Wednesday, December 16, 2009

ಬಾಳಿಗೊಂದು ನಂಬಿಕೆ ;-)

ಬಸ್ ಸ್ಟಾಪಿನಲ್ಲಿದ್ದಾಗ ಲೇಟಾಗಿ ಬಸ್ ಬಂತು ಅಥವಾ ಬಾರದೆಯೇ ಇತ್ತು. ಆಟೋ ಕೂಡ ಸಿಗುವುದಿಲ್ಲ! ಹಾಳಾಗ್ ಹೋಗ್ಲಿ, ನಡೆದುಕೊಂಡು ಹೋಗೋಣ ಅಂದುಕೊಂಡರೆ ಚಪ್ಪಲಿಯೂ ಕಿತ್ತು ಹೋಗುತ್ತೆ. ಬರಿಗಾಲಲ್ಲಿಯೇ ನಡೆಯುತ್ತೇನೆಂದರೆ ಆ ಕಾಲಿಗೆ ಮುಳ್ಳು ಚುಚ್ಚಿಕೊಳ್ಳುತ್ತೆ!! ಇದಕ್ಕೆ ಕಿಸೆಯೊಳಗೆ ಇಪ್ಪತ್ತು ರೂಪಾಯಿ ನೋಟಿರುವುದಲ್ಲದೆ ಬೇರೆ ಏನು ಕಾರಣ ತಾನೆ ಇದೆ?

ಹೊಟೆಲಿನಲ್ಲಿ ಬೇಕಾದ ತಿಂಡಿ ಸಿಗುವುದಿಲ್ಲ, ಸಿಕ್ಕರೆ ತಿಂದದ್ದು ಜೀರ್ಣವಾಗುವುದಿಲ್ಲ. ಸಾಮಾನ್ಯವಲ್ಲ ಈ ನೋಟು! ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಹುಟ್ಟು ಹಾಕಿದ್ದೇ ಈ ನೋಟು ಎಂದು ದೈವವಾಣಿಯೇ ಇದೆ! ಬಡತನ, ಭ್ರಷ್ಟಾಚಾರ, ಸ್ವೇಚ್ಛಾಚಾರ, ಡಂಬಾಚಾರ, ಅನಾಚಾರ, ಬಾಲಾಚಾರ, ಸಮಾಚಾರ - ಇನ್ನೂ ಏನೇನು ಆಚಾರಗಳಿಗೆ ಬುನಾದಿಯಾಗಿದೆಯೋ ಯಾರಿಗೆ ಗೊತ್ತು! ಬ್ರಿಟಿಷರನ್ನು "ಭಾರತ ಬಿಟ್ಟು ತೊಲಗಿ"ಸಿದಾಗಲೇ ಈ ನೋಟನ್ನೂ ಉಚ್ಚಾಟಿಸಬೇಕಿತ್ತು - ಯಾಕೊ ಆಗಿನ ವಿತ್ತ ಸಚಿವರು ಮನಸ್ಸು ಮಾಡಲಿಲ್ಲ. ಅವರು ಮಾಡಿದ ತಪ್ಪಿಗೆ ನಾವು ಈಗಲೂ ಅನುಭವಿಸುತ್ತಿದ್ದೇವೆ - ಹಣೆಬರಹ!

ಸಮಸ್ಯೆಯನ್ನು ಹೇಳಿದರೆ ಸಾಲದು, ಪರಿಹಾರವೂ ಹೇಳಬೇಕಲ್ಲವೆ? ಬಹಳ ಸುಲಭ. ಯಾರು ಈ ನೋಟನ್ನು ಕೊಡುತ್ತಾರೋ ಅವರಿಗೇ ಹಿಂದಿರುಗಿಸಿ ಚಿಲ್ಲರೆ ಪಡೆದುಬಿಡುವುದು ಸುರಕ್ಷಿತ ಮಾರ್ಗ. ಇದನ್ನು ಮನುಸ್ಮೃತಿಯಲ್ಲೂ ಹೇಳಿದೆ. ಈಗಿನ ಕಾಲದಲ್ಲಿ ಶ್ರುತಿ-ಶಾಸ್ತ್ರ-ಸ್ಮೃತಿ-ಪುರಾಣಗಳನ್ನು ಯಾರು ತಾನೆ ಓದುತ್ತಾರೆ, ದುರಂತ!ಹೇಳೋದೆಲ್ಲ ಹೇಳಿಯಾಗಿದೆ, ಇನ್ನಾದರೂ ತಿದ್ದುಕೊಂಡು ಎಚ್ಚೆತ್ತುಕೊಳ್ಳುವುದು ಒಳ್ಳೇದು. ಆದರೆ ನರಕವನ್ನು ಬಯಸಿ ಬಯಸಿ ಹೊಗುತ್ತಾರಲ್ಲಾ ಜನ?

ಅಯ್ಯೋ, ಇವತ್ತು ಬ್ಯಾಂಕಿನಲ್ಲೊಬ್ಬರು ಕಂತೆ ಕಂತೆ ಹಣವನ್ನು ಡ್ರಾ ಮಾಡಿ, ಎಣಿಸಿಕೊಂಡು ಒಂದು ಸಾವಿರ ರೂಪಾಯಿಗೆ "ಇಪ್ಪತ್ತು ರೂಪಾಯಿ ನೋಟುಗಳನ್ನು ಕೊಡಿ" ಎಂದು ಪಡೆದರು! ಅಗೆದಿರುವ ಹೊಂಡದೊಳಕ್ಕೆ ಹೀಗೂ ಬೀಳುತ್ತಾರಾ ಅಂತ ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ!! ಅಲ್ಲ, ಒಂದು ನೋಟಿಟ್ಟುಕೊಂಡೇ ಕೆಲಸ ಕೆಡುತ್ತೆ, ಇನ್ನು ಒಂದು ಸಾವಿರ ರೂಪಾಯಿಗೆ - ಅಂದರೆ ಐವತ್ತು ನೋಟುಗಳು. ತಲೆ ಗಟ್ಟಿಯಿದೆ ಅಂತ ಬಂಡೆಗೆ ಚಚ್ಚಿಕೊಳ್ಳುವಂತಹ ದುಸ್ಸಾಹಸ ಇದು!

ಮೊನ್ನೆ ಹೀಗೇ ಪುತ್ತೂರಿನ ಬಸ್ ಸ್ಟಾಂಡಿನಲ್ಲಿ ನಿಂತಿದ್ದೇವೆ - ಮಂಗಳೂರಿಗೆ ಹೋಗಲು ಒಂದು ರಾಜಹಂಸವೂ ಇಲ್ಲ, ಒಂದು ಕರ್ನಾಟಕ ಸಾರಿಗೆಯೂ ಇಲ್ಲ! ಬರ್ರೀ ಸೆಮಿ-ಡಿಲಕ್ಸೇ! ಅದಕ್ಕೆ ಬೇರೇನೂ ಕಾರಣವಿಲ್ಲ, ಎರಡು ದಿನವಾದ ಮೇಲೆ ಗೊತ್ತಾಯಿತು ಚೀಲದೊಳಕ್ಕೆ ಯಾವಾಗಲೋ ಒಂದು ಇಪ್ಪತ್ತು ರೂಪಾಯಿ ನೋಟು ನುಸುಳಿಕೊಂಡುಬಿಟ್ಟಿದೆ. ಈ ’ಸೆಮಿ ಡಿಲಕ್ಸ್’ ಹೆಸರನ್ನು ಕೇಳಿದರೇ ಸಾಕು, ಶ್ರೀಕಾಂತ ಸ್ನಾನ ಮಾಡುವನು. ನಾನು ತಲೆ ಮರೆಸಿಕೊಳ್ಳುವೆನು! ಜೀವನದಲ್ಲಿ ಒಮ್ಮೆ ಕೆ.ಎಸ್.ಆರ್.ಟಿ.ಸಿ.ಯ ಸೆಮಿ ಡಿಲಕ್ಸಿನಲ್ಲಿ ಪ್ರಯಾಣ ಮಾಡಿಬಿಟ್ಟರೆ ಸಾಕು - ಹತ್ತು ಇಪ್ಪತ್ತು ರೂಪಾಯಿ ನೋಟನ್ನು ಹೊಂದಿದ ಪಾಪ ಕರ್ಮವು ನಮ್ಮನ್ನು ಲೇಪಿಸಿಕೊಳ್ಳುತ್ತೆ. ಈ ಕರ್ಮವನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ - ಪ್ರಯಾಣದ ಮೇಲೆ ಪ್ರಯಾಣ ಮಾಡುತ್ತಲೇ ಇರಬೇಕು - ಕರ್ನಾಟಕ ಸಾರಿಗೆಯಲ್ಲೋ, ರಾಜಹಂಸದಲ್ಲೋ. ಮತ್ತೊಮ್ಮೆ ಅಪ್ಪಿತಪ್ಪಿ ಸೆಮಿ-ಡಿಲಕ್ಸೇ ಸಿಕ್ಕೀತೆಂದರೆ ಕಥೆ ಮುಗಿಯಿತು! ಪುನರಪಿ ಜನನಂ ಪುನರಪಿ ಮರಣಂ...

ಈಗ ಮೆಜೆಸ್ಟಿಕ್ಕಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ತನ್ನ ಸ್ಥಾನವನ್ನು ಮೆಟ್ರೋಗೆ ಬಿಟ್ಟುಕೊಡುತ್ತಿರಲು ಮುಖ್ಯಕಾರಣಗಳು - (೧) ದೇಶದಲ್ಲಿ ಎಲ್ಲೆಡೆಯೂ ಇಪ್ಪತ್ತು ರೂಪಾಯಿ ನೋಟು ಚಲಾವಣೆಯಲ್ಲಿರುವುದು - ಮತ್ತು ಆ ನೋಟನ್ನು ಕೆ.ಎಸ್.ಆರ್.ಟಿ.ಸಿ.ಯವರೂ ಸಹ ಬಳಸುವುದು (೨) ಸೆಮಿ-ಡಿಲಕ್ಸ್ ಬಸ್ಸನ್ನು ಓಡಿಸುತ್ತಿರುವುದು. ಏನು ಮಾಡೋಕಾಗುತ್ತೆ ಈಗ - ಅನುಭವಿಸಲೇ ಬೇಕು. ಇವೆರಡೂ ಇಲ್ಲದಿದ್ದರೆ ಮೆಜೆಸ್ಟಿಕ್ಕಿನಲ್ಲೇ ಬಸ್ ನಿಲ್ದಾಣ ಉಳಿದುಕೊಳ್ಳುತ್ತಿತ್ತು!

ಇದನ್ನೆಲ್ಲ ಬರೆದು ಅಪ್‍ಲೋಡ್ ಮಾಡೋಕೆ ಸದ್ಯ ಇಂಟರ್ನೆಟ್ ಇದೆಯಲ್ಲಾ ಅಂತ ಸಂತೋಷ. ಸಮಾಧಾನವೆಂದರೆ ಬಿ.ಎಸ್.ಎನ್.ಎಲ್. ಇಲ್ಲವಲ್ಲ ಎನ್ನುವುದು!

-ಅ
16.12.2009
9.30PM

20 comments:

 1. whats wrong ante ... 20rs note!!!
  nin kainalli 20rs note ... raama raama...

  ReplyDelete
 2. ತಲೆ-ಬುಡ ಅರ್ಥ ಆಗ್ಲಿಲ್ಲ. ಮಿಕ್ಕಿದ್ದು ಅರ್ಥ ಆಯ್ತಾ ಅಂತಾ ಕೇಳ್ಬೇಡಿ ದಯವಿಟ್ಟು.

  << ಇದನ್ನು ಮನುಸ್ಮೃತಿಯಲ್ಲೂ ಹೇಳಿದೆ >>
  ರೆಫೆರೆನ್ಸ್ ಕೊಡ್ತೀರ ಪ್ಲೀಸ್? ನಾವೂ ಅದನ್ನ ಓದಿ ಪುಣ್ಯ ಕಟ್ಕೋತೀವಿ.

  ReplyDelete
 3. ಇದನ್ನು ಓದಿದ ಮೇಲೆ ೨೦ ರೂಪಾಯಿ ನೋಟಿಗಾಗಿ ನನ್ನ ಪರ್ಸಿನಲ್ಲಿ ತಡಕಾಡಿದೆ ! :)

  ReplyDelete
 4. gurgugale...samaadhaana. shanti. taaLme !

  ReplyDelete
 5. [ಲಕುಮಿ] ಎಲ್ಲಿಂದ ಬರಬೇಕು!!

  [ವಿ.ರಾ.ಹೆ.] ಯಾವ್ದಕ್ಕೂ ನಿಮ್ ಹುಷಾರಲ್ಲಿ ನೀವ್ ಇರೋದು ಕ್ಷೇಮ.

  [ರಾಜೀವ] ಅಯ್ಯೋ, ಬಿಡಿ, ರೆಫೆರೆನ್ಸ್ ಎಲ್ಲ ಯಾಕ್ ಈಗ!!

  [ಅನಾನಿಮಸ್] ?

  [ವಿಜಯಾ] ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ...

  [ಸುಶ್ರುತ ದೊಡ್ಡೇರಿ] ಕಣ್ತೆರೆದು ನೋಡು.

  [ಶ್ರೀ] this!

  ReplyDelete
 6. ಅದೇನು ವಿಷಯ ಹೇಳ್ರಿ. ಕುತೂಹಲ ಕಾಡ್ತಾಯಿದೆ.
  ನಾನು ಇನ್ಯಾರಿಗೂ ಹೇಳುವುದಿಲ್ಲ. ಪ್ರೋಮಿಸ್.

  ReplyDelete
 7. ಅಯ್ಯೋ, ಇದ್ರಲ್ಲೇನಿದೆ ವಿಷಯ? ಎಲ್ಲವೂ ತ್ರಿಕಾಲ ಸತ್ಯವಷ್ಟೆ? ;-)

  ReplyDelete
 8. ಅದೇನು ತ್ರಿಕಾಲ ಸತ್ಯಾನೋ ಏನೋ. ನನಗಂತೂ ತಿಳಿಯಲಿಲ್ಲ :-(
  ನನ್ನ ಜೇಬಿನಲ್ಲಿ ೨೦ ರೂ ನೋಟು ಇರುವುದಂತೂ ಸತ್ಯ.

  ReplyDelete
 9. What happned aruna ?

  ReplyDelete
 10. nin job tumbaaa 20rupaay noTgaLu tumbkoLLi. ;-)

  ReplyDelete
 11. [anonymous] so far, so good.. may i know who you are?

  [sridhara] yaakkO, yengaithe maige??

  [raajeeva] hushaaru swami!!

  ReplyDelete
 12. ondu incidence ivattindu!! annana hatra 20 rupaayi note ittu... majestic ge 1 buss-u barlilla.. adna karch maadid takshna 1 bus bantu!!!!! :)

  ReplyDelete
 13. ahahahhaah.... I like this latest comment :)
  nambike gatti aagodu andre hinge.....

  ReplyDelete
 14. [ದಯಾನಂದ] ಹೆ ಹ್ಹೆ, ಹ್ಞೂಂ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸರ್ಪ ಸಂಸ್ಕಾರ ಮಾಡಿಸಿಕೊಂಡರೆ ಭವ ರೋಗಗಳೂ ನಿವಾರಣೆಯಾಗುವುದಿಲ್ಲವೇ? ಅಥವಾ ನಂಜನಗೂಡಿನಲ್ಲಿ ಏನೋ ಹರಕೆ ಹೊತ್ತು ಉರುಳು ಸೇವೆ ಮಾಡಿದರೆ ಮನೆಯಲ್ಲಿ ನೆಮ್ಮದಿ ಸಿಗುವುದಿಲ್ಲವೇ? ಹಾಗೇ ನಂಬಿಕೆ ಹುಟ್ಟೋದು, ಬೆಳೆಯೋದು!

  [ಭವ್ಯಾ] ಹ ಹ್ಹ ಹ್ಹಾ, ಆ ಬಂದ ಬಸ್ ಕಂಡಕ್ಟರ್ ಪರ್ಸನ್ನು ಚೆಕ್ ಮಾಡ್ಬೇಕಿತ್ತು, ಅದೆಷ್ಟು ಇಪ್ಪತ್ತು ರೂಪಾಯಿ ನೋಟಿತ್ತೋ ಅವನ ಹತ್ತಿರ!!

  ReplyDelete
 15. ಪವಿತ್ರವಾದ ಇಪ್ಪತ್ತು ರೂಪಾಯಿ ನೋಟು ಎಲ್ಲಿ, ಹೊಲಸು ಸೆಮೀ ಡೀಲಕ್ಸ್ ಬಸ್ಸು ಎಲ್ಲಿ? ಸೆಮೀ ಡೀಲಕ್ಸ್ ಬಸ್ಸಲ್ಲಿ ಕೂತು ಇಪ್ಪತ್ತು ರೂಪಾಯಿ ನೋಟಿನ ಬಗ್ಗೆ ಅಪಾರ್ಥ ಮಾಡಿಕೊಂಡಂತಿದೆ ನೀನು.

  ReplyDelete
 16. ನೀನು ಸೈತಾನನ ಆರಾಧಕನಾಗಿದ್ದೀಯ!

  ReplyDelete
 17. Enu maaDodu? 121 degree jaataka! karma anubhavisale bekalla!

  ReplyDelete