Tuesday, March 17, 2009

ಎಂದಿಗೆ?

ಕಾಮದಹನದ ಕಿಚ್ಚನಾರಿಸೆ
ಯಾಮದಿರುಳಲಿ ಧೋ ಎನ್ನುತ
ಭೂಮಿಗಿಳಿದಿಹ ಮಳೆಯ ಸ್ಪರ್ಶಕೆ
ಸೋಮನಡಗಿಹ ಮೇಘಪರದೆಯು
ಸರಿವುದೆಂದಿಗೆ ಬಾನಲಿ?

ಬೇಸಗೆಯ ಕಿರಣ ಹೊದಿಕೆಯ
ನೇಸರನು ಹೊದ್ದಿಸಿದ್ದರೂ
ಬೇಸರದ ಇರುಳ ಖಗಗಳು
ಆಸರೆಯ ಪೊದೆಯ ಮೊರೆಯನು
ತೊರೆವುದೆಂದಿಗೆ ಬದುಕಲಿ?

ನೀರ ಪತನವೊ,
ಕ್ಷೀರ ಮಥನವೊ?
ತೀರ ಸೇರುವ ಬಯಕೆಯೊ?
ದಾರಿ ಮುಳುಗಿದ, ವಾರಿ ಜಗದಲಿ
ಈಜಿ ಬದುಕುವುದೆಂದಿಗೆ?

-ಅ
17.03.2009
10.30PM

5 comments:

  1. ಅರುಣ್ ನಮಸ್ಕಾರ,
    ನಿಮ್ಮ ಬ್ಲಾಗ್ಗೆ ಬೇಟಿ ಹೊಸತೇನಲ್ಲ ಅನಿಸಿಕೆ ಮಾತ್ರ ಮೊದಲಬಾರಿ, ನಿಮ್ಮ ಬ್ಲಾಗ್ ಮಲ್ನಾಡ್ ಮೂಲಕ ದೊರೆಯಿತು.
    ಅದ್ಭುತ ಕವನ ಒಳ್ಳೆಯ ಕವನ ಕೊಟ್ಟಿದಕ್ಕೆ ಧನ್ಯವಾದಗಳು..

    ReplyDelete
  2. taaLme anta ondu shabda idyante kannadadalli...adara bagge naanu tiLkotidini, neevu nanna gurugaLaaddarinda adanna neevoo tiLkoLo prayatna maadi :)

    ReplyDelete
  3. ಅರುಣ,
    ಉತ್ತಮವಾದ ಕವನ.

    ReplyDelete
  4. Beauty of poetry is maximized when it is written in such a way that the reader can relate to it... maybe in his own way, which could be very different from what the poet was feeling when he wrote.

    nanna bhaavanegalige neenu pada jodsiro haagide ... beautiful.

    ReplyDelete
  5. [ವಿಜಯಾ] ನೀನು ಬರೆದಿರೋ ಕವನ ನನಗೆ ಬೇರೆಯದೇ ರೀತೀಲಿ ಅರ್ಥವಾಗುತ್ತಲ್ಲ ಹಾಗೆ. ಈಗ, for example, ಲಕುಮಿಗೆ ಈ ಕವನ ಬೇರೆಯದೇ ರೀತೀಲಿ ಅರ್ಥವಾಗಿದೆಯೆಂಬುದು ಆಕೆಯ ಕಮೆಂಟಿನಲ್ಲಿ ತಿಳಿಯುತ್ತೆ. :-)

    ನಿನ್ನ ಭಾವಕೆನ್ನ ಪದವು
    ಬೆರೆತರದುವೆ ಕವನ ಹದವು!

    (ಒಳ್ಳೇ ಟೀ ಮಾಡೋ ವಿಧಾನದ ಹಾಗಿದೆ ಮೇಲಿನ ಸಾಲು)

    [ಸುನಾಥ್] ಧನ್ಯವಾದಗಳು ಸರ್.

    [ಲಕುಮಿ] ಸರಿ.

    [ಮನಸು] ಯಾಕೊ ತುಂಬಾನೇ ಹೊಗಳಿದ್ದೀರ. ಆದ್ರೂ ಥ್ಯಾಂಕ್ಸ್ ಹೇಳ್ತೀನಿ, ಇವ್ರೇ... ;-) ನಿಮ್ ಬ್ಲಾಗು ಕೂಡ ಸಕ್ಕತಾಗಿದೆ.. :-)

    ReplyDelete