Thursday, July 1, 2010

ಅಕಾಲಮರಣಕ್ಕೆ ಪಯಣ

ಎಂಥ ಹೂವಿದೆಂಥ ಹೂವು,
ಸೊಬಗಿದೇನಿದು?
ಅರಳಿ ನಗುವ ಮೊದಲೆ ಋತುಗೆ
ಬಲಿಯಿದೇಕಿದು?

ಅಳುತ ಬುವಿಗೆ ಬಂದರೇನು,
ನಗುತ ಹೋಗುವೆ.
ನಗುತ ನಗುತ ಕಾಲನೆದುರು
ನಿಂತು ಬೀಗುವೆ.

ಬದುಕನೊಲವಿನಿಂದ ಬಯಸಿ
ಹೊತ್ತು ಕಳೆದೆನು.
ಸಾವಿಗಿಂದು ಬದುಕಿನಷ್ಟೆ
ಪ್ರೀತಿ ಕೊಡುವೆನು.

-ಅ
22.06.2010
11PM

6 comments:

  1. wah wah ...
    Koi samjha nahin, koi jaana nahin!!!

    ReplyDelete
  2. ಹುಟ್ಟು ಸಾವಿನ ಮಧ್ಯೆ ಬದುಕು ಮುಖ್ಯ ಭೂಮಿಕೆ.
    ಚೆಂದದ ಕವನ.

    ReplyDelete
  3. ಅಳುತ ಬುವಿಗೆ ಬಂದರೇನು,
    ನಗುತ ಹೋಗುವೆ.
    ನಗುತ ನಗುತ ಕಾಲನೆದುರು..
    ತುಂಬಾ ಚೆನ್ನಾಗಿದೆ ಸರ್ ಸಾಲುಗಳು.
    ಜೀವ ರಥ ಎಳೆಯಲು ನಗುವಿನ ಸಹಾಯ ಬೇಕೇ ಬೇಕು.
    ನಿಮ್ಮವ,
    ರಾಘು.

    ReplyDelete
  4. [ರಾಘು] :-) ಧನ್ಯವಾದಗಳು..

    [ಮನದಾಳದಿಂದ..] ನಿಮಗೂ ಧನ್ಯವಾದಗಳು.

    [ವಿಜಯಾ] ಹೌದು ಹೌದ್!! ಜೈ ಕಿಶೋರ್ ಕುಮಾರ್!

    ReplyDelete
  5. ಕವನ ಅದ್ಭುತವಾಗಿದೆ. ಬರೀತೀರ ನೀವುನು.

    ನಾನೂ ಈಗ ಪ್ರಾಸ ಮಾಡ್ತೀನಿ:-

    ಇತ್ತ ಹುಟ್ಟು, ಅತ್ತ ಸಾವು,
    ಸರಪಣಿದ್ವಯಂ.
    ಅಂತರದಲಿ ನಗಿಸಿ ನಕ್ಕೆ
    ನೀನು; ವಿಸ್ಮಯಂ.

    ಯಾಕೋ ನಿಮ್ಮ ಕವನದಷ್ಟು ಚನ್ನಾಗಿಲ್ಲ.

    ReplyDelete
  6. ಒಳ್ಳೇ ಪು.ತಿ.ನ. ಸ್ಟೈಲ್ ಅಲ್ಲಿ ಸಾಲುಗಳನ್ನು ಸೇರಿಸಿಬಿಟ್ಟಿದ್ದೀರಲ್ಲಾ ಅರ್ಜುನ ಅವರೇ..

    ReplyDelete