Friday, March 20, 2009

ರಿಕ್‍ವೈರ್‍ಮೆಂಟು!

ನಾನು ಸುಮ್ಮನೆ ಚಾರಣ ಮಾಡೋದು, ಪ್ರಯಾಣ ಮಾಡೋದು ಬಿಟ್ಟು ಊರೆಲ್ಲ ಹೇಳ್ಕೊಂಡು ತಿರುಗೋದು ಯಾಕೆ ಅಂತ ನನಗೆ ಅನೇಕ ಸಲ ಅನ್ನಿಸುತ್ತಿರುತ್ತೆ. ಆರ್‍.ಹೆಚ್.ಎಮ್ ಆದರೋ ಇಂಥದ್ದೇ ಕೆಲಸ ಮಾಡಿ ಅನ್ನವನ್ನು ದುಡಿಯುತ್ತಿರುವುದರಿಂದ "ಊರೆಲ್ಲ" ಹೇಳುವುದು ಅದರ ಧರ್ಮ. ಆದರೆ ಈ ಧರ್ಮದ ಸಲುವಾಗಿ ನಾನು ಅನುಭವಿಸಬೇಕಾದ ಕರ್ಮಗಳೂ ಒಂದಷ್ಟಿವೆ.

ನಮ್ಮ ಆರ್.ಹೆಚ್.ಎಮ್. ಧರ್ಮಕ್ಕೆ ಒಗ್ಗದವರು ಹಲವರು ತಾವೇ ಪ್ರಯಾಣ ಮಾಡಲು ಇಚ್ಛಿಸುತ್ತಾರೆ. ಹಣವನ್ನು ಉಳಿತಾಯ ಮಾಡುವುದು ಇವರ ಇರಾದೆಯಿದೆಯೆಂದು ನಾನು ಒಪ್ಪುವುದಿಲ್ಲ. ಕಾಡಲ್ಲಿ ಸಿಗರೇಟು ಸೇದಬಾರದು, ಕುಡೀಬಾರದು ಎಂದು ಹೇಳಿದರೆ ಈ ಸೋ-ಕಾಲ್ಡ್ "ಟ್ರಾವಲರ್ಸ್"ಗೆ ಬೇಸರವಾಗಿ "ಇವನ್ಯಾವನೋ ತಗಡು ಆರ್ಗನೈಸರ್ರು. ಮಜ ಮಾಡೋಕೆ ಪರ್ಮಿಷನ್ನ್ ಇಲ್ಲದೇ ಇದ್ರೆ ಇವನಿಗ್ಯಾಕೆ ದುಡ್ ಕೊಡ್ಬೇಕು?" ಎಂದು ಜರಿಯುವುದುಂಟು. ಇಂಥವರು ನನಗೆ ಬೇಡವೂ ಬೇಡ. ಇನ್ನೊಂದು ಬಗೆಯ ಜನರಿದ್ದಾರೆ. ಇವರು ಯಾವುದೇ ಸಂಸ್ಥೆಯ ಮೇಲೂ ಅವಲಂಬಿಸುವುದಿಲ್ಲ. ಹೀಗೆ ಬ್ಲಾಗುಗಳಲ್ಲೋ, ವೆಬ್‍ಸೈಟುಗಳಲ್ಲೋ, ಪತ್ರಿಕೆಗಳಲ್ಲೋ ಹುಡುಕಿ ನಿಜವಾದ ಗ್ರೌಂಡ್ ವರ್ಕ್ ಮಾಡಿ, ತಿಳಿದವರನ್ನು ಕೇಳಿ - ಎಲ್ಲಿ ಯಾರನ್ನು ಸಂಪರ್ಕಿಸಬೇಕು ಎಂದು ಅರಿತುಕೊಂಡು ಪ್ರಯಾಣ ಮಾಡುತ್ತಾರೆ. ನನಗೂ ಇಂಥವರಿಂದ ಕರೆಗಳು ಬರುತ್ತೆ, ಮತ್ತು ನಾನೂ ಸಹ ಇಂಥ ಕ್ಯಾಟಗರಿಗೇ ಸೇರಿದವನಾದ್ದರಿಂದ ನನಗಿಂತ ತಿಳಿದವರನ್ನು ಈ ವಿಷಯವಾಗಿ ಸಂಪರ್ಕಿಸುತ್ತಲೇ ಇರುತ್ತೇನೆ.

ಮೂರನೆಯ ಪೈಕಿ ಜನ ವಿಭಿನ್ನರು. ಇವರಿಗೆ ಪ್ರಯಾಣ ಬೇಕು. ಸಂಸ್ಥೆಗಳು ಬೇಡ. ಆದರೆ ತಾವೇ ಆಯೋಜಿಸಲು ತಿಳಿವಳಿಕೆಯಿರುವುದಿಲ್ಲ. ಇಂಥವರಿಗೆ ಒಳ್ಳೊಳ್ಳೇ ರಿಕ್‍ವೈರ್‍ಮೆಂಟುಗಳು ಇರುತ್ತೆ. ಬಹಳ ವಿನೋದಮಯವಾದ ರಿಕ್‍ವೈರ್‍ಮೆಂಟುಗಳು. ಇವರ ಫೋನುಕಾಲುಗಳೂ ಕೂಡ!!

......................................................................................

"ಅರುಣ್, ನಿಮ್ ಬಗ್ಗೆ ಇಂಟರ್ನೆಟ್‍ನಲ್ಲಿ ನೋಡಿದೆ. ನಾವೊಂದಿಷ್ಟು ಜನ "ವೀಕೆಂಡಿಗೆ" ಹೊರಗಡೆ ಹೋಗ್ಬೇಕು ಅಂತಿದೀವಿ."

"ಸರಿ, ಹೋಗಿಪ್ಪ, ಸಂತೋಷ." (ಹರಿಯೋ ನದಿಗೆ ದೊಣ್ಣೆನಾಯಕನ ಅಪ್ಪಣೆ ಬೇರೆ!)

"ಎಲ್ಲಿ ಹೋದರೆ ಒಳ್ಳೇದು ಅಂತ ಸ್ವಲ್ಪ ಹೇಳ್ತೀರ?"

"ಅರ್ರೆ? ನೀವು ಹೋಗೋರು? ನಾನ್ ಹೇಗೆ ಹೇಳಲಿ ಯಾವುದು ಒಳ್ಳೇದು ಅಂತ?"

"ನೀವು ಟ್ರೆಕ್ಕಿಂಗ್ ಎಲ್ಲ ಆಯೋಜಿಸ್ತೀರಲ್ಲ, ನಿಮಗೆ ಜಾಗಗಳು ಗೊತ್ತಿರುತ್ತೆ. ಒಂದಷ್ಟು ಜಾಗಗಳನ್ನು ನನ್ನ ಈಮೇಲ್‍ಗೆ ಕಳಿಸಿ. ನಾವು ಸೆಲೆಕ್ಟ್ ಮಾಡ್ಕೋತೀವಿ."

"ಓಕೆ."

......................................................................................

ಅನ್ನ ಕಲಿಸಿ ತುತ್ತನ್ನು ಬಾಯಿಗೆ ಕೂಡ ಇಡಬೇಕೇನೋ. ಔಟ್‍ಲುಕ್ಕಿನವರು "52 Getaway Destinations from Bangalore" ಎಂಬ ಪುಸ್ತಕವನ್ನು ಇಂಥವರಿಗೆಂದೇ ತಂದಿರಬೇಕು. ಆದರೂ ಅತೃಪ್ತರು.

ಮತ್ತೊಬ್ಬರ ಕರೆ ಹೀಗಿತ್ತು.

"Am I speaking to Arun?"

"ಹೌದು, ಹೇಳಿ."

"What is the charge for Bababudangiri Trek?"

"We are not organising that trek, right now."

"But I saw that in your website 3 months back. Why don't you give correct information to the people?"

"I am busy now, please call me after half an hour please."

ಮೂರು ತಿಂಗಳುಗಳ ಕೆಳಗೆ ನೋಡಿದ ಕಾರ್ಯಕ್ರಮವನ್ನು ಈಗ ವಿಚಾರಿಸಿದರೆ ನಾನು ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾಗದು. ದಬಾಯಿಸೋದು ಬೇರೆ.

......................................................................................

ಬೇರೆ ಊರಿನಿಂದ ಬೆಂಗಳೂರಿಗೆ ಬಂದವರ ರಿಕ್‍ವೈರ್‍ಮೆಂಟ್ ಹಾವಳಿ ಅಷ್ಟಿಷ್ಟಲ್ಲ.

"Arun, please suggest any place to spend the weekend?"

"Go to Kemmangundi."

"ಬೆಂಗ್ಳೂರ್ ಇಂದ ಎರಡು ಗಂಟೆಗಳೊಳಗೆ ತಲುಪುವಂತಹ ಜಾಗ ಇರಬೇಕು."

"ಹಾಗಾದ್ರೆ, ಈ ಬೇಸಿಗೆಯಲ್ಲಿ, ಮುತ್ತತ್ತಿಗೆ ಹೋಗಿ."

"ಹೋಗಿದೀವಿ ಮುಂಚೇನೆ."

"ಕೋಲಾರದ ಅಂತರಗಂಗೆಗೆ ಹೋಗಿ."

"ನಮಗೆ Waterfalls ಬೇಕು."

"ಓಹ್. ಮತ್ತೆ ಇನ್ನೇನೇನು ಬೇಕು?"

"ಹೆಚ್ಚಿಗೆ ಟ್ರೆಕ್ ಬೇಡ. ಸಿಂಪಲ್ ಆಗಿರಬೇಕು. ಬಂಡೆ ಇರಬಾರದು. ಬಿಸಿಲು ಇರಬಾರದು. ಜಲಪಾತ ಇರಬೇಕು. ಕಡೇಪಕ್ಷ ಹೊಳೆಯಾದರೂ ಇರಬೇಕು. ಹತ್ತಿರದಲ್ಲಿ ಪ್ರಾಚೀನ ದೇವಸ್ಥಾನಗಳಿದ್ದರೆ ಇನ್ನೂ ಒಳ್ಳೆಯದು. ಬೆಂಗಳೂರಿಂದ ತುಂಬ ದೂರ ಇರಬಾರದು. ನೂರು ಕಿಲೋಮೀಟರ್ ಒಳಗಿರಬೇಕು."

"ಚೆನ್ನಾಗಿದೆ. Natureಗೆ application ಹಾಕ್ತೀನಿ. Sanction ಮಾಡಿದರೆ ನೋಡೋಣ."

.......................................................................................

ಒಬ್ಬ ಉತ್ತರ ಭಾರತೀಯನಿಗೆ ಒಂದು ಚಾರಣದ ಬಗ್ಗೆ ಫೋನಿನಲ್ಲಿ ವಿವರಿಸುತ್ತಿದ್ದೆ. ಆತ ಕೇಳಿದ ಪ್ರಶ್ನೆಗೆ ನಾನು ಕಂಗಾಲಾಗಿ ಹೋದೆ.

ನಾನು ಹೇಳುತ್ತಿದ್ದೆ - ".... And we will reach the peak by around 12.30PM and have our lunch on the peak..."

ಆತ ಥಟ್ಟನೆ ಕೇಳಿದ್ದು - "Are there good hygienic restaurants on the peak?"

!!!!!!!!!!!!!!!!!!!!!!!!!!!!

.......................................................................................

ಇಂಥಾ ಫೋನ್‍ಕಾಲುಗಳು ಆ ಕ್ಷಣ ಬೇಸರ ತರಿಸಿದರೂ ನಂತರ ನೆನಪು ಮಾಡಿಕೊಳ್ಳಲು ಬಹಳ ಹಾಸ್ಯಮಯವಾಗಿರುತ್ತೆ.

ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಚಾರಣ ಮಾಡಬೇಕು, ಮಳೆ ಇಲ್ಲದ ಜಾಗವನ್ನು ಸಜೆಸ್ಟ್ ಮಾಡಿ
- ಚಾರಣ ಗೀರಣ ಎಲ್ಲ ಮರೆತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯೊಳಗೆ ಸೆಟ್ಲ್ ಆಗಿ.

ಜಾಸ್ತಿ ಜನ ಇರಬಾರದು, ಜಾಸ್ತಿ ದೂರ ಇರಬಾರದು ಆ ರೀತಿ ಯಾವುದಾದರೂ ಅಪರೂಪದ ಜಲಪಾತಕ್ಕೆ ಹೋಗಬೇಕು, ಯಾವುದಿದೆ?
- ಜಲಪಾತ ಇಲ್ಲ. ಆದರೆ ನೀರು ಹರಿಯುವ ಜಾಗ ಇದೆ. ಕೆಂಗೇರಿಯ ಹತ್ತಿರ.

ನಂದಿ ಬೆಟ್ಟ ಬೇಡ, ಇನ್ನೂ ಹತ್ತಿರದಲ್ಲೇ ಸುಮಾರು ಅರ್ಧ ಗಂಟೆಯೊಳಗೆ ತಲುಪುವಂತಹ ಜಾಗದಲ್ಲೆಲ್ಲಾದರೂ ಪ್ಯಾರಾಗ್ಲೈಡಿಂಗ್ ಆಯೋಜಿಸುತ್ತೀರ?
- ನಿಮ್ಮ ಮನೆ ಮೇಲಿಂದ ರೆಕ್ಕೆ ಕಟ್ಕೊಂಡ್ ಧುಮುಕಿ.

ಬೆಂಗ್ಳೂರ್ ಸಿಟಿಯಲ್ಲಿ ಎಲ್ಲಿ ರಿವರ್ ರಾಫ್ಟಿಂಗ್ ಮಾಡಿದರೆ ಚೆನ್ನಾಗಿರುತ್ತೆ?
- ಮೇಲಿನವರ ಜೊತೆ ಕೆಂಗೇರಿಗೆ ಹೋಗಿ. ಪ್ರಯತ್ನ ಮಾಡಿ ರಾಫ್ಟಿಂಗ್ ಹೇಗಿರುತ್ತೆ ಅಂತ. ನನಗೂ ಹೇಳಿ.

ನಂಗೆ ರಾಕ್ ಕ್ಲೈಂಬಿಂಗ್ ಇಷ್ಟ. ಆದರೆ ಬಂಡೆಗಳು ಇರುವ ಕಡೆ ಚಾರಣ ಆಗೋದಿಲ್ಲ. ಆರ್ಟಿಫಿಷಿಯಲ್ ಕ್ಲೈಂಬಿಂಗ್ ಬೇಡ. ಎಲ್ಲಿಗೆ ಹೋಗಲಿ?
- ರಾಗಿ ಗುಡ್ಡಕ್ಕೆ ಹೋಗಿ.

ಹೀಗೆಲ್ಲ ಉತ್ತರ ಕೊಡಬೇಕು ಇಂಥ ಪ್ರಶ್ನೆಗಳಿಗೆ ಎಂದೆನಿಸುತ್ತೆ. ಆದರೆ ತುಟಿಬಿಗಿದು ಉತ್ತರ ಕೊಡುವುದೂ ಸಹ ನನ್ನ ಧರ್ಮ. ಪಾಪ, ಅವರಿಗೆ ತಿಳಿದಿರುವುದಿಲ್ಲ ಎಂಬ ಕನಿಕರವೊಂದು ಕಡೆಯಾದರೆ, ಏನು ಅಷ್ಟು ಸಾಮಾನ್ಯ ಜ್ಞಾನವಿರುವುದಿಲ್ಲವೇ ಎಂಬ ಕೋಪವಿನ್ನೊಂದು ಕಡೆ. ನನ್ನ ಮೂಡು ಕೆಟ್ಟಿದ್ದರೆ ಈ ರೀತಿ ಉತ್ತರ ಕೊಟ್ಟರೂ ಕೊಟ್ಟೇನು!

-ಅ
20.03.2009
11PM

18 comments:

 1. ಜಾಸ್ತಿ ಜನ ಇರಬಾರದು, ಜಾಸ್ತಿ ದೂರ ಇರಬಾರದು ಆ ರೀತಿ ಯಾವುದಾದರೂ ಅಪರೂಪದ ಜಲಪಾತಕ್ಕೆ ಹೋಗಬೇಕು, ಯಾವುದಿದೆ?
  - ಜಲಪಾತ ಇಲ್ಲ. ಆದರೆ ನೀರು ಹರಿಯುವ ಜಾಗ ಇದೆ. ಕೆಂಗೇರಿಯ ಹತ್ತಿರ.

  innoo nagtaaa ideeni idanna nodi..,sudhaariskondu amele matte bandu detail aagi comment haakteeni.

  BTW jasti green agiro, kammi male baro 2 betta beku next weekend hottige. Parcel sigatta?

  ReplyDelete
 2. kelavondu prashengalu amayakatanada paramavadhi .. aparatri office nalli obbane nagta iddeeni ... :)

  ReplyDelete
 3. ನಂಗೆ ರಾಕ್ ಕ್ಲೈಂಬಿಂಗ್ ಇಷ್ಟ. ಆದರೆ ಬಂಡೆಗಳು ಇರುವ ಕಡೆ ಚಾರಣ ಆಗೋದಿಲ್ಲ. ಆರ್ಟಿಫಿಷಿಯಲ್ ಕ್ಲೈಂಬಿಂಗ್ ಬೇಡ. ಎಲ್ಲಿಗೆ ಹೋಗಲಿ?
  - ರಾಗಿ ಗುಡ್ಡಕ್ಕೆ ಹೋಗಿ.

  ಹೆಹೆ....ಇಂಥವರಿಗೆ ಅದು ಕಷ್ಟ ಗುರುಗಳೇ...ನೀವು ತಬ್ಬಾಂಜನೇಯನ ಗುಡ್ಡಕ್ಕೆ ಹೋಗಿ ಅಂತ ಹೇಳ್ಬೇಕಿತ್ತು ! :) :)

  ಕಾಫಿ ಕುಡಿತಾ ಓದ್ತಿದ್ದೆ..ಮೂರ್ ಸರ್ತಿ ಕಾಫಿ ಚೆಲ್ಲೋಯ್ತು ಲೋಟದಿಂದ !!! ಮುಂದಿನ ಪ್ರಣತಿ ಮೀಟಿಂಗ್ ನಲ್ಲಿ ನೀವೆ ಮೂರು ಕಾಫಿ ಕೊಡಿಸ್ಬೇಕು !!

  ReplyDelete
 4. ಅರುಣ್,
  ನಿಮ್ಮ ಅನಿಸಿಕೆಗಳೇನೋ ಸರಿ, ಅವರಿಗೆ ಬೇಕಾದ ರೀತಿ ಸ್ಥಳ ಸೃಷ್ಟಿಸಲಾಗದು ಬಿಡಿ... ನಿಮ್ಮ ಈ ವಿಮರ್ಶೆ ಮೊಗದಲ್ಲಿ ನಗೆಯಾಡಿಸಿದೆ... ಹ ಹ ಹ ಆದರೆ ಆ ಮಾತು ಕೇಳಿದಾಗ ನಿಮಗೆ ಆದ ಅನುಭವವೇ ಬೇರೆ ಇರುತ್ತೆ ಅಲ್ಲವೇ?
  ಮನುಷ್ಯನಿಗೆ ಇರುವುದಕ್ಕಿಂತ ಇಲ್ಲದನ್ನು ಹುಡುಕೋದು ಜಾಸ್ತಿ..
  ಒಳ್ಳೆಯ ವಿಚಾರ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..
  ವಂದನೆಗಳು..

  ReplyDelete
 5. This comment has been removed by the author.

  ReplyDelete
 6. he he he ... idanna odi, nin computer services kelsa maadtiddaga bardid article nenpaaytu :-).

  ReplyDelete
 7. he he he he..... was imagining if we open a call center for RHM customers and we make you ans them.... we may get more and more funny questions and witty ans from you....

  ReplyDelete
 8. Good observation arun, Common sense ilde common aagi kelo question galu ivella.

  ReplyDelete
 9. ha ha.. chanagirattalwa ee thara maat keLskoLo experience-u.....;-)

  ReplyDelete
 10. [ಭವ್ಯಾ] ಹೌದು, ಒಳ್ಳೇ ಮಜ ಇರುತ್ತೆ. ಆದರೆ ಮೂಡು ಕೆಟ್ಟಿದ್ದರೆ ಫೋನು ಕುಕ್ಕೋಣ ಅನ್ಸುತ್ತೆ.

  [ಸುನಿಲ್] ಏನ್ ಕಾಮನ್ ಸೆನ್ಸೋ ಏನೋ.

  [ಸುಬ್ಬು] ರೀ.. ಯಾಕ್ರೀ ಈ ಸೇಡು??

  [ಅನಂತ] :-)

  [ವಿಜಯಾ] ಸುಬ್ಬು ಹೇಳಿದ ಹಾಗೆ ನಾನು ಕಾಲ್ ಸೆಂಟರ್ ಕೆಲಸ ಮಾಡಿದರೆ ಇನ್ನಷ್ಟು ವಿಷಯಗಳು ಹೊಳೆಯುತ್ತಿತ್ತೇನೋ.

  [ಮನಸು] ಇಲ್ಲದೆ ಇರುವುದನ್ನು ಹುಡುಕುವುದೆಂದಲ್ಲ, ತನ್ನ ಎಲ್ಲೆಯನ್ನು ಮೀರುವ ಆಸೆಯಷ್ಟೆ. ಏನ್ ಮಾಡೋದು, we are after all humans...

  [ಲಕುಮಿ] ಅದ್ಯಾರು ತಬ್ಬಾಂಜನೇಯ, ಹೊಸಬ? ನಿನ್ನ ಕಾಫಿಗೆ ನೀನೇ ಜವಾಬ್ದಾರಳು, ಅಥವಾ ಆ ನಿನ್ನ ತಬ್ಬಾಂಜನೇಯ.

  (ಬೈ ದಿ ವೇ, ಬಹಳ ಅಶ್ಲೀಲವಾಗಿದೆ ಹೆಸರು, ತಬ್ಬಾಂಜನೇಯ ಅನ್ನೋದು.)

  [ಟಿ.ಜಿ.] :-)

  [ಹರ್ಷ] ಎಂಥಾ ಪರಮಾವಧಿ?

  [ಸತ್ಯಪ್ರಕಾಶ್] ಹೆ ಹ್ಹೆ, ಥ್ಯಾಂಕ್ಸ್.

  [ಸುಶೀಲ್] ಅಯ್ಯೋ, ಸ್ಟಾಕ್ ಇಲ್ಲ ಸರ್...

  ReplyDelete
 11. "Natureಗೆ application ಹಾಕ್ತೀನಿ. Sanction ಮಾಡಿದರೆ ನೋಡೋಣ"
  lol :D

  ReplyDelete