದನ್ನ ನಾವು ಬೇರೆ ತರನೇ ಓದಿಕೊಳ್ತಾ ಇದ್ವಿ ಇಷ್ಟು ದಿನ :)

  ನಾಟಕ ಚೆನ್ನಾಗಾಗ್ಲಿ..

  ReplyDelete
 4. ಎಲ್ಲದಕ್ಕೂ ಪ್ರಾರಂಭವನ್ನುವುದಿರಲೇಬೇಕು. ಪ್ರಯತ್ನ ನಿಮ್ಮದು ಫಲಾನುಫಲ ಪ್ರೇಕ್ಷಕ ದೇವರುಗಳದ್ದು :)
  ಶುಭವಾಗಲಿ, ನಾಟಕಕ್ಕೆ ಯಶಸ್ಸು ಸಿಗಲಿ.

  ReplyDelete
 5. ಅರುಣ್ ಸರ್,

  good luck, all the best....

  ReplyDelete
 6. ಶುಭವಾಗಲಿ ಗೆಳೆಯ, ನಾನಂದು ನಿನ್ನ ಪರಾಕ್ರಮ ನೋಡಲು ಇರುವುದಿಲ್ಲ:(

  ReplyDelete
 7. raMga pravEsha maaDalu horaTiddeera.. oLLedaagali :)

  All the Best.

  ReplyDelete
 8. nan first bench yaaaaaaakoooo nEtaaaaDtaa ide... :-D
  rijarv aagide..
  kaalaaaya tasmai namaha!!
  degrees kooDiddre nim haasya paraakrama noDo bhaagya nandu! :-)

  Aaaaaaaaall the best meshtreeeeee...
  neevu haasya aagi... "comedy joDi" anta namge title koDodalla... neevuuu comedy aagi ;-)

  show shuuuuuuperrr shupkii bombaaaat aagli!!
  :-) :-)

  ReplyDelete
 9. nan first bench yaaaaaaakoooo nEtaaaaDtaa ide... :-D
  rijarv aagide..
  kaalaaaya tasmai namaha!!
  degrees kooDiddre nim haasya paraakrama noDo bhaagya nandu! :-)

  Aaaaaaaaall the best meshtreeeeee...
  neevu haasya aagi... "comedy joDi" anta namge title koDodalla... neevuuu comedy aagi ;-)

  show shuuuuuuperrr shupkii bombaaaat aagli!!
  :-) :-)

  ReplyDelete
 10. ellarigoo dhanyavaadagaLu... naatakakke banni... :-)

  ReplyDelete