Thursday, May 7, 2009

ಕಚೇರಿ

'ಕಚೇರಿ' ಸರಿಯೋ 'ಕಛೇರಿ' ಸರಿಯೋ ಅಷ್ಟಾಗಿ ಗೊತ್ತಿಲ್ಲ. ನನಗೆ 'ಕಚೇರಿ'ಯು ಶ್ಲಾಘನೀಯವಾಗಿದೆ. ನಾನು ಇಲ್ಲಿ ಹೇಳ ಹೊರಟಿರುವುದು ಸಂಗೀತ ಕಚೇರಿಯ ಬಗ್ಗೆ.

ನನ್ನಂತೆ ಅನೇಕರಿಗೆ ಸಂಗೀತದ ಕಾರ್ಯಕ್ರಮಗಳನ್ನು ಎಲ್ಲೆಂದರಲ್ಲಿ ನಡೆಸುವುದರ ಬಗ್ಗೆ ಅಸಮಾಧಾನವಿದೆ. ಅದರಲ್ಲೂ ಮದುವೆ ಮನೆಗಳಲ್ಲಿ ಸಂಗೀತದ ಕಚೇರಿಯನ್ನಿಟ್ಟುಕೊಳ್ಳುವುದು ನ್ಯಾಯವೇ ಎಂದೆನಿಸುತ್ತಿರುತ್ತೆ. ವಿದ್ವಾಂಸರಿಗೆ, ವಿದ್ವತ್ತಿಗೆ, ವಿದ್ಯೆಗೆ, ಮತ್ತು ಸಂಗೀತಕ್ಕೆ ಅನೇಕ ಸಲ ಇಂಥಾ ಕಡೆ ಅನ್ಯಾಯ, ಅವಮಾನ ಮಾಡಿದ ಹಾಗೆ ಆಗುತ್ತೆ ಎಂದೂ ಸಹ ಅನ್ನಿಸುತ್ತೆ.

"ಖಂಡಿತ ಮದುವೆಗೆ ಬರಬೇಕು, ಕಾಸರವಳ್ಳಿ ಸಿಸ್ಟರ್ಸ್ - ರೂಪ-ದೀಪ ಅವರ ಕಚೇರಿ ಇಟ್ಕೊಂಡ್ ಇದ್ದೀವಿ" ಎಂದು ಮನೆಗೆ ಬಂದು ಅತಿಥಿಯೊಬ್ಬರು ಕರೆದರು. ಮದುವೆಗೆ ಬರುವ ಎಷ್ಟು ಜನ ರೂಪ-ದೀಪ ಸಂಗೀತ ಕೇಳಲೆಂದು ಬರುತ್ತಾರೆ? ಹಾಗೆ ಸಂಗೀತ ಕೇಳಲೆಂದೇ ಬಂದರೆ ಮದುವೆಯ ಮಂಟಪವು ಕೇವಲ ನೆಪವಾದೀತಷ್ಟೆ? ಎರಡರಲ್ಲಿ ಒಂದಕ್ಕೆ ಮಾತ್ರ ನ್ಯಾಯ ಸಲ್ಲಿಸಬಹುದಲ್ಲವೆ? ಅಗ್ಗದ ತರ್ಕವೆನ್ನಿಸುತ್ತಿದೆ.

'ಸಂಗೀತ'ವೆನ್ನುವುದನ್ನು ಎರಡು ರೀತಿ 'ಬಳಸಿ'ಕೊಳ್ಳಲಾಗುತ್ತಿದೆ. (೧) ವಿದ್ಯೆ, ಸಾಧನೆ (೨) ಮನರಂಜನೆ. ಮನರಂಜನೆಗಾಗಿ ಸಂಗೀತವನ್ನು, ಅದರಲ್ಲೂ ಶಾಸ್ತ್ರೀಯ ಸಂಗೀತವನ್ನು 'ಬಳಸಿ'ಕೊಳ್ಳುವವರ ಬಗ್ಗೆ ಸಂಗೀತದ ಪಾವಿತ್ರ್ಯತೆಯನ್ನು ಆರಾಧಿಸುವವರು ಅಸಮಾಧಾನ ವ್ಯಕ್ತಪಡಿಸುವುದುಂಟು. ಹಾಗೆಂದ ಮಾತ್ರಕ್ಕೆ ಮನರಂಜನೆ ನೀಡುವ ಸಂಗೀತಗಾರರಿಗೆ ಸಂಗೀತದ ಬಗ್ಗೆ ಗೌರವವಿಲ್ಲವೆಂದಲ್ಲ. ಹಾಗೆ ನೋಡಿದರೆ, ಅವರುಗಳಿಗಿಂತ ಈ ಮನರಂಜನಾಕಾರರಿಗೇ ಹೆಚ್ಚು ಗೌರವವಿರಬಹುದು, ಯಾಕೆಂದರೆ, ಅನೇಕ ಸಲ ಇಂಥವರಿಗೆ ಸಂಗೀತ ಅನ್ನವನ್ನು ನೀಡುತ್ತಿರುತ್ತೆ.

ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ಕಚೇರಿಯನ್ನು ಕೇಳುವವರು ಯಾರು? "ನಿಮ್ಮ ಪಾಡಿಗೆ ನೀವು ಹಾಡಿ" ಎಂದು ಜನರೆಲ್ಲರೂ ತಂತಮ್ಮ ಹರಟೆಗಳಲ್ಲೋ, ಕೆಲಸ ಕಾರ್ಯಗಳಲ್ಲೋ ತೊಡಗಿಕೊಂಡಿರುತ್ತಾರೆ. ಹಾಡುಗಾರರೋ (ಅಥವಾ ಇನ್ಯಾವುದಾದರೂ ಸಂಗೀತ ವಾದ್ಯದವರೋ) 'ಆರಂಕುಸವಿಟ್ಟೊಡಂ' ಹಾಡುತ್ತಲೇ ಇರುತ್ತಾರೆ. ಅವರ ಮನೋಭಾವನೆಯು 'ಎಲ್ಲ ಕೇಳಲಿಯೆಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ..' ಎಂದೇ ಇರಬಹುದು. ಆದರೂ ಕೆಲವರು ಹಾಡು ಅರ್ಥವಾಗುತ್ತೋ ಇಲ್ಲವೋ ತಲೆದೂಗುತ್ತಲೇ ತಪ್ಪು ತಪ್ಪಾಗಿಯೇ ತಾಳ ಹಾಕುತ್ತಲೇ 'ಎಂಜಾಯ್' ಮಾಡುತ್ತಿರುತ್ತಾರೆ. ದೂರದರ್ಶನ, ರೇಡಿಯೋಗಳಲ್ಲಿ ಕೇಳಿರುವ ವಾತಾಪಿ, ರಘುವಂಶಸುಧಾ, ನಗುಮೋಮು, ಮೋಕ್ಷಮು ಗಲದಾ ಇವೆಲ್ಲ ಹಾಡಿಬಿಟ್ಟರೆ ತಾವೂ ವಿದ್ವಾಂಸರಂತೆಯೇ ದನಿಗೂಡಿಸುತ್ತಿರುತ್ತಾರೆ. ಒಟ್ಟಿನಲ್ಲಿ ಮುದಗೊಳ್ಳುತ್ತಾರೆ. ಮದುವೆಯ ಗಿಜಿಗಿಜಿಯು ಸಂಗೀತದ ಕಂಪನಗಳೊಂದಿಗೆ ಬೆರೆತುಕೊಂಡುಬಿಟ್ಟಿರುತ್ತೆ.

ಮೇಲೆ ಹೇಳಿದ ಎರಡು ರೀತಿ ಸಂಗೀತವನ್ನು 'ಬಳಸಿ'ಕೊಳ್ಳುವವರನ್ನು ಹೊರತುಪಡಿಸುವ ಇನ್ನೊಂದು ಗುಂಪೂ ಇದೆ. ಇವರಿಗೆ ಸಾಧನೆಯು ಮುಖ್ಯ. ಆದರೆ ಆ ಸಾಧನೆಗೆ ಇಂಥ ಕಚೇರಿಗಳು ಮೆಟ್ಟಿಲುಗಳಾಗಿರುತ್ತವೆ. ಅವರು ಮನರಂಜನೆ ನೀಡುವ ಉದ್ದಿಶ್ಯದಿಂದಿರುವುದಿಲ್ಲ. ತಮ್ಮ renderings-ನಿಂದ ಮನರಂಜನೆ ಸಿಕ್ಕರೆ ಒಳ್ಳೆಯದಷ್ಟೆ. ಶಾಸ್ತ್ರೀಯ ಸಂಗೀತ ಅರ್ಥವಾಗದೆ ಇರುವವರಿಗೆ 'ಕಾಮಾಕ್ಷಿ ಅಂಬಾ..., ರಾಮಕಥಾಸುಧಾ, ಕನಕನರುಚಿರಾ..' ಇವೆಲ್ಲ ಬೇಸರ ತಂದು ನೀರಸವೆನ್ನಿಸಬಹುದು. ನಿದ್ದೆಯೂ ತರಿಸಬಹುದು. ಆದರೆ ಸಂಗೀತಗಾರನ ಪ್ರಯೋಗವು, ಸಾಧನೆಯು ಶ್ರೋತೃವಿನ ಬಯಕೆಗಳನ್ನು ಅವಲಂಬಿಸಿರುವಂಥದ್ದಲ್ಲ, ಬದಲಿಗೆ ಶ್ರೋತೃವಿನ ಜ್ಞಾನವನ್ನು ಅವಲಂಬಿಸಿರುವುದು.

ನನ್ನ ತಾಯಿಯನ್ನೂ ಸೇರಿಸಿ ಅನೇಕ ಸಂಗೀತಗಾರರು ನಮ್ಮಲ್ಲಿ ಪಾಠ ಹೇಳಿಕೊಟ್ಟು ಕಚೇರಿಗಳನ್ನು ಕೊಡುವವರಾಗಿರುತ್ತಾರೆ. ಅಂಥವರ ಪಾಲಿಗೆ ಸಂಗೀತವು ಸರ್ವಸ್ವ. ಅನ್ನದಾತೆ. ಮದುವೆ ಮನೆ ಕಚೇರಿಗಳು ಇಂಥಾ ವಿದ್ವಾಂಸರುಗಳಿಗೆ ಮತ್ತವರ ಸಾಧನೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತೆಂಬುದು ಅವರ ಅಂಬೋಣ. ಜೊತೆಗೆ ಒಂದಷ್ಟು ಹಣವೂ ಸಿಗುತ್ತೆ. ಪೇಯ್ಡ್ ಪ್ರ್ಯಾಕ್ಟೀಸ್! ಕೆಲಕಾಲ ನಾನು ಇಂಥ ಕಚೇರಿಗಳನ್ನು ನಾನು ಖಂಡಿಸುತ್ತಿದ್ದೆ. ಈಗ ಅವುಗಳ ಬಗ್ಗೆ ನನಗೆ ಕಿಂಚಿತ್ತೂ ತಕರಾರಿಲ್ಲ. 'ಕೇಳುವವರಿಹರೆಂದು ನಾ ಬಲ್ಲೆನದರಿಂದ...'.

ವಿ.ಸೂ.: ಕಾಮತ್ ಬ್ಯೂಗಲ್ ರಾಕಿನಲ್ಲಿ ಪ್ರತಿದಿನವೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಾರೆ. ಊಟ ಮಾಡುವ ಜಾಗದಲ್ಲಿ, ಅದರಲ್ಲೂ ಹೋಟೆಲಿನಂಥ ವಾತಾವರಣದಲ್ಲಿ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳಿರುವುದು ಅನೇಕರಿಗೆ ಸರಿ ಕಾಣಿಸದಿದ್ದರೂ, ಅದೊಂದು ಸುಸಂಸ್ಕೃತ ಪರಿಸರವನ್ನು ಸೃಷ್ಟಿಸುತ್ತೆಂದು ಹಲವರ ನಂಬಿಕೆ. ನಾನೇ ಗಮನಿಸಿರುವ ಹಾಗೆ ಅಲ್ಲಿನ ಅಡುಗೆ ಮನೆಯವರು, ಅನ್ನ ಬಡಿಸುವವರೂ, ಕೊನೆಗೆ ಎಲೆಯೆತ್ತುವವರೂ ಸಹ ಅನೇಕಾನೇಕ ದಿನಗಳಿಂದ ಸಂಗೀತವನ್ನು ಕೇಳಿ ಕೇಳಿ ಕೆಲವು ಕೀರ್ತನೆಗಳನ್ನು ಕಲಿತುಬಿಟ್ಟಿದ್ದಾರೆ! ಗೊತ್ತಿರುವ ಕೃತಿಯೇನಾದರೂ ಹಾಡಿದರೆ ಅವರೂ ಸಹ ಬಾಯಿ ಆಡಿಸುತ್ತಾರೆ! ತಾಳ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ!!

-ಅ
07.05.2009
7.45PM

7 comments:

 1. ಮದುವೆ ಮನೇಲಿ ಸಂಗೀತ ಮದುವೆಯ ಒಂದು ಭಾಗ ಅಲ್ವ? ಓಲಗದ ಕಚೇರಿ ಯಾವಾಗಲೂ ಇದ್ದೇ ಇರುತ್ತಲ್ಲ ನಮ್ಮಲ್ಲಿ? ಬೇರೆ ಜನಗಳಲ್ಲೂ ಒಂದಲ್ಲ ಒಂದು ರೀತಿ ಸಂಗೀತ ಮದುವೆ ಮನೇಲಿ definiteಆಗಿ ಇರುತ್ತೆ :-).

  ReplyDelete
 2. yaako eno ee article complete alla ansthu...hmmm

  ReplyDelete
 3. ಮದುವೆಯಂಥ ಸಮಾರಂಭಗಳಲ್ಲಿ ಎದೆ ತುಂಬಿ ಹಾಡೋರು ಇರಬಹುದೇನೋ; ಆದರೆ ಮನಸ್ಸು ತುಂಬಿ ಹಾಡೋರು ಇರೋದು ನಂಗೇನೋ ಸಂಶಯ.

  ಶ್ರೀಧರ - ನನಗೆ ’ಶ್ರೋತೃ’ ಪದ ಓದಿ ಪರಮಾನಂದ ಆಯಿತು. ನಿಂಗೂ ಆಯಿತಾ? ಮತ್ತೊಂದು ವಿಷಯ: ಈ ರೀತಿ "article complete alla" ಅನ್ನಿಸುವುದು "Animal Behaviour" ಅಂತ ಪ್ರಖ್ಯಾತ ಪಶುತಜ್ಞೆ ದಿವ್ಯಾ ಅವರು ಅವರ ಬ್ಲಾಗಿನಲ್ಲಿ ಬರೀತಾರೆ. ಈ ವಿಚಾರ ನೀನು ಸ್ವಲ್ಪ ಗಂಭೀರವಾಗಿಯೇ ಯೋಚಿಸತಕ್ಕದ್ದು.

  ReplyDelete
 4. sangeeta kacheri in maduve mane - an example of Symbiosis! madve maaDorge sangeeta beku, sangeetagaararige madve mane anta ond platform beku....
  actually salpa confusion ide khanDisbeko support maaDbekO ee vishyakke anta.... aadre maduve ge baro sangeeta priyaru and sangeeta (a)taghnaru khushi irtaare, haaDoru khushi andre... Y not? :-) yeh bhi khush woh bhi khush!

  @Sridhra :: complete ilwaa? meshtru ee article alli sangeeta haaDi madve maaDiddre complete aagtittaaaaaaa?????? relief aagtittaaa?? ;-)


  @Srikantha :: heege "divya avaru ivaru.." antiru, asheeeerwaada maaDteeni.. shabbbbbhaaaassshhhh doDDorge haage gowrava koDodu....

  ReplyDelete
 5. ಇದು ತೀರಾ ಸಬ್ಜೆಕ್ಟಿವ್ ಮ್ಯಾಟರ್ರು ಸಾರ್! ಅವರವರ 'ಭಾವ'ಕ್ಕೆ (ಅಕ್ಕನಿಗೂ!) ಅಂದುಕೊಂಡು ಸುಮ್ನಾಗೋದು ಲೇಸು ಅನ್ನೋದು ನನ್ನನಿಸಿಕೆ..(ಕ್ಷಿತಿಜದ್ದು ಈ ಮೇಲಿನಂತಿದೆ :))

  ಒಟ್ಟಿನಲ್ಲಿ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಟಿಕೆಟ್ ಕೊಂಡು ಹೋಗೋ ಅಭ್ಯಾಸ ಇಲ್ಲದ ನನ್ನಂಥ ಪಾಮರರಿಗೆ ಸರಳಾಯ ಸೋದರಿಯರು,ರೂಪಾ-ದೀಪಾ,ಕಾಸರವಳ್ಳಿ ಸಿಸ್ಟರ್ಸ್ ಅಂಥವರ ಪರಿಚಯ ಮಾಡಿಸಿದ್ದು ಇಂಥಾ ಮದುವೆಗಳೇ ಆದ್ರಿಂದ ನನ್ನದು ಸ್ವಲ್ಪಮಟ್ಟಿಗಾದ್ರೂ ಸಹಮತವಿದೆ ಸಾರ್. (ಸ್ವಲ್ಪ ಸ್ವಾರ್ಥಸಾಧನೆ ಕೂಡಾ ಇರೋದ್ರಿಂದ ವಿರೋಧ ವ್ಯಕ್ತ ಪಡಿಸೋಕಾಗೋಲ್ಲ ನೋಡಿ!)

  ಇನ್ನು ಕಚೇರಿ-ಕಛೇರಿಯದು ಬೇರೆಯದೇ ಕತೆ(ಕಥೆ!) ಬಿಡಿ...

  ReplyDelete
 6. ದಿವ್ಯಾ ಅವರೇ, ಉಗಿಸಿಕೊಳ್ಳಬೇಕು ಅಂತ ಆಸೆ ಆಗ್ತಿದೆ ಅನ್ಸತ್ತೆ ನಿಮಗೆ. ಆದರೂ ಈಗ ಬೇಡ ಬಿಡಿ. ನೀವು ಉಗಿಸಿಕೊಳ್ಳೋದು, ಶ್ರೀಧರ ಬಿಕ್ಕಿ ಬಿಕ್ಕಿ ಅಳೋದು... ಇವೆಲ್ಲಾ ಯಾಕೀಗ?

  ReplyDelete
 7. @srikantha : neenu bhoomanDaladalli huTTirodu doubt -u....neen aadodh nodidre...he he he..

  @Dynamic : eno nange relief ;-) sigo antha video/picchar gaLaagli kaaNsode illa...

  ReplyDelete