Monday, August 24, 2009

ಚಂದಿರ

ತಿಳಿ ತಿಳಿ ಹಾಲಿನ ಮೋಡದ ತೆರೆಯಲಿ
ಒಳಗೊಳಗಡಗಿಹ ಶಶಿಯು ಮರೆ.
ಏನು ಚಂದವೋ, ಏನು ಅಂದವೋ
ಇಣುಕುತ ಕೆಣಕುವ ಒಲವ ಕರೆ,
ಮರೆತಂತೆ ತಿರೆ!

ಹಗಲಿನ ಬೇಗೆಯನಾರಿಸೆ ಹನಿಗಳ
ಹೂಮಳೆಗರೆದಿಹ ಬಾಂದಳದಿ
ಚುಕ್ಕಿಗಳೆಲ್ಲವು ಅಡಗಿ ಕುಳಿತಿಹವು
ತಿಂಗಳ ಸೊಬಗಿಗೆ ನಾಚುತಲಿ,
ಕೈ ಚಾಚುತಲಿ!

ಹೊಸ ಹೊಸ ನೋಟದೆ ನೂತನ ದಾರಿಯ
ಹೊಸ ಕನಸನು ಶಶಿ ತೋರುವನು.
ಚಂದಿರನು, ಅಯ್ಯೋ! ಇವನಲ್ಲವೆ?
ನಾಲ್ಕನೆ ದಿನ ಭಾದ್ರಪದದಲಿ
ಹೊಳೆಯುತ ಸೆಳೆಯುತ ಕಳೆಯೊಳು ಬಂದಿಹ
ಶತ್ರುವು ಮಿತ್ರನ ವೇಷದಲಿ,
ಹುಸಿ ಪಾಶದಲಿ!

-ಅ
24.08.2009
1.30 AM

10 comments:

  1. ತಿಂಗಳ ಸೊಬಗಿಗೆ ನಾಚುತಲಿ,
    ಕೈ ಚಾಚುತಲಿ!

    yaako shraavanabantu movie nenpaaytu :-)

    ReplyDelete
  2. Shabash. Bahala sogasagide.

    ReplyDelete
  3. chennaagide... syamantakOpaakhyaanada padya nu bardbiDu... :-))

    ReplyDelete
  4. [ಶ್ರೀಕಾಂತ] ಹೆ ಹ್ಹೆ ಹ್ಹೆ.. ಒಳ್ಳೇ ಕಾಂಪನ್ಸೇಷನ್ನು.

    [ಅರ್ಜುನ] ಧನ್ಯವಾದಗಳು ಕಣಪ್ಪೋ.

    [ಶ್ರೀನಿಧಿ] :-)

    [ಮನಸು] ಬಹಳ ಧನ್ಯವಾದಗಳು.

    [ವಿಜಯಾ] ಸುಮ್‍ಸುಮ್ನೆ ಯಾವ್‍ಯಾವ್ದೋ ಸಿನಿಮಾ ನೆನಪಾಗುತ್ತಾ?

    ReplyDelete
  5. ಲಯ ಸೂಪರ್...ಗುಂಡಕ್ ಕೂತ್ಕೊಂಡ್ ಹಾಡೋಕೆ ಒಳ್ಳೇ ಮಜ ಇದೆ...
    ಆವತ್ತೇ ಓದೋಣ ಅಂದ್ಕೊಂಡ್ ಬಂದೆ ಆಮೇಲೆ ಗಣಪತಿ ಹಬ್ಬದ ದಿನ ಚಂದ್ರನ್ ನೋಡ್ಬೇಡಾ ಅಂದಿದ್ರು ಮನೇಲಿ..ಹೆದರ್ಕೊಂಡ್ ಸುಮ್ನಾದೆ :)

    ReplyDelete
  6. [ಸುಶೀಲ್] ಹೆ ಹ್ಹೆ.. ಒಳ್ಳೇದು. ಆಮೇಲೆ ಸುಮ್‍ಸುಮ್ನೆ ಅಪ್ವಾದ ಹೊತ್ಕೊಂಡ್ ತಿರ್ಗ್ಬೇಕು, ಕರ್ಮ.

    ReplyDelete
  7. chnnagide sir... maleli nenedantaitu. :)

    ReplyDelete