Friday, June 4, 2010

ಬರೆಯಿಸು, ಬರೆಯಿಸು

ಬರೆಯಿಸು, ಬರೆಯಿಸು - ನೀ ನನ್ನ ಕೈ ಹಿಡಿದು.

ಬರೆಸಿಹೆಯೆಂದರೆ
ನೀ ಕೈ ಹಿಡಿಯುತ,

ಪ್ರತಿ ನೆನಪಿನ ಚಣ
ಹೃದಯದಿ ನಲಿವುದು;

ಭೂತ-ಭವಿಷ್ಯವು
ಈಗಲೆ ನಡೆವುದು;

ಕಲ್ಪನೆ ಹೆಸರಲಿ
ಕವನ ಜನಿಸುವುದು;

ಬರೆಸಿಹೆಯೆಂದರೆ
ನೀ ಕೈ ಹಿಡಿಯುತ,

ಕ್ಷರ ಬದುಕಲಿ ಅ-
ಕ್ಷರವೇ ಹರಿವುದು!

-06.04.2010
6PM

6 comments:

  1. :-) eno hosa tharaa ide ...

    ReplyDelete
  2. [ಸುಶ್ರುತ] ಅದು, ಏನಾಯ್ತು ಅಂದ್ರೆ.. ಮೊನ್ನೆ ಕಾಳಿದಾಸ ಅಂತ ಒಬ್ಬ ಬಂದಿದ್ದ ಮನೇಗೆ. ಅವನಿಗೆ ಈ ಉಪಮಾಲಂಕಾರ ಅಂದ್ರೆ ಏನು ಅಂತ ತಿಳ್ಕೊಳೋ ಆಸೆ. ಹೇಳ್ಕೊಟ್ಟೆ. ಆಮೇಲೆ ಒಂದೇ ದಿನದಲ್ಲಿ ಇದ್ಬದ್ದಿದ್ ಉಪಮಾಲಂಕಾರ ಎಲ್ಲ ಹಾಕ್ಬಿಟ್ಟ ತಾನು ಬರೆದ ನಾಲ್ಕೈದು ಕವನಗಳಿಗೆ! ಸರಿ, ಉಪಮಾಲಂಕಾರ ಎಲ್ಲಾ ನೀನೇ ಇಟ್ಕೊ ಅಂತ ಹೇಳಿ, ಈಗ ಹಾಗೇ ಕವನ ಬರೀತೀನಿ ಅಂತ ಬರೆದುಬಿಟ್ಟೆ! ಹ್ಯಾಗೆ ನೋಡಿ!! :P

    [ವಿಜಯಾ] ಹೊಸ ಥರಾನಾ? ನಾನು ಫಿಲಾಸಫಿ ಹೇಳಿದರೆ ಹೀಗೇನೇ, ನೋಡು! ;-)

    [ಮನದಾಳದಿಂದ...] ಥ್ಯಾಂಕ್ಯೂ ಸರ್..

    [ಡೈನಮಿಕ್] ನಿಂಗೆ ಇವೆಲ್ಲಾ ಗೊತ್ತಾಗೊಲ್ಲಾಮ್ಮ! ಹೋಗಿ ಆಟಾಡ್ಕೋ..

    ReplyDelete
  3. Oho, idakke munche "Upamaa Arunasya" anta ittalve? Hayagriva Veda kadda haage Kalidasa upamaalankara kadda.

    ReplyDelete