Monday, April 26, 2010

ಆಸ್ತಿಕನ ಉತ್ತರ

ನಾಸ್ತಿಕರು ಆಸ್ತಿಕರನ್ನು ಕೆಲವು ಪ್ರಶ್ನೆಗಳನ್ನು ಕೇಳಿ ಗೆಲ್ಲಲಾಗುವುದಿಲ್ಲವೆಂದು ಖಾತ್ರಿಯಾಯಿತು. ನಾಸ್ತಿಕನು ಈ ಮೂರಕ್ಕೂ ಮರುತ್ತರ ನೀಡಲು ಸಾಧ್ಯವಾಗುವುದು ಇಂಗ್ಲಿಷಿನಲ್ಲಿ "ಓಕೆ" ಎಂದು. ಕನ್ನಡ ಪ್ರೇಮಿಯಾಗಿದ್ದರೆ "ಸರಿ" ಎನ್ನಬಹುದು.

ನಾಸ್ತಿಕನ ಪ್ರಶ್ನೆ ೧. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ನಿಮ್ಮ ದೇವರಿಗೆ ಕರುಣೆಯೇ ಇಲ್ಲವೇ?

ಆಸ್ತಿಕನ ಉತ್ತರ: ಅವೆಲ್ಲ ಪೂರ್ವಜನ್ಮದ ಕರ್ಮಗಳು. ಅನುಭವಿಸಲೇ ಬೇಕು.

ನಾಸ್ತಿಕನ ಪ್ರಶ್ನೆ ೨. ಎಲ್ಲವೂ ಪೂರ್ವನಿಶ್ಚಿತ ಅಂದ ಮೇಲೆ ನೀವೂ ವ್ಯಥೆ ಪಡುತ್ತೀರ ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ, ಕೆಲವಕ್ಕೆ. ಯಾಕೆ?

ಆಸ್ತಿಕನ ಉತ್ತರ: ಅದೂ ಸಹ ಪೂರ್ವನಿಶ್ಚಿತವೇ.

ನಾಸ್ತಿಕನ ಪ್ರಶ್ನೆ ೩. ಅಲ್ಲಾ, ನೀನಾದರೋ ದೈವಭಕ್ತೆ. ಪೂಜೆಯಾದರೂ ಮಾಡು, ತಪಸ್ಸಾದರೂ ಮಾಡು. ನಾನ್ಯಾಕೆ ಪೂಜೆ ಮಾಡಬೇಕು? (ಹೆಂಡತಿಯನ್ನು ಕೇಳಿದ ಗಂಡ).

ಆಸ್ತಿಕಳ ಉತ್ತರ: ಸುಮ್ನೆ ಮಾಡಿ.

-ಅ
26.04.2010
3.25PM

5 comments:

  1. so.. ಈಗ ಮನೆಲ್ಲಿ ಸುಮ್ನೆ ಪೂಜೆ ಮಾಡ್ತೀದ್ದೀರ ಅಂತ ಆಯ್ತು ;), ಇಲ್ಲಾಂದ್ರೆ ನಿಮಗೆ ಪೂಜೆ ಆಗುತ್ತಲ್ಲ ;)

    >>ಕನ್ನಡ ಪ್ರೇಮಿಯಾಗಿದ್ದರೆ "ಸರಿ" ಎನ್ನಬಹುದು>>

    ’ಸರಿ’ ಅನ್ನಕ್ಕೆ ಕನ್ನಡ ಪ್ರೇಮಿಯೇ ಆಗಬೇಕಂತಿಲ್ಲ. ;)

    ReplyDelete
  2. ಗಣಿತದ ಪ್ರೇಮಿಯೂ ಆಗಿರಬಹುದು ಅಂತೀರಾ? ;-)

    ReplyDelete
  3. ಬರೀ ಪ್ರೇಮಿ ಆಗಿರಬಹುದು, ಅಲ್ಲದೇನೇ ಇರಬಹುದು ;)

    ReplyDelete