Monday, May 24, 2010

ನಿನ್ನೊಲವ ಜಗದಿಂದ ನಾ ದೂರವಾದೆ

ನಿನ್ನೊಲವ ಜಗದಿಂದ ನಾ ದೂರವಾದೆ.
ದೂರ ದೂರದ ಹಾದಿ ನಾ ತಿಳಿಯದಾದೆ,
ಗುರಿಯರಸಿ ಹೋಗುವೆಡೆ ನಾನೆ ಮರೆಯಾದೆ,
ಹಿಂದಿರುಗದಾದೆ.

ಕಂಬನಿಯು ಹರಿಯುತಿರೆ ಅದನೆ ಕುಡಿವಂತೆ,
ಎದೆಯುಕ್ಕಿ ಹೊಮ್ಮುತಿರೆ ಮೊಗದಿ ಹಿಡಿವಂತೆ,
ನಿನಗಂದು ನಾನಿತ್ತ ಮಾತು ಉಳಿವಂತೆ,
ಬದುಕುಳಿದು ನಿಂತೆ.

ಮಂದಿರದಿ ನಾನೊಂದು ನಂದಿರುವ ಹಣತೆ,
ಸಂತಸದಿ ನೀನಿರಲು ಇಹುದೆನ್ನ ಹರಕೆ.
ಬಾಳಲ್ಲಿ ನನದೆಂದು ಇಲ್ಲಿರುವುದೊಂದೇ,
ನಿನ್ನ ನೆನಪೊಂದೇ!

-ಅ
24.05.2010
2.30PM

13 comments:

  1. hmmm.... nice... tumba chennagide.... :-) yaar inspirationnu.. ;-)

    ReplyDelete
  2. illondsala helteeni ... Super...!!! shOka rasadalloo onthara 'idu' ide alwa?

    ReplyDelete
  3. [Vijaya] Aa 'idu' innond swalpa 'adu' aagbekadre ondishtu Scotch-u, background-alli Jagjit Singh ghazal-gaLu iddre....che, aa dinagaLu esht bega hortehodvu. Nenneyadu nenapante, naaLeyadu kanasante etc etc.

    [Arun] Shokarasa enhancing formula heLidini, noDappa, melgade. Kavana adbhuta, needless to say.

    ReplyDelete
  4. [ಅರ್ಜುನ] ಹ್ಞೂಂ, ಶೋಕಕ್ಕಿಂತ ಆನಂದ ಕೊಡುವಂಥದ್ದು ಇನ್ನೇನಿದೆ!!

    [ವಿಜಯಾ] ಆ "ಇದು" ಮುಕೇಶನ ಹಾಡುಗಳಲ್ಲಿ ಜಾಸ್ತಿ ಇದೆ, ಕಿಶೋರನ ಹಾಡುಗಳಿಗಿಂತ.

    [ಗೌರೀ] ಇನ್ಸ್ಪಿರೇಷನ್ನಾ? ಕಿಶೋರ್ ಕುಮಾರ್.

    ReplyDelete
  5. ಭಾವಪೂರ್ಣವಾದ ಕವನ.

    ReplyDelete
  6. Very Nice Arun sir...
    I liked it.... :-)

    ReplyDelete
  7. good write up...
    pls visit

    www.vanishrihs.blogspot.com

    ReplyDelete
  8. thumba chennaagi mooDibandide Arun.

    Innoo Beku

    Nagesh

    ReplyDelete
  9. [ನಾಗೇಶ್] ಧನ್ಯವಾದಗಳು. ಇನ್ನೂ ಬೇಕಾ? ಅಲ್ಲಾ, ಅಳೋದು ಅಂದ್ರೆ ಅಷ್ಟಿಷ್ಟಾನಾ? :-P

    [ವಾಣಿಶ್ರೀ] ಧನ್ಯವಾದಗಳು, ನಿಮಗೂ.

    [ದಿವ್ಯಾ] ಥ್ಯಾಂಕ್ಯೂ!

    [ಸುನಾಥ್] ಶೇ. ತೊಂಭತ್ತೈದು ಭಾಗ ಭಾವಪೂರ್ಣತೆಯು ’ಪವಿತ್ರಪಾಪಿ’ಗೆ ಸಲ್ಲಬೇಕು ನೋಡಿ.

    ReplyDelete
  10. ಮಂದಿರದಿ ನಾನೊಂದು ನಂದಿರುವ ಹಣತೆ ------
    yaake yaar hatraanuu ond match box ilwaaa????

    ReplyDelete
  11. Thumba bhava poornavagidhri. Nanna sangathiyannu kalkondu ondhu thingalaythu, dhukha padodanna nillisbeku, yenadru hosadhu odhbeku antha ankondaga sikka nimma e kavana nannannu innashtu kanneerina nadiyalli mulgisbidthu.

    ReplyDelete
  12. [ಅನಾನಿಮಸ್] ನಿಮ್ಮ ಸಂಗಾತಿಯು ನಿಮ್ಮನ್ನು ಕಳೆದುಕೊಂಡಿದ್ದಕ್ಕೆ ನೀವು ವ್ಯಥೆ ಪಡುವುದಕ್ಕಿಂತ, "ಜಿಜೀವಿಷೇತ್ ಶತಂ ಸಮಾಃ" ಅಂತ ಮುಂದಿನ ಕೆಲಸಗಳನ್ನು ನೋಡುವುದು ಬದುಕಿಗೆ ಬಹಳ ಹಿತ ಎಂದು ನನ್ನ ಮತ! :-)

    ನಿಮ್ಮ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತೇನೆ.

    [ದಿವ್ಯಾ] ಇದೆ, ಆದ್ರೆ ತೈಲಾನೇ ಇಲ್ಲ ಹಣತೆಯಲ್ಲಿ!

    [ಮನದಾಳದಿಂದ..] ಧನ್ಯವಾದಗಳು ಸರ್!

    ReplyDelete