Friday, May 22, 2009

ನೆನಪಿನ ಬೆಳಕು

ಎಷ್ಟೋ ದಿನಗಳು ಸಂದರೂ
ಕಣ್ಣಿಗೆ ಕಟ್ಟಿದ ಹಾಗಿದೆ.
ಕಂಗಳು ಕೂಡಿದ ಗಳಿಗೆಯೇ
ಎದುರಿಗೆ ನಿಲ್ಲದೆ ಸಾಗಿದೆ!

ಕಣ್ಣು ಹೊಳೆಯುತ ಭಾವ ಮೊಳೆಯುತ
ಮೌನದಿಂದಲೆ ಮಾತನಾಡಿದ
ಆ ಕ್ಷಣಗಳ ಮರೆತೆನೆ?
ಒಲುಮೆ ಮೊಗದಲಿ ಪರುಶ ಸೊಗದಲಿ
ಮನದ ಮಾತುಗಳೆಲ್ಲ ಅಡಗಿದ
ನೆನಪಿನಂಗಳ ತೊರೆದೆನೆ?

ಜಗವನು ತೊರೆಯುವ ಹಂತದಲಿ
ಎದೆಯೊಳಗಡಗಿದ ಬೇಗೆ.
ಮರೆಯದ ಮಹದಾಲಿಂಗನವು
ಸೊಗವನು ಕೇಳಿದ ಭಕುತನಿಗೆ
ಸಗ್ಗವೆ ದೊರಕಿದ ಹಾಗೆ!

ಮನದೊಳಗಡಗಿದ ಪ್ರೀತಿಯ ಪರದೆಗೆ
ಮರೆಸಿತು ಎವೆಗಳ ಚುಂಬನವು!
ಪ್ರೀತಿಯ ಪರದೆಯು ನೆನಪಿನ ಬೆಳಕಿಗೆ
ಸೋಕುತ ಹರಿಯಿತು ಕಂಬನಿಯು.

-ಅ
23.05.2009
12.40AM

8 comments:

  1. nenapina beLaku mooDidaaga, kaN reppegaLu chumbisuttve.. aaga kambani baruttaa??

    bombaaat "kavana"!!!

    aaaadru yaakO neevu dinaaaa kambani sursOdu chanaagilla!

    kambani company na biTbidi allaa.. crane aDike puDi idyallaaaaaa.....

    ReplyDelete
  2. ಏನು ಮದುವೆ ಆಗಿ ಕಂಬನಿ ಕವನ ಜಾಸ್ತಿ ಆಗಿದೆ.... ಹೊಸ ಜೀವನದ ಬಗ್ಗೆನು ಸ್ವಲ್ಪ ಬರಿರಿ!!!!!
    ಕವನ ತುಂಬ ಇಷ್ಟವಾಯಿತು...

    ReplyDelete
  3. enoppa! dina kambani harisyta! harisu harisu! eshTe aadroo kavi neenu!

    ReplyDelete
  4. [ಭವ್ಯಾ] ಹೆ ಹ್ಹೆ ಹ್ಹೆ.

    [ಹರೀಶ್] ಇದು ಆನಂದ ಬಾಷ್ಪ ಕಣಪ್ಪ.

    [ಮನಸು] ಬೇರೆ ಬೇರೆ ಕಾರಣಕ್ಕೆ ಕಂಬನಿ ಉಂಟಾಗುತ್ತೆ. ದುಃಖಕ್ಕೆ, ನೋವಿಗೆ, ಹಿಂಸೆಗೆ, ಸಂತೋಷಕ್ಕೆ, ನೆನಪಿಗೆ, ನಗುವಿಗೆ, ಹುಚ್ಚಿಗೆ!! ಕಣ್ಣಲ್ಲಿ ಧೂಳು ಬಿದ್ದರೂ!!

    [ಡೈನಮಿಕ್] ಒಳ್ಳೇ ಕ್ರೇನ್ ಅಡಿಕೆ ಪುಡಿ! ಕಂಬನಿಯ ಚಟ ಬಿಡಲು ಒಳ್ಳೇ ಉಪಾಯ.

    ReplyDelete
  5. hoon kano ... kambanigalu tumba sad sad aaytu ... swalpa happy sad aadre olledu. en maadodu ... kelvra bagge unreasonable expectations irutte ... yaavaagloo nagnagta irbeku annodu ondu.

    ReplyDelete
  6. [ವಿಜಯಾ] ಈ ಕವನವು sad sad ಕವನ ಆಲ್ಲ. ಯಾಕೋ ಜನ ತಪ್ಪು ತಿಳ್ಕೊಂಡ್ ಇದಾರೆ. ಇದು ಸವಿನೆನಪಿನ. ಆ ನೆನಪುಗಳು ಸಂತಸದ ಬಾಷ್ಪ ಹೊರಡಿಸಿತಷ್ಟೆ?

    ReplyDelete
  7. Aruna Ultim8.....nenapu kahi aadru kanniru, sukha tandru kanniru........ware wahhh!!!

    ReplyDelete