Wednesday, September 30, 2009

ಕಲಿಗಾಲದ ಅಂಕಿ-ಅಂಶ

--> ವರ್ಷಕ್ಕೆ ಎಂಟೂವರೆ ಲಕ್ಷ ಕ್ಯಾನ್ಸರ್ ರೋಗದ ವರದಿಯಾಗುತ್ತಂತೆ ನಮ್ಮ ದೇಶದಲ್ಲಿ. ಅದರಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಾರಂತೆ ಕ್ಯಾನ್ಸರ್ ಇಂದ.

http://cancerindia.net/cancerstatistics.aspx

--> ಅರವತ್ತು ಮಿಲಿಯನ್‍ಗಿಂತ ಹೆಚ್ಚು ಜನ ಹೃದಯಘಾತದಿಂದ ತೀರಿಕೊಳ್ಳುತ್ತಾರಂತೆ.

http://www.rediff.com/news/2007/nov/29heart.htm

--> ಹಳೇ ನ್ಯೂಸು, ಆದರೂ ಇಲ್ಲಿ ಪ್ರಸ್ತುತ. ಒಂದೇ ವರ್ಷದಲ್ಲಿ ನಾಲ್ಕು ಲಕ್ಷ ಜನ AIDS ನಿಂದ ಭಾರತದಲ್ಲಿ ಸತ್ತರು. ಈ ವರ್ಷ ಎಷ್ಟು ವರದಿಯಾಗಿದೆಯೋ ಗೊತ್ತಿಲ್ಲ.

http://www.indianexpress.com/news/4-lakh-aids-deaths-in-india-last-year-high/6453/


--> ರಸ್ತೆ ಅಪಘಾತಗಳೂ ಏನು ಕಮ್ಮಿ ಇಲ್ಲ. ಹೆಚ್ಚು ಕಮ್ಮಿ ಒಂದೂಕಾಲು ಲಕ್ಷ ಜನ ರಸ್ತೆಯ ಮೇಲೆ ಸಾಯುತ್ತಾರಂತೆ.

http://www.india-server.com/news/india-has-highest-number-of-road-4241.html


--> ಈಗ ಭಾರತದ ಜನಸಂಖ್ಯೆ - 1,147,995,904 ಅಂತೆ.

ಕಲಿಗಾಲವಯ್ಯ ಕಲಿಗಾಲ...

-ಅ
30.09.2009
12.10PM

4 comments:

  1. ondashtu positive points noo huduki haakiddidre chennagirtittu.

    ReplyDelete
  2. ಅರುಣ,
    ನಮ್ಮ ದುರ್ದೈವಕ್ಕೆ ನಾವು ಸಂಖ್ಯೆಗಳನ್ನು ಪಾಶ್ಚಾತ್ಯ ಪದ್ಧತಿಯಲ್ಲಿಯೇ ಬರೆಯುವದನ್ನು ಇತ್ತೀಚೆಗೆ ರೂಢಿಸಿಕೊಂಡಿದ್ದೇವೆ. ಆದರೆ ಭಾರತೀಯ ಪದ್ಧತಿಯು ಅದಕ್ಕಿಂತ appropriate ಆಗಿರುವಾಗ ಪಾಶ್ಚಾತ್ಯ ಪದ್ಧತಿ ಏಕೆ? ಪರದೇಶಗಳಿಂದ ಸಾಲ ತೆಗೆದುಕೊಳ್ಳುವಾಗ ಮಿಲಿಯನ್ ಹಾಗೂ ಬಿಲಿಯನ್ ಬಳಸೋಣ, ಆದರೆ ನಮ್ಮ ಜನಸಂಖ್ಯೆಯನ್ನು ಹೇಳುವಾಗ ಕೋಟಿಗಳನ್ನು ಉಪಯೋಗಿಸುವದು ಸರಿ ತಾನೆ?
    ಆದುದರಿಂದ ನಮ್ಮ ಜನಸಂಖ್ಯೆ:೧೧೪,೭೯,೯೫,೯೦೪!

    ReplyDelete
  3. [ಸುನಾಥ್] ನಿಜ, ನಿಮ್ಮ ಮಾತು ಒಪ್ತೀನಿ. ವಾಸ್ತವವಾಗಿ ನನಗೆ ಈ ಸಂಖ್ಯೆಗಳು ಅರ್ಥ ಆಗಲ್ಲ. ಅದು ಮಿಲಿಯನ್ ಪದ್ಧತಿಯಲ್ಲಿದೆಯೋ ಭಾರತೀಯ ಪದ್ಧತಿಯಲ್ಲಿದೆಯೋ ಗೊತ್ತೇ ಆಗಲ್ಲ ನೋಡಿ. ದಡ್ಡ ನಾನು. ನನಗೆ ಒಂಥರಾ ನ್ಯೂಮೆರೋ ಫೋಬಿಯಾ. ಸಂಖ್ಯೆ ನೋಡಿದ ತಕ್ಷಣ ಕಣ್ಣು ಮಂಜು ಆಗುತ್ತೆ. ಇಲ್ಲಿ ನಾನು ಬಳಸಿರುವ ಸಂಖ್ಯೆ ಗೂಗಲ್ ಸರ್ಚಿನಿಂದ ಕಾಪಿ ಪೇಸ್ಟ್ ಮಾಡಿದ್ದು. ಕಲಿಯಲು ತುಂಬ ಇದೆ!

    [ವಿಜಯಾ] ಕೊನೆಯ ಪಾಯಿಂಟೇ ಪಾಸಿಟಿವ್ವು.

    [ಲಕುಮಿ] ನಮಃ.

    ReplyDelete