Thursday, July 23, 2009

ವಿಶೇಷತ್ರಯ ಮತ್ತು ಗ್ರಹಣ

ಮೈಕಲ್ ಜಾಕ್ಸನ್ ಸಂಗೀತವನ್ನು ನಾನು ಹೆಚ್ಚಾಗಿ ಕೇಳೇ ಇಲ್ಲ. ನಾನು ಎರಡನೆಯ ತರಗತಿಯಲ್ಲಿದ್ದಾಗ ಜಯಮ್ಮ ಮಿಸ್ ಮಗಳು ನಮ್ಮ ಸ್ಕೂಲ್ ಡೇ‍ ಸಲುವಾಗಿ ಜಾಕ್ಸನನ ಒಂದು ಹಾಡಿಗೆ ನೃತ್ಯ ಹೇಳಿಕೊಟ್ಟಿದ್ದರು, ಅಷ್ಟು ನೆನಪಿದೆಯಷ್ಟೆ, ಆ ಹಾಡೂ ಸಹ ಯಾವುದೆಂದು ಗೊತ್ತಿಲ್ಲ. ಆತ ಸತ್ತಾಗ ಮಾಧ್ಯಮದಲ್ಲಿ - ವಿಶೇಷವಾಗಿ ಟಿ.ವಿ.ಯಲ್ಲಿ - ಎಲ್ಲಿ ನೋಡಿದರಲ್ಲಿ ಕಾಣಿಸಿಕೊಂಡ ಜಾಕ್ಸನನು what a great figure he "was"! ಎಂಬ ಭಾವನೆಯನ್ನುಂಟು ಮಾಡಿದ.ವಿದುಷಿ ಗಂಗೂಬಾಯಿ ಹಾನಗಲ್ಲರ ಸಂಗೀತವನ್ನೂ ನಾನು ಹೆಚ್ಚಾಗಿ ಕೇಳಿಲ್ಲ. ಮೊನ್ನೆ ಅವರ ನಿಧನದ ದಿನವೇ ಚಂದನದಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ನೋಡಿದೆನಷ್ಟೆ. ಹಿಂದೂಸ್ಥಾನಿ ಸಂಗೀತ ಅಷ್ಟಾಗಿ ತಲೆಯೊಳಗೆ ಹೋಗುವುದಿಲ್ಲ. ಕೆ.ಎಲ್.ಸೈಗಲ್ಲನು ತನ್ನ ಚಲನಚಿತ್ರಗಳಲ್ಲಿ ಹಾಡಿರುವ ಹಾಡುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟವೋ ಅದಕ್ಕಿಂತಲೂ ಕಷ್ಟ ನನಗೆ ಹಿಂದೂಸ್ಥಾನಿ ಸಂಗೀತವನ್ನು ಜೀರ್ಣಿಸಿಕೊಳ್ಳಲು.

ಪಂ.ಭೀಮಸೇನ ಜೋಷಿಯವರ ಹಿಂದೂಸ್ಥಾನಿ ಶೈಲಿಯ ದೇವರನಾಮಗಳು ಇಷ್ಟವಾಗುತ್ತೇ ಹೊರೆತು, ಅವರು ಸಂಪೂರ್ಣ ಶಾಸ್ತ್ರೀಯ ಸಂಗೀತ ಕಚೇರಿ ಮಾಡಿದರೆಂದರೆ ಕಿವಿಯೊಳಗಿಂದ ಮಿದುಳಿನವರೆಗೂ ಹೋಗುವುದೇ ಇಲ್ಲ. ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ, ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ಮಾತ್ರ ಯಾವುದೋ ಗಂಧರ್ವ ಲೋಕಕ್ಕೆ ಕರೆದೊಯ್ಯುವುದಂತೂ ಸತ್ಯ. ಹಿಂದೂಸ್ಥಾನಿ ಹಾಡುಗಾರಿಕೆಯು ಯಾಕೆ ಈ ಪ್ರಭಾವವನ್ನು ನನ್ನ ಮೇಲೆ ಇನ್ನೂ ಬೀರಿಲ್ಲವೋ ಇನ್ನೂ ಗೊತ್ತಿಲ್ಲ.

ಆದರೂ ಮೊನ್ನೆ ಚಂದನದಲ್ಲಿ ಪ್ರಸಾರವಾದಾಗ ಗಂಗೂಬಾಯಿ ಹಾನಗಲ್ಲರು ನಮ್ಮವರೇ ಎಂಬ ಕಾರಣದಿಂದಲೋ, ಹೆಮ್ಮೆ ಪಟ್ಟುಕೊಳ್ಳುತ್ತ ಕಾರ್ಯಕ್ರಮವನ್ನು ನೋಡಿದೆ. ಸಂಗೀತವು ನಿರೀಕ್ಷಣೆಯನ್ನು ಮೀರಿಯೇ ಇಷ್ಟವಾಯಿತು. What a great singer she "IS"! ಎನ್ನಿಸಿತು!ಇದೇ ವಾರದಲ್ಲಿ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಕೂಡ ನಿಧನ ಹೊಂದಿದ ಸುದ್ದಿಯನ್ನು ಕೇಳಿ ಬೇಸರವಾಯಿತು. ಪಟ್ಟಮ್ಮಾಳ್ ಸಂಗೀತವನ್ನು ಸಾಕಷ್ಟು ಕೇಳಿದ್ದೇನೆ. ಕೇಳಿ ಸವಿದಿದ್ದೇನೆ. ಸವಿದು ನಲಿದಿದ್ದೇನೆ. ವಯಸ್ಸಾದ ನಂತರದ ಗಂಗೂಬಾಯಿ ಹಾನಗಲ್ಲರಂತೆಯೇ ಪಟ್ಟಮ್ಮಾಳ್ ಅವರ ಧ್ವನಿಯೂ ಸಹ ಸ್ವಲ್ಪ ಗಡುಸಾಗಿಯೇ ಇತ್ತು. ಗಂಡಸು ಧ್ವನಿಯಂತೆಯೇ ಎಂದರೂ ತಪ್ಪಾಗುವುದಿಲ್ಲ.ಅವರ ಸೋದರ ಡಿ.ಕೆ.ಜಯರಾಮನ್ ಅವರದು ಇದರ ತದ್ವಿರುದ್ಧ. ಮೃದುವಾದ ಕಂಠ. ಇವರಿಬ್ಬರೂ ಕಚೇರಿಯನ್ನು ಯುಗಳವಾಗಿ ಮಾಡುತ್ತಿದ್ದರಂತೆ! ಪತ್ರಿಕೆಗಳಲ್ಲಿ ಪಟ್ಟಮ್ಮಾಳ್ ಅವರ ಭೈರವಿ ರಾಗದ ಪ್ರಚಾರದ ಬಗ್ಗೆ ಏನೇ ಓದಿದರೂ ನನಗೆ ಅವರ ಖರಹರಪ್ರಿಯವೇ ಪ್ರಿಯವಾದದ್ದು. "ಚಕ್ಕನಿ ರಾಜ...." ಎಂದು ಪಟ್ಟಮ್ಮಾಳ್ ಹಾಡುವಾಗ ವಿದ್ವಾನ್ ಶ್ರೀ ಶೆಮ್ಮಂಗುಡಿಯವರಷ್ಟೇ ಗತ್ತು ಕೇಳಿಬರುವುದಂತೂ ದಿಟ. What a great musician she was, she is, and she will be! ಎಂದು ಎನ್ನಿಸುತ್ತಲೇ ಇರುತ್ತೆ. ಈಗಲೂ ಚಕ್ಕನಿ ರಾಜವನ್ನೇ ಕೇಳುತ್ತಿದ್ದೇನೆ.ಈ ಮೂರೂ ಸಾವಿಗೆ ಮೊನ್ನೆ ಕನ್ನಡ ಚಾನೆಲ್ಲೊಂದರಲ್ಲಿ ಗಡ್ಡದ ಜ್ಯೋತಿಷಿಯೊಬ್ಬರು ಗ್ರಹಣದ ಕಾರಣ ಕೊಟ್ಟು ತಾವು ಎಷ್ಟು ಅವೈಜ್ಞಾನಿಕರೆಂದು ಹೇಳಿಕೊಂಡರು.

ಮೂರೂ ಮಹನೀಯರು ಕೇಳುಗ ರಸಿಕರಿಗೆ, ಕಲಿಯುವವರಿಗೆ, ಸಾಧಿಸುವವರಿಗೆ, ಬದುಕುವವರಿಗೆ ಸಾಕಷ್ಟು ಕೊಟ್ಟು ಹೋಗಿದ್ದಾರೆ. ಇವರ ಹೆಸರುಗಳು ಚಿರವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಸಾಧಕರು ಹೆಚ್ಚು ಹೆಚ್ಚು ಹುಟ್ಟಿ ಬರಲಿ.

-ಅ
23.07.2009
10PM

9 comments:

 1. idakkella grahana kaarana alla antha heg helteeya?? suryagrahana andre en sumne naa?

  ReplyDelete
 2. ನಾನು ಆ ಗಡ್ಡದ ಜ್ಯೂತಿಶಿಯನ್ನು ಡಿಫೆಂಡ್ ಮಾಡ್ತಿಲ್ಲ. ಈ ಸಾವಿಗೆ ಕಾರಣ ಕೊಡುವ ಅಗತ್ಯನೇ ಇರ್ಲಿಲ್ವೇನೋ. ಏನೋ ಪ ನನಗೆ ಅಷ್ಟೆಲ್ಲಾ ಅರ್ಥ ಆಗಲ್ಲ. ಆದ್ರೆ ವಿಜ್ಞಾನದ ರೀತಿಯಲ್ಲಿ ಎಲ್ಲವನೂ ನೋಡಕ್ಕೆ ಆಗಲ್ಲ. ವಿಜ್ಞಾನ ಇನ್ನು ಅಷ್ಟು ಮುಂದುವರ್ದಿಲ್ಲ ಅನ್ಸತ್ತೆ.

  ReplyDelete
 3. grahana"NE" kaaraNa... illa andre pedda antaare ninna... grahana andre en ankondbiTTi? saamaanya naa?

  ReplyDelete
 4. [ರಾಜೀವ] ನಿಜ. ವಿಜ್ಞಾನಕ್ಕೆ ನಿಲುಕದ್ದು ಜಗತ್ತಿನಲ್ಲಿ ಬೇಕಾದಷ್ಟಿವೆ. ಅನೇಕ ರಹಸ್ಯಗಳನ್ನು ಪ್ರಕೃತಿಯು ವಿಜ್ಞಾನಕ್ಕೆ ನಿಲುಕಬಾರದು ಎಂದು ನಿಶ್ಚಯಿಸಿರುವ ಹಾಗಿದೆ. ಏನೂ ಗೋಚರಿಸಿದೇ ಇರುವಾಗ ಎಲ್ಲ ಬಗೆಯ assumptions ಹೊಳೆಯುತ್ತೆ. ಆಕಾಶದಲ್ಲಿ ನಡೆಯುವ ವಿಸ್ಮಯವನ್ನು ಹೇಗೆ ಬೇಕೆಂದರೆ ಹಾಗೆ interpret ಮಾಡಬಹುದು. ನಾವು ಕೇಳಿಲ್ಲವೇ, ಊಟ ಮಾಡಬಾರದು, ಪೂಜೆ ಮಾಡಬಾರದು, ಹಿಡಿದ ಸ್ನಾನ - ಬಿಟ್ಟ ಸ್ನಾನ ಮಾಡಬೇಕು ಎಂದೆಲ್ಲ!! ಅದನ್ನು ಸಾವಿಗೂ link ಮಾಡಿದ್ದಾರೆ ಎಂದು ನನ್ನ ಅನಿಸಿಕೆ.

  [ವಿಜಯಾ] ಅಲ್ವಾ ಮತ್ತೆ! ಸುನಾಮಿ ಆಗಿದ್ದೂ ಸೂರ್ಯ ಗ್ರಹಣದಿಂದಲೇ ಅಂತೆ!!

  ReplyDelete
 5. [ಶ್ರೀಕಾಂತ] ಹೆ ಹ್ಹೆ ಹ್ಹೆ.. ಹೌದು. ಹೌದು. ಈಗೀಗ ಯಾಕೋ ನನಗೆ ಬಿ.ಎಸ್.ರಾಜಯ್ಯಂಗಾರ್ ಅವರು ಇಷ್ಟವಾಗುತ್ತಿದ್ದಾರೆ. ಅದಕ್ಕೂ ಗ್ರಹಣವೇ ಕಾರಣ.

  ReplyDelete
 6. alva mathe? nange hitopadeshaddu ondu shloka nu nenapu bantu grahana aagiddikke... ee shloka hitopadeshadalli irodu adyaavatto aada grahanadinda ne ante... idikke aneka paaThaantaragaLive (adikku grahaNa kaaraNa)... ondu paaTha heegide...

  ಶಶಿದಿವಾಕರಯೋರ್ಗಹಪೀಡನಂ
  ಗಜಭುಜಂಗವಿಹಂಗಮಬಂಧನಮ್ |
  ಮತಿಮತಾಮವಲೋಕ್ಯ ದರಿದ್ರತಾಂ
  ವಿಧಿರಹೋ ಬಲವಾನಿತಿ ಮೇ ಮತಿಃ ||

  ReplyDelete
 7. ondu 'ra' ottu biTbiTTe... grahaNada prabhaava... eega serstideeni... adu december 31 aago innondu grahaNada poorvaprabhaava..

  ಶಶಿದಿವಾಕರಯೋರ್ಗ್ರಹಪೀಡನಂ
  ಗಜಭುಜಂಗವಿಹಂಗಮಬಂಧನಮ್ |
  ಮತಿಮತಾಮವಲೋಕ್ಯ ದರಿದ್ರತಾಂ
  ವಿಧಿರಹೋ ಬಲವಾನಿತಿ ಮೇ ಮತಿಃ ||

  ReplyDelete
 8. ಹ್ಹ ಹ್ಹ :) ಚೆನ್ನಾಗಿದೆ - ಮೊನ್ನೆ ನಮ್ಮ ಮನೇಲಿ ಸಾರು ರುಚಿ ಕೆಟ್ಟಿತ್ತು. ಯಾಕೋ ತಿಳ್ದಿರ್ಲಿಲ್ಲ. ಈಗ್ಗೊತ್ತಾಗ್ತಿದೆ, ಗ್ರಹಣದ ಪರಿಣಾಮ ಅಂತ :)

  ReplyDelete
 9. [ಹಂಸಾನಂದಿ] ಹೆ ಹ್ಹೆ.. ನೋಡಿದಿರಾ ಗ್ರಹಣದ ಮಹಿಮೆಯನ್ನು!!

  [ಶ್ರೀಕಾಂತ್] ಈ ಶ್ಲೋಕವು ಅರ್ಥವಾಗದೇ ಇರುವ ಕಾರಣವೂ ಗ್ರಹಣವೇ ಎಂಬುದನ್ನೂ ಸಹ ನಾನು ಬಲ್ಲೆ.

  ReplyDelete