Wednesday, August 25, 2010

ಮಲ್ಲೇಶ್ವರಮ್‍ನಲ್ಲಿ ಒಂದು ಘಟನೆ

"ಕೈ ಹಿಡಿದು ನಡೆಸೆನ್ನನು"
ಎಂದೊಬ್ಬಳಜ್ಜಿಯು
ಕೇಳಿದಳು ನನ್ನನ್ನು
ನಡೆಸಿದೆನು ಕೈ ಹಿಡಿದು ನಾನು.

ಮಲ್ಲೇಶನೂರಲ್ಲಿ,
ವಾಹನಗಳೆದುರಲ್ಲಿ,
ಕಾಲಿಡಲು ಸ್ಥಳವಿರದ ರಸ್ತೆಯಲ್ಲಿ,
ಬದಿಬದಿಯ ದಾಟುತಲೆ
ಮುಂದೊಮ್ಮೆ ಹಿಂದೊಮ್ಮೆ
ಕಂಗಾಲು ಅವ್ಯವಸ್ಥೆಯಲ್ಲಿ.
ಹಿರಿಯಜ್ಜಿ ಮುದಿಯವಸ್ಥೆಯಲ್ಲಿ.

"ಕೈ ಹಿಡಿದು ನಡೆಸೆನ್ನ"ನೆಂದಳಾ ಅಜ್ಜಿಯು
ಕೈ ಹಿಡಿದು ನಡೆಸಿದೆನು ನಾನು.

ನನ್ನ ಕೈ ಹಿಡಿಯುತ್ತ
ನಡಗುತ್ತ, ಗೊಣಗುತ್ತ
ಹೆಜ್ಜೆ ಹಾಕಿದಳವಳು ಒಂದೊಂದರಂತೆ.
ಗೂಡು ಸೇರಿದ ಹಕ್ಕಿ
ಹಾಡಿ ನಲಿಯುವ ತೆರದಿ
"ನೀನು ಸುಖದಲಿ ಬಾಳು,
ಓ ಪುಟ್ಟ ಕಂದ"
ಎಂದವಳ ದನಿಯಲ್ಲಿ ಇತ್ತು ಆನಂದ.

"ಕೈ ಹಿಡಿದು ನಡೆಸಿದೆನು"
ಎಂದು ನಾ ಹಿಗ್ಗುತಿರೆ
ನುಡಿಯುತ್ತಲಿಹರಾರು ಇದಕೆ ಮಿಡಿದು?
ಹಣ್ಣಜ್ಜಿ ಹಿರಿಯಜ್ಜಿ
ಹರಸಿರಲು ನನ್ನನ್ನು
ನಡೆಸುತ್ತಲಿಹರಾರು ಯಾರ ಕೈ ಹಿಡಿದು?

-ಅ
25.08.2010
12PM

5 comments:

  1. ನೆಡದ ಘಟನೆಯನ್ನು ಕವನದ ಮೂಲಕ ಒಳ್ಳೆಯ ರೀತಿಯಿಂದ ಹೇಳಿದ್ದಿರಿ..
    ನಿಮ್ಮವ,
    ರಾಘು.

    ReplyDelete
  2. :-) bravo brother ... kavana tumba chennagide :-) Loved it!!!!

    ReplyDelete
  3. namgella idu soooper oLLe feeling koDutte.. nice nice ansutte..

    aadre nimgu and SP sir gu heg ansbOdu andre .. .. :-D ... nimdu matte aa ajji orbits cross aagirutte & hOd janmadalli neevu muduka aagirvaaga avru full jingchack huDgi aagi nim kai hiDdu kallasipaaLya road cross maaDsirtaare... ;-)

    ReplyDelete
  4. [ಡೈನಮಿಕ್] ಓಹೋ! ಆದ್ರೆ ಈ ಜನ್ಮದಲ್ಲಿ ನಾನೇನೂ "ಜಿಂಗ್ ಚ್ಯಾಕ್" ಆಗಿಲ್ಲ ಬಿಡು! ಆ ಅಜ್ಜೀನೇ ಜಿಂಗ್ ಚ್ಯಾಕ್ ಆಗಿದ್ದು. ಬಹುಶಃ ಅವರು ಇನ್ನೂ ಆ ಹೋದ್ ಜನ್ಮದಲ್ಲೇ ಇದಾರೇನೊ.

    [ಅನಾನಿಮಸ್] ??

    [ವಿಜಯಾ] ಥ್ಯಾಂಕ್ಯೂ!

    [ರಾಘು] ಸುಮ್ನೆ ಹೀಗೇರಿ! ಧನ್ಯವಾದಗಳು.. :-)

    ReplyDelete