Wednesday, May 20, 2009

ಅರಿಯದೆ ಮೂಡಿದ ಕಮ್ಬನಿ

ಅರಿಯದ ಹಾಗೇ ಮೂಡಿತು ಕಣ್ಣಲಿ
ಬಿಂದುವಿನಂತೆ ಎರಡು ಹನಿ.
ಕೇಳಿಸದಾಯಿತು ಎದೆಯ ದನಿ.
ಎಲ್ಲಡಗಿತ್ತೋ ಸಲ್ಲದ ತಳದಲಿ
ಚೆಲ್ಲಿತು ಮೆಲ್ಲನೆ ಕಮ್ಬನಿ.

ಇರುಳಲಿ ಹಾಡಿದ ಗೀತೆಯ ರಾಗಕೆ
ಕೊರಳಿನ ನೋವಿನ ಮೇಳವು.
ಮೋಹವೆ ಹೊಸೆದಿಹ ಜಾಳವು.
ಕಾದಿಹ ಹೃದಯದ ಪ್ರೇಮದ ಹೂವಿನ
ಮಳೆಯಲಿ ಸಿಡಿಲಿನ ತಾಳವು.

ಅರ್ಧರಾತ್ರಿ ಅರ್ಧಚಂದ್ರ ಬೆಳಗನೆ?
ಅರ್ಧಬೆಳಕು - ಭಯದ ಬದುಕು!
ಎನಿತು ಸತ್ಯವೆನಿತು ಕೆಡುಕು?
ಬರಿಯೆ ಪ್ರಶ್ನೆಗಳಲ್ಲಿ ಅರಿಯದೆರಡು
ಹನಿಯು ಮೂಡೆ ಬದುಕಿನಳುಕು!

-ಅ
18.05.2009
3.30AM

6 comments:

  1. ಸೊಪರ್!!!!!! ತುಂಬಾನೇ ಚೆನ್ನಾಗಿದೆ... ಎಲ್ಲ ಸಾಲುಗಳು ಇಷ್ಟವಾದವು...

    ReplyDelete
  2. ಕವನ ಚೆನ್ನಾಗಿದೆ.

    ReplyDelete
  3. ariyade mooDida kambani ge ishTond thale kedskothaara ?? :P eno paapa by misteek kaNjaari bidbiTTiddakke....

    ReplyDelete
  4. [ಶ್ರೀಧರ] ಬರೀ ನಾನು ತಲೆ ಕೆಡಿಸಿಕೊಂಡಿಲ್ಲ, ಈ ಕವಿಗಳ ಒಂದು ದುರಭ್ಯಾಸವೆಂದರೆ ತಾವು ಬರೆದುದನ್ನು ಓದುವವರ ತಲೆಯನ್ನೂ ಕೆಡಿಸುವುದು! ಏನು ಕವಿಯೋ ಏನು ಕವಿತೆಯೋ - ನಾನೇ ಹೇಳ್ಕೋಬೇಕು.

    [ಸುನಾಥ್] ಧನ್ಯವಾದಗಳು.

    [ಮನಸು] ನಿಮಗೆ ಯಾಕೊ ಟ್ರ್ಯಾಜಿಡಿ ಹಾಡುಗಳು ಇಷ್ಟವಾಗುತ್ತಲ್ಲ? ;-)

    ReplyDelete
  5. enoppa. nange idella ondoo artha aagalla.

    ReplyDelete