Monday, July 6, 2009

ಚಲಿಸದ ಕಾಲ

ನಂಬಿಕೆಯೊಂದನೆ
ಕಣ್ಣೊಳಗಿರಿಸಿ
ಚುಂಬಿಸಿ ಬಿಂಬಿಸಿ
ಬಾಷ್ಪವನೊರೆಸಿ,
ನಗುವಳೆ ಅರಸಿ?

ಚಲಿಸದ ಕಾಲದಿ
ಫಲಿಸದ ಬಯಕೆ
ನಲಿವ ಭ್ರಮೆಯಲಿ
ತಿಳಿಯದ ಬೆರಕೆ,
ಕಲಿಯುವ ಹರಕೆ.

ಎಲ್ಲಿಹುದೆಮ್ಮಯ
ಬದುಕಿನ ಗುರಿಯು?
ಒಬ್ಬರನೊಬ್ಬರು
ಮರೆಯುವ ಪರಿಯು,
ಭೀತಿಯ ಝರಿಯು.

ಅರಿಯದೆ ಸಿಲುಕಿರೆ
ವಿಧಿಯ ಹೊನಲಿಗೆ
ಹರಿಯುವ ಕಡೆಯೊಳೆ
ಹಾದಿ ಕವಲಿಗೆ,
ಎಡೆಯು ಕನಲಿಗೆ.

-ಅ
06.07.2009
10PM

3 comments:

  1. ಹೆಚ್ಚು ಕಮ್ಮಿ ಇದೇ ವಿಷಯದ ಬಗ್ಗೆ ನಾನೂ ಆಗ್ಲೇ ಯೋಚಿಸ್ತಿದ್ದೆ.. last ಎರಡು stanzaಗಳು ಅದ್ಭುತ.. ತುಂಬ ಚೆನ್ನಾಗಿದೆ.. ನಿಜ ಕೂಡ! ಹೀಗೇ ಬರೀತಿರು.. :P

    ReplyDelete
  2. [ಲಕುಮಿ] ಸಂತೋಷ.

    [ಗಂಡಭೇರುಂಡ] ಯಾಕೆ ಹೀಗೇ ಬರೀತಿರಬೇಕು? ಬರಿಯಲ್ಲ!

    ReplyDelete