Wednesday, February 24, 2010

ಅತಿಥಿ

ಜ್ಯೋತ್ಸ್ನಾಲಂಕೃತ ಬಾಂದಳಪರದೆಯೊಳೇನು, ಅಹ! ಈ ಹೊಸ ಛಾಯೆ?
ಬೆಳಕಿನ ಪುಳಕವನಳೆಯಲು ನೆಳಲಿನ ಸೆಳೆತದ ಹೊಳೆಯೇ ಈ ಮಾಯೆ!

ನಿತ್ಯಾಮಂತ್ರಿತ ಸತ್ಯಾಸಜ್ಜಿತ ಕೃತ್ಯಾಧೀನದಿ, ಓ ಅತಿಥಿ,
ನಡೆಸುವನೊಡೆಯನ ಹಿಡಿತದೊಳಡಗಿಹ ಒಡಲಿನ ಬಂಡಿಗೆ ನೀನೆ ರಥಿ!

ಸರಸವಿರಸದೊಳಗೆಷ್ಟೋ ರೂಪದಿ ಪ್ರತ್ಯಕ್ಷವೊ ನಿನ್ನಯ ಲೀಲೆ.
ಬಂದಿಹೆಯೈ ನೀನಿಲ್ಲಿಗೆ, ಬಾ! ಸೆಳೆದೊಯ್ಯುವಗೇತಕೆ ಕರೆಯೋಲೆ?

-ಅ
24.02.2010
3PM

8 comments:

  1. eno idu? ನಿತ್ಯಾಮಂತ್ರಿತ ಸತ್ಯಾಸಜ್ಜಿತ ಕೃತ್ಯಾಧೀನದಿ?

    ReplyDelete
  2. ಅಬ್ಬ, ಎಲ್ಲ ದೊಡ್ಡ ದೊಡ್ಡ ಪದಗಳೇ. ಕಾವ್ಯ ಪ್ರತಿಭೆ ನಿಮ್ಮಲ್ಲಿದೆ

    ReplyDelete
  3. Sooper aagide. Enu artha aaglilla.

    ReplyDelete
  4. @vijaya - ನಿತ್ಯಾಮಂತ್ರಿತ ಸತ್ಯಾಸಜ್ಜಿತ ಕೃತ್ಯಾಧೀನದಿ andre kareede iruvaaga henDti ready aagde iruvaaga bandu nammanna kashTakke sikkaaksteeyallo atithi anta!

    ReplyDelete
  5. tamaashi ge heLde... aa line na tappu tappaagi biDsidre baro artha adu... sariyaagi biDsdaaga alla... nangeno poorti artha aagdidroo ee kavana sooryana bagge bardirodu anstu...

    ReplyDelete
  6. [ಶ್ರೀಕಾಂತ] ಒಳ್ಳೇ ತಮಾಷೆ. ಇತ್ತೀಚೆಗೆ ನೀನ್ಯಾಕೋ ತಮಾಷೆಯನ್ನು ಕಡಿಮೆ ಮಾಡಿಕೊಂಡು ಬಿಟ್ಟಿದ್ದೀಯ. ತಮಾಷೆ ಮಾಡುವುದೇ ತಪ್ಪೆನ್ನುವ ಹಾಗೆ ನಿನ್ನ ಎರಡನೆಯ ಕಮೆಂಟಿದೆ. ನೀನೇಕೆ ಹೀಗೆ? ;-)

    [ಅನಾನಿಮಸ್] ಹ ಹ್ಹ ಹ್ಹಾ.. ಹೋಗ್ಲಿ ಬಿಡಿ! ಸೂಪರ್ ಅಂದ್ರೆ ಏನು ಅಂತ ಅರ್ಥ ಆಯಿತು ನಂಗೆ.. ;-) ;-)

    [ದೀಪಸ್ಮಿತಾ] ಧನ್ಯವಾದಗಳು ದೀಪಸ್ಮಿತಾ ಅವರೇ. ಆದರೆ, ದೊಡ್ಡ ದೊಡ್ಡ ಪದಗಳು ಇದ್ದ ಮಾತ್ರಕ್ಕೆ ಕಾವ್ಯಪ್ರತಿಭೆಯು ಇರುವುದೆಂದು ನಾನು ಸಂಪೂರ್ಣವಾಗಿ ಒಪ್ಪಲಾಗದ ವಿಷಯ. ಇಲ್ಲಿ, ಕೆಲವು ಕಾರಣಗಳಿಂದ ಈ ಪದಗಳನ್ನು ಬಳಸಿದ್ದೇನಷ್ಟೆ! :-)

    [ವಿಜಯಾ] ನಿತ್ಯ + ಆಮಂತ್ರಿತ, ಸತ್ಯ + ಅಸಜ್ಜಿತ, ಕೃತ್ಯ + ಅಧೀನ ಎಲ್ಲವೂ ಸವರ್ಣದೀರ್ಘಸಂಧಿಗೆ ಉದಾಹರಣೆ. ನೋಡು, ನನ್ನ ಕವನದಲ್ಲಿ ನೀನು ವ್ಯಾಕರಣ ಕಲಿಯಬಹುದು! ;-) ;-)

    ReplyDelete
  7. yaako appa bardid sublime visitor nenpaagtide nange.

    ReplyDelete
  8. nanagoo nenapaaytu, aaspatrege hOgOke munche.. - ee kavana Odbittu. :-)

    ReplyDelete