Wednesday, October 21, 2009

ಸಾವಿನ ಎದುರು

ವರ್ಷ ವರ್ಷಗಳು ಜೊತೆಗೆ ಇದ್ದು, ಜೊತೆಗೆ ನಡೆದು,
ನಕ್ಕು ನಲಿದು, ಅತ್ತು ಕರೆದು, ಬಿದ್ದು ಎದ್ದರೇನು?
ಹಣ್ಣು ಮುದಿತನದಲ್ಲಿ ಕೂಡ, ನಿನ್ನೆವರೆಗೂ ಕನಸ ಕಟ್ಟಿ
ಇಂದು ಇಲ್ಲವಾದೆಯಾ?

"ಇಲ್ಲ, ಇಲ್ಲ, ಸಿದ್ಧವಿಲ್ಲ, ಇನ್ನೂ ನಾನು ನಿನ್ನ ಅಗಲಿಕೆಗೆ"
ಎಷ್ಟು ಕೊರಗಿದರೇನು ಫಲ? ಏನು ಕೂಗಿದರೇನು ಸುಖ?
ನಾನೇ ನೀನು ಎಂಬ ಭ್ರಮೆಯೊಳಿದ್ದೆ ಇಷ್ಟು ದಿನಗಳು - ನಿನ್ನೆವರೆಗೂ!!
ಇಂದು ಅನಿವಾರ‍್ಯವು ತಾನೆ?
ದೈವ, ಜೀವ, ಆತ್ಮ, ಜನುಮ - ಸಮಾಧಾನದ ನುಡಿಗಳು.
ಆದರೇನು ಫಲ? ಆದರೇನು ಸುಖ?
ನಂಟು ಇದ್ದುದು ದೇಹದೊಂದಿಗೆ.

-ಅ
21.10.2009
2.45PM

7 comments:

  1. ಜೀವ-ಜಡ-ರೂಪ-ಪ್ರಪಂಚವನ್ ಅದಾವುದೋ‌‍ऽऽऽ
    ಆವರಿಕೊಂಡುಮ್ ಒಳನೆರೆದುಮ್ ಇಹುದಂತೆ!
    ಭಾವಕೊಳಪಡದಂತೆ! ಅಳತೆಗಳವಡದಂತೆ!

    ಇಹುದೋ? ಇಲ್ಲವೋ? ತಿಳಿಯಗೊಡದೊಂದು ವಸ್ತು!
    ನಿಜ; ನಿಜ-ಮಹಿಮೆಯಿಂ ಜಗವಾಗಿ ಜೀವ-ವೇಷದಲಿ ವಿಹರಿಪುದು

    ReplyDelete
  2. [ಶ್ರೀಧರ] ಏನೋ ಗೊತ್ತಿಲ್ವೋ. ಜೊತೆಗೇ ಇದ್ದೋರು ಇದ್ದಕ್ಕಿದ್ದ ಹಾಗೆ ಒಂದು ದಿನ ಹೋಗ್ಬಿಡ್ತಾರೆ. ಅನಿವಾರ್ಯವಾಗಿ ಅವರನ್ನು "ಬಿಸಾಡ" ಬೇಕು. ಇದ್ದಕ್ಕಿದ್ದ ಹಾಗೆ ಎಲ್ಲ ಕೊಂಡಿಗಳೂ ಕಳಚಿ ಹೋಗುತ್ತೆ.. ಅದಕ್ಕೇ ಸಾವಿನ ಸುತ್ತ ನೂರೆಂಟು ಕಥೆ ಕಟ್ಟಿ ಬದುಕಿರುವವರಿಗೆ ಸಮಾಧಾನ ಮಾಡುತ್ತಾರೆ. ಏನೇ ಆದರೂ ಹೋದವರು ಹೋದವರೇ! ಕಳೆದುಕೊಳ್ಳಲೇ ಬೇಕು. ಇವತ್ತು ಅವರನ್ನು ನಾವು, ನಾಳೆ ನಮ್ಮನ್ನು ಇನ್ನೊಬ್ಬರು.

    [ವಿಜಯಾ] ಯಾಕೀ ನಗು?

    [ಶ್ರೀಕಾಂತ] ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು - ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ - ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ ನಮಗೆಂದು ಪೂಜಿಸುವ ಬಾರಾ!

    ಓ ರಂಗಶಾಯೀ..., ರಘುವಂಶಸುಧಾಂಬುಧಿಚಂದ್ರ ಶ್ರೀ.

    ReplyDelete
  3. [parisarapremi]

    ಅಮ್ಮಾ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು... ಮಿಡುಕಾಡುತಿರುವೆ ನಾನು
    ಕಡಿಯಲೊಲ್ಲೆ ನೀ ಕರುಳ ಬಳ್ಳಿ... ಒಳವೂಡುತಿರುವ ತಾಯೇ! ಬಿಡದ ಭುವಿಯ ಮಾಯೆ!

    ನಿಂಬೆಯ ರಸ ತುಂಬಾ ಚೆಂದ! ನಿಂಬೆಯ ಹೂವು ತುಂಬಾ ಸಿಹಿ! ಆದರೆ ನಿಂಬೆಯ ಹಣ್ಣು, ಕಂದ... ತಿನ್ನಲು ಬಹಳ ಹುಳಿ! ಹುಳಿ!

    ಒಡೆಯದ ಒಡಪೇ! ಒಲವಿನ ಮುಡಿಪೇ! ಸನಿಹಕೆ ಸೆಳೆದವಳೇ...

    ಇವಳು ಯಾರು ಬಲ್ಲೆಯೇನು? ಇವಳ ಹೆಸರ ಹೇಳಲೇನು? ಇವಳು ಏತಕೋ ಬಂದು ನನ್ನ ಸೆಳೆವಳು!

    ಜಯ ಮಂಗಳಂ ನಿತ್ಯ ಶುಭ ಮಂಗಳಂ...

    ReplyDelete
  4. ಎರ್ರಾಟಾ:
    ನಿಂಬೆ ಗಿಡ ತುಂಬ ಚೆಂದ! ನಿಂಬೆಯ ಹೂವು ತುಂಬ ಸಿಹಿ! ಆದರೆ ನಿಂಬೆಯ ಹಣ್ಣು, ಕಂದ... ತಿನ್ನಲು ಬಹಳ ಹುಳಿ! ಕಹಿ!

    ReplyDelete