Thursday, February 11, 2010

ಚಿಕ್ಕ ಜಗತ್ತು

ಅದೆಷ್ಟು ಚಿಕ್ಕದೀ ಜಗವು!?!
ಇಲ್ಲೇ ಇರುವುದಲ್ಲ
ಬಾಳ ಬಯಕೆಗಳೆಲ್ಲ!
ದೂರ ಪಯಣದ ಹಾದಿ
ಚಿಕ್ಕ ಜಗದೊಳಗೇಕೆ?

ಅದೆಷ್ಟು ಚಿಕ್ಕದೀ ಜಗವು!?!
ಎದುರೆ ನಡೆಯುತಲಿಹರು
ದಾರಿ ತೋರಿದ ಜನರು
ಹಿಂದೆ ಸಾಗುತಲಿರಲು
ಹಾದಿಯರಸುವ ಸಖರು.

ಅದೆಷ್ಟು ಚಿಕ್ಕದೀ ಜಗವು!?!
ಬದಿಯಲೆ ಇರುವರಲ್ಲ
ಕನಲ ಕಟ್ಟಿಸಿದವರು!
ಹೊನಲ ಹರಿಯಿಸಿದವರು!
ಅದೆಷ್ಟು ಚಿಕ್ಕದೀ ಜಗವು!?!
ಆದರೂ,
ಅದೆಷ್ಟು ವಿಶಾಲವೀ ಜಗವು!!?!!

-ಅ
11.02.2010
2.20PM

15 comments:

  1. ಕವಿತೆ ಮುದ್ದಾಗಿದೆ

    ReplyDelete
  2. ಅರುಣ,
    ಅದೆಷ್ಟು ಚಿಕ್ಕದೀ ಕವನ!
    ಆದರೂ ಇದರಲ್ಲಡಗಿದೆ
    ಎಷ್ಟೆಲ್ಲ ಭಾವನಾ!

    ReplyDelete
  3. [ಸುನಾಥ್] ಅಂತೂ ನಾನಾದೆ ಪಾವನಾ!

    [ಕನಸು ಮತ್ತು ಮನಸು] ಬಹಳ ಧನ್ಯವಾದಗಳು.. ಹಾಗೆ, ನನಸಿಗೂ ಒಂದು ಧನ್ಯವಾದ!

    [ವಿಜಯಾ] ಎಲ್ಲಾ ಕಡೆ ಬರ್ರೀ ಹೊನಲು, ಬರ್ರೀ ಹೊನಲು! ಜಾಸ್ತಿ ಆದ್ರೆ ಗೊತ್ತಲ್ಲ, ಹೊನಲು ನೆರೆ ಆಗ್ಬಿಡುತ್ತೆ!

    ReplyDelete
  4. chennaagide, adrallu ee saalugaLu

    ಅದೆಷ್ಟು ಚಿಕ್ಕದೀ ಜಗವು!?!
    ಆದರೂ,
    ಅದೆಷ್ಟು ವಿಶಾಲವೀ ಜಗವು!!?!!

    ReplyDelete
  5. 10 percent ashte artha aagiddu. en artha aaytu antella keLbedi.

    ReplyDelete
  6. [ಶ್ರೀಕಾಂತ್] ನನಗೂ ಆ ಸಾಲಿನಲ್ಲಿರುವ ಆಶ್ಚರ್ಯ ಸೂಚಕ ಚಿಹ್ನೆಗಳು ಇಷ್ಟವಾದುವು.

    [ಭವ್ಯಾ] :-) ಥ್ಯಾಂಕ್ಯೂ!

    [ಲಕುಮಿ] ಹಾಗೆ ಕೇಳಲ್ಲ, ಬೇರೆ ಥರ ಕೇಳ್ತೀನಿ. ಇನ್ನು 90 percent ಏನು ಅರ್ಥ ಆಗ್ಲಿಲ್ಲ?

    ReplyDelete
  7. ನಿಜ, ಸ್ವದೇಶೋ ಭುವನತ್ರಯಮ್!

    ReplyDelete
  8. ಅದೆಷ್ಟು ಚಿಕ್ಕದೀ ಜಗವು!?!
    ಆದರೂ,
    ಅದೆಷ್ಟು ವಿಶಾಲವೀ ಜಗವು!!?!!

    hehe confused aa neevu!!?!!

    ReplyDelete
  9. [ಸುನಾಥ್] ಇದೇನು ಎರಡನೆಯ ಕಮೆಂಟು? ಇರಲಿ. ಹೌದು, ಭುವನತ್ರಯವೂ ಸ್ವದೇಶವೇ, ಆದರೆ ಸ್ವದೇಶವೇ ವಿದೇಶವಾಗುವಂತಿದೆ!! :(

    [ಡೈನಮಿಕ್] ಇಲ್ಲ. ಶ್ಯೂರ್ ಆಗಿದೀನಿ.

    ReplyDelete
  10. Sooooooooo jagavu chikkuda doddada.????????
    adare kavana channagide

    ReplyDelete
  11. ಚೆನ್ನಾಗಿದೆರೀ ಕವನ.. :) ಅಂದಹಾಗೆ ತಲೆಬರಹ ’ಜಿಕ್ಕ’ ಜಗತ್ತಾಗಿ ಬಿಟ್ಟಿದೆ..

    ReplyDelete
  12. [ರೂಪ] ಚಿಕ್ಕದೋ ದೊಡ್ಡದೋ ನಿಮಗೇ ಬಿಟ್ಟಿದ್ದು. ನನಗಂತೂ ತುಂಬಾ ದೊಡ್ಡದು ಎನ್ನಿಸುತ್ತಿದೆ.

    [ಅನಂತ] ಹ ಹ್ಹ ಹ್ಹಾ... ಒಳ್ಳೇ ಜಿಕ್ಕ!!! ಸರಿಪಡಿಸಿದೆ.. ತುಂಬ ಥ್ಯಾಂಕ್ಸ್ ಸರ್..

    ReplyDelete