About Me

My Photo
ಅರುಣ್ ಎಲ್ Arun L
ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು...
View my complete profile

Monday, November 9, 2009

ಕಪ್ಪು ಮೋಡದ ಹೊಟ್ಟೆ ತುಂಬಿದೆ

ಕಪ್ಪು ಮೋಡದ ಹೊಟ್ಟೆ ತುಂಬಿದೆ
ಅಪ್ಪುಗಡಲನೆ ಒಡಲು ನುಂಗಿದೆ
ಕತ್ತಲೊಳು ಚುಕ್ಕಿಗಳೆ ಕಾಣದೆ
ಚಿತ್ತದೊಳಗಡೆ ಪ್ರಾರ್ಥನೆ
ಸುತ್ತ ಕತ್ತಲ ಸ್ಥಾಪನೆ!

ಗೂಡು ಸೇರುವ ಹಕ್ಕಿ ಗುಂಪಿಗೆ
ಜಾಡು ಹುಡುಕುವ ಕಾಲ ಬಂದಿದೆ!
ಅಷ್ಟು ಕತ್ತಲನೇಕೆ ಕರುಣಿಸಿ
ಸೃಷ್ಟಿ ಕಷ್ಟವನುಳಿಸಿತು?
ತುಷ್ಟ ನಿಷ್ಠೆಯನಳಿಸಿತು?

-ಅ
09.11.2009
3.15PM

6 ಅನಿಸಿಕೆಗಳು:

Srikanth - ಶ್ರೀಕಾಂತ said...

ella vidhileele... chennaagide kavana

Vijaya said...

sadhya ... hakkigalu belakondanne avalambisilla jaadu hodukokke ... bachaavu :-)

ತುಷ್ಟ ನಿಷ್ಠೆಯನಳಿಸಿತು ... pretty strong words ...
but .. chennagide! :-)

ಶ್ರೀನಿಧಿ.ಡಿ.ಎಸ್ said...

chennagidyallo!!:)

Parisarapremi said...

[ಶ್ರೀನಿಧಿ] ಹೆ ಹ್ಹೆ, ನೀ ಹಾಕಿರೋ ಆಶ್ಚರ‍್ಯ ಸೂಚಕ ಚಿಹ್ನೆಗಳು ಯಾಕೋ ಬೇರೇ ಇನ್ನೇನೋ ಹೇಳುವಂತಿದೆಯಲ್ಲಾ? ;-) ;-)

[ವಿಜಯಾ] ಕನ್ನಡದಲ್ಲಿರುವ ಪದಗಳನ್ನು ಕನ್ನಡಿಗರು ಬಳಸಬೇಕಷ್ಟೆ? ;-)

ಹಕ್ಕಿಗಳು ಏನೇನೋ ಜಾಡು ಹಿಡಿದು ಹೋಗುತ್ತವೆ.. ಕತ್ತಲಾದಾಗ ಬೆಳಕಿನ ಜಾಡು ಹಿಡಿದು ಹೋಗುತ್ತವೆ! :-)

[ಶ್ರೀಕಾಂತ] ಹ್ಞೂ, ನೋಡು, ಎಲ್ಲ ವಿಧಿಲೇಲೆಯೇ!

ರಾಜೀವ said...

ಹೌದು ಮೇಷ್ಟೇ. ಮೂರು ದಿನಗಳಿಂದ ಕತ್ಕತ್ಲು. ಮೊನ್ನೆ ಹೀಗೇ ಇದರ ಬಗ್ಗೆ ಒಬ್ಬರ ಜೊತೆ ಮಾತಾಡ್ಥಿರ್ಬೇಕಾದ್ರೆ ಅವರು ಹೇಳಿದ್ದು ಹೀಗೆ -
"ಇದು ವಿರೋಧಿ ಸಂವಥ್ಸರ ಅಲ್ವಾ. ಅದಕ್ಕೆ ಹೀಗೆಲ್ಲಾ ಆಗ್ತಿರೋದು" ಅಂತ.

ವಿರೋಧಿಗೇ ಹೀಗಾದ್ರೆ, ಮುಂದೆ ಬರುವ "ವಿಕೃತಿ", "ಖರ", "ನಂದನ" ಸಂವಥ್ಸರಗಳಲ್ಲಿ ಇನ್ನೇನೇನು ಆಗತ್ತೋ ;-)

Parisarapremi said...

ಅಧೋಗತಿ ಸಂವತ್ಸರದಲ್ಲಿ ಏನಾಗುತ್ತೆ?? ;-)

Post a Comment