Friday, August 13, 2010

ದೆಸೆ

ನನ್ನ ಸೂರ‍್ಯನಿಗೆ ಗೊತ್ತಿಲ್ಲ
ಗಿರಿಕಂದರಗಳು, ಕಡಲ ತೀರಗಳು.

ಪ್ರತಿನಿತ್ಯವೂ ಹಕ್ಕಿ ಗುಂಪನ್ನು
ತನ್ನೆಡೆಗೆ ಸೆಳೆಯುತ್ತ ಮುಳುಗುವನು,ನಿಜ.
ನನ್ನ ಪಯಣವೂ ಹಕ್ಕಿಗಳೊಡನೆಯೇ, ಹಕ್ಕಿಗಳಂತೆಯೇ!
ಹಕ್ಕಿಗಳೋ, ಪಶ್ಚಿಮದಿ ಕೆಂಪಿನೊಳಗೆ ಲೀನ.
ನಾನು ಮಾತ್ರ,
ಬೈಕಿನಲ್ಲಿ ಸೂರ‍್ಯನ ಸೇರುವ ಹಂಬಲ!

ಮುಳುಗುವ ಸೂರ‍್ಯನ ದಿಕ್ಕಿನದೆಷ್ಟು ಸೆಳೆತ!!
ನೈಸ್ ರೋಡಿನ ತುಟ್ಟ ತುದಿಯಲ್ಲಿ ಮುಳುಗಿಯೇ ಬಿಟ್ಟ ಸೂರ‍್ಯ.
ತಿರುವು ಬಂತು.
ಅಯ್ಯೋ, ಸೂರ‍್ಯನ ದಿಕ್ಕು ಇನ್ನಿಲ್ಲ!

ಎಲ್ಲಿ ಹೋಗುವನು?
ಇಂದು ಪಶ್ವಿಮದ ಸೆಳೆತ.
ನಾಳೆ ಅವನು ಹುಟ್ಟುವ ದಿಕ್ಕೇ ಆಸರೆ.
ಕುವೆಂಪು ನಗರದ ಫ್ಲೈ ಓವರಿನ ಮೇಲೆ ಹಾರುವಾಗ
ಶುಭೋದಯ ಹೇಳುವನು.
ಬೆಳಕ ನೀಡುವನು!

ಸ್ವಾತಂತ್ರ್ಯ ದಿನದ ಶುಭಾಶಯಗಳು.

-ಅ
13.08.2010
3.45PM

5 comments:

  1. benglur traffic mele kavana bardu aadhunika kavi anskondidira. shubhashayagaLu. :D

    ReplyDelete
  2. he he he .... ontharaa ide :-)

    ReplyDelete
  3. [ಗೌರೀ] ಹೆ ಹ್ಹೆ, ಮುಂದಿನ ಕವನ ಓದಿ ಹಾಗಾದ್ರೆ!

    [ಲಕುಮಿ] ಆಧುನಿಕತೆ ನೋಡಿ!

    [ವಿಜಯಾ] ಹೌದೇ? ಏನ್ ಮಾಡೋಕ್ ಆಗುತ್ತೆ!

    ReplyDelete
  4. you doing a good job.keep it up.

    ReplyDelete