Wednesday, June 10, 2009

ಹೊಸಕಬೇಕಿದೆ ಕೀಟವನ್ನು

ಹೊಸಕಬೇಕಿದೆ ಕೀಟವೊಂದನು
ರೋಗವಂಟುವ ಮೊದಲು.
ಕೀಟವಿದು ಸಾಮಾನ್ಯವಲ್ಲವೊ
ಹೂವ ರೂಪದ ಸಿಡಿಲು.

ಮಲದ ಮೇಲಿನ ನೊಣವೆ ಚೆಲುವೆಲೊ
ಮಲವುಣ್ಣುವ ಹಂದಿಯು!
ಮನುಜ ಕ್ರೂರವನ್ನೂ ಮೀರಿ
ಬಳಲಳಲೆಲ್ಲ ಮಂದಿಯು!

ಹೊಸಕಬೇಕಿದೆ ಕೀಟವೊಂದನು
ಕರುಣೆಯನ್ನು ತೋರದೆ.
ವಿಷದ ತರುವ ಮೊಳಕೆ ಚಿವುಟು
ಮಿತಿಯನೆಂದು ಮೀರದೆ.

ಕೊಚ್ಚಿ ಹೋಗಲಿ ಕೊಚ್ಚೆಯೊಳಗಡೆ
ಇಂಥ ಕೀಟವೆಲ್ಲವೂ.
ಸ್ವಚ್ಛ ಬದುಕದು ಬಡಿಗೆಯಿಂದಲೆ
ಎನುವ ಮಾಟವೆಲ್ಲವೂ.
ಚೆಲುವ ಬದುಕಿಗೆ ಚೆಲುವು ಎಲ್ಲವು
ಎದುರು ನೋಟವೆಲ್ಲವೂ!

-ಅ
11.06.2009
9PM

3 comments:

  1. idyaavdo chikunguniya mathe swine flu du hybrid roga untu maado keeta irbeku ...
    Parisarapremi, vishwamanava ... uhun ... hosako maathu ninge shobhisolla.

    ReplyDelete
  2. ಅರುಣ::
    ಅಂತವಂತ ಇಮೇದೇಹಾ ನಿತ್ಯಸ್ಯೋಕ್ತಾ ಶರೀರಿಣಃ |
    ಅನಾಶಿನೋsಪ್ರಮೇಯಸ್ಯ ತಸ್ಮಾದ್ಯುದ್ಧ್ಯಸ್ವ ಭಾರತ ||

    ವಿಜಯ ಅಕ್ಕ::
    ದೇಹಿನೋsಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
    ತಥಾ ದೇಹಾಂತರ ಪ್ರಾಪ್ತಿಃ ಧೀರಃ ತತ್ರ ನ ಮುಹ್ಯತಿ ||

    ReplyDelete
  3. [ವಿಜಯಾ] ನಿಜ. ಕೀಟವಲ್ಲದ ಕೀಟವನ್ನು ಹೊಸಕಿ ಹಾಕದೇ ಇರುವುದೂ ಅಷ್ಟೇ. ಒಳ್ಳೇ ಹೈಬ್ರಿಡ್ ಕೀಟ!! ಬಿ.ಬಿ.ನ.

    [ಗಂಡಭೇರುಂಡ] ಇದು ಆರೋಗ್ಯಕರವಾದ ನಂಬಿಕೆಯಿರಬಹುದು. ದೇಹಾಂತರವೆಂಬ ಸಂಗತಿಯನ್ನು ನಂಬುವವರಿಗೆ. ಆದರೆ ಇದೇ ಪರಮಸತ್ಯವೆಂಬುದನ್ನು ನಾನು ಒಪ್ಪುವುದಿಲ್ಲ. ಮತ್ತು ಈ ನಂಬಿಕೆಯ ಅವಷ್ಯವೂ ಇಲ್ಲ.

    ReplyDelete