Saturday, March 10, 2012

ನೀನು

ನಿಲ್ಲದೆ ಓಡುತಲಿರುವ 
ಸಮಯದ ಗುರಿಯೇನು? 
ತನ್ನೆಡೆ ಸೆಳೆಯುತಲಿರುವ 
ಬಗೆಯಿದು ಸರಿಯೇನು?


ಮೇರೆಯ ಮೀರುತಲಿರುವ 
ಮೋಹದ ಗುಟ್ಟೇನು?
ದಾರಿಯ ಕೊನೆಯಲಿ ಕಂಡ 
ನೇಹದ ಹುಟ್ಟೇನು?


ಇರುಳಲಿ ಬೆಳಕನು ತೋರಿ 
ಹಗಲಲಿ ಮರೆಯಾಗಿ 
ಹೊರಟಿಹೆಯೆಲ್ಲಿಯ ದಾರಿ, 
ಇನ್ನಾವಾಸರೆಯಾಗಿ?


ಕಾಯುವುದೊಂದೇ ಏನು 
ಉಳಿದಿರುವುದು ಇನ್ನು? 
ಅನಂತ ಸಮಯವೆ ನೀನು 
ಕ್ಷಣವಲ್ಲವೆ ನಾನು! 


-ಅ
09.03.2012
11.45PM

3 comments:

  1. [ವಿಜಯಾ] ಹೆ ಹ್ಹೆ, ಕಾಗುಣಿತ ಸರಿಯಾಗಿ ಕಲಿತಿರಲಿಲ್ಲ ನೋಡು, ಪ್ರೈಮರಿ ಕ್ಲಾಸಲ್ಲಿ!

    [ಕಣಾದ ರಾಘವ] ಥ್ಯಾಂಕ್ಯೂ - ಕೊನೆಯ ಸಾಲು ಸೂಪರ್ ಆಗಿ ಯಾಕೆ ಕಾಣುತ್ತೆ ಅಂದ್ರೆ - ಸಧ್ಯ ಮುಗೀತಲ್ಲ ಅನ್ನೋ ಭಾವನೆ ಕೊಡುತ್ತೆ! :-p

    ReplyDelete