Thursday, April 2, 2009

ಕೆಟ್ಟ ಕನಸು

"ಕೆಟ್ಟ ಕನಸು!" ಮುಗಿಯಿತೆಂದು
ಮರೆತುಬಿಡಲಿ ಹೇಗೆ?
ಹಗೆಯ ವಿಷವು ಕೊಲುವ ಬಡಿಗೆ
ಕಡಲಿನೊಳಗೆ ಅನಲನವಿತು
ಸುಡುತಲಿರಲು ಬೇಗೆ.

ಕನಸು ಹಗೆಯು ಮುಗಿವುದೊಂದೆ
ಚಣದಿ - ಅರಿತಿರುವೆನು;
ಕೆಂಪು ಕಣ್ಣು ಮುಚ್ಚಿದಾಗ!
ಹೊಳೆವ ನಯನವರಳಿದಾಗ
ಪ್ರೀತಿವೃಷ್ಟಿಗರೆದು!

ಹಗೆಯು ಒಲವು ಎರಡು ಕನಸೆ?
ಕೆಟ್ಟದೊಂದು ಒಳಿತಿ-
ನ್ನೊಂದು - ಈ ರೀತಿಯೇಕೆ?
ಭ್ರಮೆಯಲ್ಲ ಬದುಕು ತಾನೆ?
ಮುಗಿವುದೆಂದು ನಟನೆ?

ಮಾನಾವಮಾನಗಳನ್ನು
ಲೆಕ್ಕಿಸಿಲ್ಲ ಮನಸು.
ಬಿಸಿಲು ಮಳೆಯು ಮತ್ತೆ ಮತ್ತೆ
ಇಳೆಗೆ ಸುರಿದು ನಡೆಸುವಂತೆ
ಮುಗಿಯಲಿಲ್ಲ ಕನಸು.
ಅದುವೆ "ಕೆಟ್ಟ ಕನಸು"!
ತೀರದಂಥ ಬಯಕೆ ಹೊತ್ತು
ನಡೆವುದಷ್ಟೆ ನನಸು!

-ಅ
02.04.2009
7.40PM

7 comments:

  1. ಶಹಭಾಸ್ ಅರುಣ!
    ನಿಮ್ಮ ಜೀವನದರ್ಶನವನ್ನು ಮೆಚ್ಚಿದೆ.

    ReplyDelete
  2. ತೀರದಂಥ ಬಯಕೆ ಹೊತ್ತು
    ನಡೆವುದಷ್ಟೆ ನನಸು!

    whistle !!!!!!!!!!!!!!!!!!!!!!!!!!!

    sakkat poem..nange artha aaytu :)

    ReplyDelete
  3. ಮುಗಿವುದೆಂದು ನಟನೆ?

    nice.. :')

    ReplyDelete
  4. well written ... hmm ... meaning ... i could relate to it :-)

    ReplyDelete
  5. Oh really a Great Kanasu...
    ತೀರದಂಥ ಬಯಕೆ ಹೊತ್ತು
    ನಡೆವುದಷ್ಟೆ ನನಸು!.........wonderfulllllll ending.....thnx for beautiful kavana...i appreciate you!!

    Keep writing

    ReplyDelete
  6. [ಮನಸು] ಧನ್ಯವಾದಗಳು ಕಣ್ರೀ. ನಂಗೇನೋ "ಕೆಟ್ಟ" ಕನಸೆಲ್ಲ ಅಷ್ಟು ಗ್ರೇಟ್ ಅನ್ಸಲ್ಲ ನೋಡಿ...

    [ವಿಜಯಾ] ನೀನು ತುಂಬಾ ಬ್ರಿಲಿಯೆಂಟ್ಸು!

    [ಭೀಮ್-ಬಾಯ್] ಒಳ್ಳೇ ಪಂಡರೀಬಾಯ್ ಥರ ಇದೆ ಹೆಸರು.

    [ಲಕುಮಿ] ಅರ್ಥವಾಯಿತೇ? ಎಲ್ಲಿ ಹೇಳು ನೋಡೋಣ????

    [ಸುನಾಥ್] ಧನ್ಯವಾದಗಳು ಸುನಾಥ್ ಅವರೇ.. ನೋಡ್ಬೇಕು ಇನ್ನೂ ಏನೇನು ದರ್ಶನವಾಗಲಿದೆಯೋ....

    ReplyDelete
  7. meshtreee... keT kansu yaak kaaNteera??
    bombaataagi oLLe kansu mansu nansu ankoLod biTTu eno ket kansu, naDyodasTe nansu ankonDidaare.... ahaahaa


    keT kansgaLgellaaa goli hoDdu, masssssssssst [nan tone alli] enjoy maaDi...

    (hehehe.. nim "Ok.. sari... hmm.. replies ge nandu recomment kooDa ille haaktideeni..!)
    --> kamma kammaaa!!!!!

    ReplyDelete