Monday, September 14, 2009

ಅಕಾಲಮೃತ್ಯು

ಅಕಾಲಮೃತ್ಯು - ಇದರ ಅರ್ಥವೇನು? ಇದು ಸಾಧ್ಯವೇ?

-ಅ
1.15PM

7 comments:

  1. ಖಂಡಿತ ಸಾಧ್ಯ, ಜನರ ಬಾಯಲ್ಲಿ.. :) ಹುಟ್ಟಿದ ದಿನದಿಂದ ನೂರು ವರ್ಷದೊಳಗೆ ಯಾವಾಗ ಸತ್ತರೂ "ಅಯ್ಯೊ, ಪಾಪ ಇಷ್ಟು ಬೇಗ ಹೋಗಿಬಿಟ್ರು" ಅಂತ ಕೊರಗೋದು ನಿಲ್ಸೊಲ್ಲ..

    ReplyDelete
  2. ಕಾಲ ಎಂದರೆ ಮೃತ್ಯು ಎಂಬ ಅರ್ಥದ ಪ್ರಕಾರ ಅಕಾಲಮೃತ್ಯು ಎಂಬುದಕ್ಕೆ ಅರ್ಥವಿಲ್ಲ. ಈ ಅರ್ಥವನ್ನು ಬಿಟ್ಟು ನೋಡುವುದಾದರೆ, ಸಾಮಾನ್ಯವಾಗಿ ಆಯಾ ಜೀವಿಯ ಬದುಕಿನ ಸಮಯ ಏನಿರುತ್ತದೋ, ಅದಕ್ಕಿಂತ ಬೇಗ ಸತ್ತರೆ, ಎಂದರೆ ಸಾಮಾನ್ಯವಾದ ಮರಣ ಕಾಲ ಪ್ರಾಪ್ತವಾಗದೇ ಸತ್ತರೆ ಅದನ್ನು ಅಕಾಲಮೃತ್ಯು ಎನ್ನುತ್ತಾರೆ ಎಂಬುದು ನಾನು ಅರ್ಥ ಮಾಡಿಕೊಂಡಿರುವ ವಿಷಯ. ಜೀವಿಯ ಪ್ರಾಣಕೋಶಕ್ಕೆ ಉಸಿರಾಡುವ ಶಕ್ತಿ ಹೋಗುವ ಮುಂಚೆಯೇ ಬೇರೆ ಯಾವುದೋ ಕಾರಣದಿಂದ ಮರಣವಾದರೆ ಅಕಾಲಮೃತ್ಯು ಅಥವಾ ಅಕಾಲಮರಣ ಎನ್ನಬಹುದು ಎನ್ನುವುದು ಇನ್ನೂ ಸೂಕ್ತ ವಿವರಣೆ ಎನ್ನಿಸುತ್ತದೆ.

    ReplyDelete
  3. ಅಕಾಲ ಮೃತ್ಯು- ಒಂದು ಲೆಕ್ಕದಲ್ಲಿ ಶ್ರೀಕಾಂತ್ ಅವರು ಹೇಳಿದ್ದು ನಿಜ. ಆದರೆ ಇನ್ನೊಂದು ರೀತಿಯಲ್ಲಿ ನೋಡಿದರೆ... ಒಬ್ಬ ವ್ಯಕ್ತಿಯ ಸಾವು ಎನ್ನುವುದು ಕಾಲವನ್ನೂ ಮೀರಿದ್ದು. ಮೊದಲೇ ತೀರಿಹೋದ.. ಇಲ್ಲಾ ಕಾಲಮೀರಿ ತೀರಿಹೋದ ಎನ್ನುವ ಒಂದು conceptನಲ್ಲೇ ನಂಬಿಕೆ ಇಡಲಾಗದು. ಒಬ್ಬನ ಹುಟ್ಟು ಹೇಗೆ ಅಕಾಲವಲ್ಲವೋ ಹಾಗೇ ಆತನ ಸಾವೂ ಅಕಾಲವಲ್ಲ ಎನ್ನುವುದು ನನ್ನ ಅಭಿಮತ.

    ReplyDelete
  4. ಈತ ಯಾವಾಗ ಸಾಯುತ್ತಾನೊ ಅಂತ ಜನ ಅನ್ನುವ ಮೊದಲೇ ಸತ್ತು ಹೋದರೆ ಅದು ಅಕಾಲ ಮೃತ್ಯು!

    ReplyDelete
  5. [ಸುನಾಥ್] ಹೆ ಹ್ಹೆ, ಅದೇ ಥರ ಇನ್ನೊಂದು, ಸುನಾಥ್ ಅವರೇ. ಕೊನೆಗೂ ಸತ್ತನಲ್ಲಾ ಎಂಬ ನಿಟ್ಟುಸಿರು ಬಿಡುವ ಸಲುವಾಗಿ ಸತ್ತವರ ಹೆಸರಿನ ಪಕ್ಕದಲ್ಲಿ "Late" ಅಂತ ಹಾಕುತ್ತಾರೆ ಎನ್ನಿಸುತ್ತೆ.

    [ಶ್ರೀಕಾಂತ] ಅಂದರೆ, ಮನುಷ್ಯನು ಅಕಾಲ ಮೃತ್ಯು ಹೊಂದಿದ್ದಾನೆ ಎಂದರೆ ಅದರರ್ಥ ತನ್ನ life span - ನೂರು ಎನ್ನೋಣ (ಅನಂತ ಅವರು ಹೇಳಿದ ಹಾಗೆ) - ಅಷ್ಟರೊಳಗೆ ಸತ್ತರೆ ಅದು ಅಕಾಲಮೃತ್ಯುವೇ?

    ಮರಣಕಾಲ ಪ್ರಾಪ್ತವಾಗದೇ ಸಾಯುವುದು ಹೇಗೆ?

    [ತೇಜಸ್ವಿನಿ ಹೆಗಡೆ] ಯಾರಾದರೂ ಅಪಘಾತದಲ್ಲಿ ತೀರಿಕೊಂಡಾಗ ಈ ಅಕಾಲಮೃತ್ಯು ಪದ ಬಳಸುತ್ತಾರೆ. ಇದು ಸರಿ ಎಂದು ನನ್ನ ಮನಸ್ಸಿಗೆ ತೋರುತ್ತಿಲ್ಲ.

    ReplyDelete
  6. prati ondu jeeviguu tannade aada ondu aayassu define aagirutte. aa jeevige aa aayassanna aangladalli 'avg life span' anta kareetaare. for ex, aanegaLu 70 inda 100 varsha badkbodu, naayigaLu sumaaru 10-20 varsha, manushya 100-120 varsha (anta modlittu.. eega avg life span-u kammi aagbiTTide, as in 60yrs annodu bere vishya), heege.. aa avadhiginta modale 'natural' aagi saayodu bahaLa bahaLa rare-u.. aa avadhiginta munche saaybeku andre most probably yavdo rogadinda no, athva bhyanakaravaagi accident aagi no, athva yaaro kole maaDi no saaybeku. haage sattaaga adanna 'akaala mrtyu' annodu rooDhiyallide anta hiriyaru heLtaare. srikantha heLidduu hecchu kammi ide arthadalli anta naanu nambiddini.

    idakke parOkshavaada proof elli sigutte? gheranda samhite.. surya namaskara....
    adara prabhaava, adara pariNaamagaLna tiLstaa ondu point alli nitya surya namaskara maaDorige akaala mrtyu annode iralla anta heLtaare (aa kaalakke vaahanagaLa apaghaatagaLu aagade iddidrinda aa ondu possibility na eega serskoLakkagalla.. adu biTre bere yavde reetiya roga-rujinagaLinda doora irbodu manushya annodu satya).
    vedagaLalli 'aruna prashna' anta ondu bhaaga.. i think rigveda.. adara tumba surya namaskara da prabhaava tiLside.. adbhuta-atyadbhutavaada ondu bhaaga.. keLale bekaada ondu bhaaga... adrallu explicit aage kelavu rogagaLna heLtaare, as in heart problems, kidney problems, liver problems, intestinal problems, sugar-u, etc... ivelladarinda nammanna kaapaaDonu surya anta. ninge tiLde irutte, jyotishyadallu surya ne taane aarogya koDOnu..
    ivella noDidre naavu tiLkobodaadantha ondu amsha andre aa 'akaala mrtyu' annodara artha 'avg life span'ginta munche saayodu, due to unnatural causes annodu.. suspashTa..
    nanage tiLida ondu chooru... :)

    ReplyDelete
  7. Mruthyu kachita, idhu brahma baredittiro sathya... idannu edit maadalu yaarindlu sadhya illa... haagidmele akaala mruthyu andre yenu???

    ReplyDelete