Sunday, February 19, 2012

ನಿರೀಕ್ಷೆ

ಇಂದೆಲ್ಲೋ
ಇರುವೆನು ನಾನು
ಯಾವುದೊ ಬೆಟ್ಟದ ಮೇಲೆ
ತೆರೆದಿರುವ
ಕಣ್ಣಲಿ ನೀನು
ನೋಡದೆ ಹೋದೆಯಾ ಗೆಳತಿ?
ಹಾದಿಯೊಳೇ
ದೊರಕಿದ ಸುಮವ
ಹೆಣೆಯುತಲಿರೆ ಹೊಸ ಮಾಲೆ,
ನಂದಿಸದೇ
ಉರಿಸೆಯಾ ನೀನು
ಬೆಳಗಿಸೆ ಬದುಕಿನ ಪ್ರಣತಿ.

ಆ ಮರಗಳ
ನೆಳಲಿಲ್ಲಿಲ್ಲ
ಈ ಗಿರಿಶಿಖರದ ಮೇಲೆ.
ಪಾತಾಳವೆ
ಕಾಣುತಲಿಹುದು
ಬೆಟ್ಟದ ಈ ಬದಿಯಲ್ಲಿ.
ಆ ಗಾಳಿಯ
ಸುಳಿವಿಲ್ಲವೆ ಇಲ್ಲ,
ನೀನಾತುಮವನೆ ಹೋಲೆ,
ಮುಳುಗಿಸುವೆಯೊ
ನೀ ತೇಲಿಸಿ ನಗುವೆಯೊ
ಬಾಳಿನ ತಿಳಿನದಿಯಲ್ಲಿ?


-ಅ
19.02.2012
12AM