Sunday, June 14, 2009

ತುಂಬಿದ ಕೊಡ ತುಳುಕುವುದೇ?

"ತುಂಬಿದ ಕೊಡ ತುಳುಕುವುದೇ?"

ಯಾರು ಯಾರಿಗೆ ಹೇಳಿದರು? ಸಂದರ್ಭ ಸಹಿತ ವಿವರಿಸಿ. ---------------------------------- ೪ ಅಂಕಗಳು.

ಈ ಮಾತನ್ನು 'ಅರುಣ್' ಅವರು ತಮಗೆ ತಾವೇ ಹೇಳಿಕೊಂಡರು.

ಬಸವನಗುಡಿಯ ಕಾಮತ್ ಬ್ಯೂಗಲ್ ರಾಕಿನಲ್ಲಿ ತಮ್ಮ ತಾಯಿಯ ವೀಣೆ ಕಚೇರಿ ಮುಗಿದ ನಂತರ ಊಟಕ್ಕೆ ಕುಳಿತಿದ್ದಾಗ ಮೃದಂಗ ಮತ್ತು ಖಂಜರ ಕಲಾವಿದರೊಡನೆ ಮಾತನಾಡುತ್ತಿದ್ದಾಗ ಅರುಣ್ ಅವರಿಗೆ ಈ ಮಾತು ಹೇಳಿಕೊಳ್ಳುವ ಪ್ರಚೋದನೆಯಾಯಿತು. ಮೃದಂಗ ವಿದ್ವಾನ್ ವೆಂಕಟೇಶ್ ಅವರು "ಅರುಣ್ ಅವರ ಬಳಿ ಸಾಕಷ್ಟು ಶಾಸ್ತ್ರೀಯ ಸಂಗೀತದ MP3 ಇದೆ!" ಎಂದು ಖಂಜರ ವಿದ್ವಾನ್ ಭಾರ್ಗವ ಅವರಿಗೆ ಹೇಳಿದ್ದನ್ನು ಕೇಳಿ ವಿದ್ವಾನ್ ಭಾರ್ಗವ ಅವರು "ಓಹ್, ನಾನು ಒಂದು ಸಲ ನಿಮ್ಮ ಮನೆಗೆ ಬರುತ್ತೇನೆ, ನನಗೆ ಬೇಕಾಗಿರುವುದನ್ನು copy ಮಾಡಿಕೊಳ್ಳುತ್ತೇನೆ" ಎಂದರು. ಜೊತೆಗೆ, "ಎಷ್ಟಿದೆ?" ಎಂದು ಕೇಳಿದಾಗ ಅರುಣ್ ಅವರು "ಸುಮಾರು ಇಪ್ಪತ್ತು ಜಿ.ಬಿ." ಎಂದು ಹೆಮ್ಮೆಯಿಂದ, ಗರ್ವದಿಂದ ಅಕ್ಕಪಕ್ಕದವರಿಗೂ ಕೇಳುವಂತೆ ಹೇಳಿದರು. ಇದನ್ನು ಕೇಳಿದೊಡನೆಯೇ ಭಾರ್ಗವ ಅವರು ಬೆಕ್ಕಸ ಬೆರಗಾದವರಂತೆ ನಟಿಸಿ, "ಅದ್ಭುತ! ಹಾಗಾದರೆ ಬಂದೇ ಬರುತ್ತೇನೆ" ಎಂದು ಅರುಣ್‍ರವರ ಗರ್ವವನ್ನು ಹೆಚ್ಚಿಸಿದರು.

ಕೂಡಲೇ ಹಿಗ್ಗಿದ ಅರುಣ್ ಅವರು "ಖಂಡಿತ ಬನ್ನಿ" ಎಂದು, ಭಾರ್ಗವರಂತಹ ವಿದ್ವಾಂಸರು ತಮ್ಮಲ್ಲಿರುವ MP3ಗಳನ್ನು ಯಾಚಿಸುತ್ತಿದ್ದಾರೆಂಬ ಭಾವನೆಯಿಂದ ತಮ್ಮ ಹೆಮ್ಮೆಯನ್ನು ಇಮ್ಮಡಿಸಿಕೊಂಡದ್ದನ್ನು ಕಂಡ ವೆಂಕಟೇಶ್ ಅವರು "ಭಾರ್ಗವರ ಹತ್ತಿರವೂ ಸಾಕಷ್ಟು ಇದೆ." ಎಂದರು. ಅರುಣ್ ಅವರು ಕುತೂಹಲಕಾರಿಯಾಗಿ "ಓಹೋ, ಎಷ್ಟಿದೆ?" ಎಂದು ಕೇಳಿದ್ದಕ್ಕೆ ಭಾರ್ಗವ ಅವರು "ಹೆಚ್ಚೇನಿಲ್ಲ, ಏಳುನೂರು ಜಿ.ಬಿ. ಇದೆ ಅಷ್ಟೆ!" ಎಂದರು.

ಈ ಮಾತನ್ನು ಕೇಳಿದ ಅರುಣ್ ಅವರು ಕಕ್ಕಾಬಿಕ್ಕಿಯಾಗಿ, ಮುಖಭಂಗವಾಗಿಸಿಕೊಂಡು, empty vessels make more noise ಎಂಬ ಆಂಗ್ಲ ಗಾದೆಯನ್ನು ನೆನೆದು, ಕನ್ನಡದಲ್ಲಿ "ತುಂಬಿದ ಕೊಡ ತುಳುಕುವುದೇ?!" ಎಂದು ತಮ್ಮ ಮನಸ್ಸಿನಲ್ಲಿ ತಾವೇ ಅಂದುಕೊಂಡರು.

______________________________________________________________________________________

-ಅ
14.06.2009
9PM

9 comments:

  1. ನಿಮಗೆ ಪೂರ್ತಿ ೪ ಅಂಕಗಳನ್ನು ದಯಪಾಲಿಸಿದೇನೆ.

    (www.kannada-nudi.blogspot.com)

    ReplyDelete
  2. aunty kacheri ittu anta heLalE illa ! :(

    ReplyDelete
  3. he he :) inthaa bombgaLu out of the blue heege sudden aagi bidre reactions hegirbodu anta imagine maaDkotaa iddini.. ha ha ha ha :))

    ReplyDelete
  4. aruN,

    eega taane schools shuruvaagide. enu aagale question paper set maDi answer ready maDi iTTiddeera...

    ee maatannu ellaru ondalla ondu sala tamage taavu hELikoLLalE bEku..

    enanteera?

    ReplyDelete
  5. ತುಂಬಿದ ಕೊಡ ತುಳುಕುವುದೇ??
    --->> illai....

    nandu one line answer -u....

    ReplyDelete
  6. [ಶ್ರೀಧರ ರಾಜು] ತಮಿಳು answer ಬೇರೆ, ಸಾಯಕ್ಕೆ!

    [ಅಂತರ್ವಾಣಿ] ಹೆ ಹ್ಹೆ, ಆಗಲೇ ಪ್ರಶ್ನೆಪತ್ರಿಕೆಗಳು ಸಿದ್ಧ ಮಾತ್ರವಲ್ಲ, ಪರೀಕ್ಷೆಯೂ ಆರಂಭ!

    [ಗಂಡಭೇರುಂಡ] ವಿದ್ವಾನ್ ಭಾರ್ಗವ ಅವರು "ತುಳುಕಿದರೆ" ಹೇಗಿರುತ್ತೆ ಅಂತಲೂ imagine ಮಾಡ್ಕೋತಾ ಇದ್ದೀನಿ ನಾನು.

    [ಲಕುಮಿ] ಹೌದಾ? ಸಾರಿ.. :-(

    [ಶ್ರೀನಿಧಿ] ನಗಪ್ಪಾ, ನಗು. ಗಹಗಹಿಸಿ ನಗು.

    [ಸುಶ್ರುತ] ಇದೆಂಥಾ ನಗು? ನೀನೂ ಗಹಗಹಿಸಿ ನಗು. ಬೇಕಾದರೆ ಗೊಳ್ ಎಂದೂ ನಗು.

    [ಕೇಶವ] ಕೃತಾರ್ಥನಾದೆ!

    ReplyDelete
  7. lol! giving music to bhargava=tirupatige laddu:))

    ReplyDelete