Thursday, November 18, 2010

ಸತ್

ಅಪರಿಚಿತ ಹಿರಿಯರೊಬ್ಬರ ಕಾಲು
ಅಕಸ್ಮಾತ್ ತಾಕಿತು ಬಸ್ಸಲ್ಲಿ.
ಕಣ್ಗೊತ್ತಿಕೊಂಡೆವು ಇಬ್ಬರೂ, ಕಾಲ್ಮುಟ್ಟಿ.
ಪಾಪ ಪರಿಹಾರವಾಯಿತು.

ಬಲಗೈಯಲ್ಲಿ ಪೆನ್ಸಿಲ್ ಹಿಡಿದಿದ್ದ
ಒಂದನೇ ತರಗತಿಯ ಮಗುವೊಂದು
correction-ಗೆಂದು
ಪುಸ್ತಕವನ್ನು ಎಡಗೈಯಲ್ಲಿ ಕೊಡುವಾಗ,
ಬಲಗೈಯ ಬೆರಳೊಂದು ಸೋಕಿತ್ತು ಪುಸ್ತಕಕ್ಕೆ.
ಪುಸ್ತಕವು ಸುರಕ್ಷಿತವಾಯಿತು.

ಮೂರು ರಸ್ತೆ ಸೇರುವೆಡೆ ಬಿದ್ದಿದ್ದ
ಮೂರು ಮೆಣಸಿನಕಾಯಿ ಮತ್ತೊಂದು ನಿಂಬೆ ಹಣ್ಣನ್ನು
ಒದೆಯುವುದರಲ್ಲಿದ್ದೆ.
ಎಚ್ಚರದಿ ನೋಡಿ ದಾಟಿಬಿಟ್ಟೆ.
ಬಡಜೀವ ಬದುಕಿಕೊಂಡಿತು.

ಅತ್ತೆಮನೆಯ ಮೊದಲ ಹಬ್ಬದ ಊಟ ಮುಗಿದಿತ್ತು.
ತನ್ನೆಲೆಯ ತುದಿಯಲ್ಲಿ ಉಳಿದಿದ್ದ ಉಪ್ಪನ್ನು
ನೀರಲ್ಲಿ ಕರಗಿಸಿಬಿಟ್ಟಳು ನನ್ನತ್ತೆಯ ಮಗಳು.
ಋಣಮುಕ್ತಳಾದಳು.

-ಅ
18.11.2010
4.40PM

7 comments:

  1. 2nd one artha aaglilla...:(

    ReplyDelete
  2. hello frnd 2nd 1 nangu artha agilla. swalpa bidsi heltira.....

    ReplyDelete
  3. [ಲಕುಮಿ] ನಿಂಗೆ ಈಗೀಗ ಸ್ವಲ್ಪ ಬುದ್ಧಿ ಬಂದಿದೆ. ಇನ್ನೂ ಬರಬೇಕು.

    [ಪವಮಾನ] :-)

    [ವಿಕಾಸ] ಓಹೋ, ಅರ್ಥ ಆಯಿತು ಏನು ಅಂತ. ಮುಂದಿನ ಕಮೆಂಟು ಓದಿಕೊಳ್ಳಿ.

    [ಪವಮಾನ] ನೀನು ನೆಕ್ಸ್ಟ್ ಟೈಮ್ ಇಂದ "ರೀಡ್ ಓನ್ಲಿ" ಕಮೆಂಟ್ ಹಾಕಯ್ಯ. ಕಂಟ್ರೋಲ್ ಸಿ, ಕಂಟ್ರೋಲ್ ವಿ ಬಳಕೆ ಮಾಡೋರು ಜಾಸ್ತಿ ಆಗೋಗಿದಾರೆ ಶ್ರೀಧರನ ಥರ.

    [ಪುಷ್ಪಾ ಮತ್ತು ಅಂಜಲಿ] ಅಲ್ಲಾ, ಇದರಲ್ಲಿ ಅರ್ಥ ಆಗದೇ ಇರುವುದು ಏನಿದೆ ಅಂತೀನಿ. "ಅಂದ್ಕೊ" ಅನ್ಬೇಡಿ.

    ಸೆಕೆಂಡ್ ಒನ್: ಒಬ್ಬ ಮಗು. ಕ್ಲಾಸಲ್ಲಿ ಪುಸ್ತಕವನ್ನು ಕರೆಕ್ಷನ್‍ಗೆ ಕೊಡಬೇಕಿತ್ತು. ಬಲಗೈ ಬಿಡುವಾಗಿರಲಿಲ್ಲ. ಹಾಗಾಗಿ ಎಡಗೈಯಲ್ಲೇ ಕೊಡಬೇಕಲ್ಲ ಅಂತ ಬಲಗೈಯ ಒಂದು ಬೆರಳನ್ನು ಸೋಕಿಸಿ, ಎಡಗೈಯಲ್ಲೇ ಕೊಟ್ಟಳು. ಬಲಗೈಯ ಒಂದು ಭಾಗ ತಗುಲಿದರೂ ಆ ಪುಸ್ತಕವು ಬಲಗೈಯಲ್ಲೇ ಕೊಟ್ಟಂತೆ ಎಂಬ ನಂಬಿಕೆ ಕೆಲವರಿಗೆ ಇರುತ್ತೆ.

    ReplyDelete