Thursday, March 29, 2012

ಜೋಗುಳ

ಅಲ್ಲಲ್ಲಿ ಮಿನುಗುತಿಹ 
ನೂರಾರು ತಾರೆಗಳು 
ಹಾದಿ ತೋರಲಿ ನಿನಗೆ 
                              ಹೊಸತು ಜಗಕೆ. 
ಹೊಸತೇನು ನಿನಗಲ್ಲಿ? 
ಬಯಸಿದ್ದು ಎದುರಲ್ಲಿ!
ಕನಸ ಸವಿಯಲು ನೀನು
                             ಹಾರು ನಭಕೆ. 

ನಿನ್ನೆಲ್ಲ ದಣಿವನ್ನು 
ತಂಗಾಳಿ ನುಂಗುತಲೆ 
ಹಿತದಿ ಸ್ಪರ್ಶಿಸುತಿರಲಿ 
                            ಮೈಯನೆಲ್ಲ. 
ದಣಿವಾರಿದಾ ದೇಹ -
ಕಿನ್ನೇನು ಇರೆ ದಾಹ
ಮಿತದಿ ತಣಿಸುತಲಿರಲಿ
                             ಮನವನೆಲ್ಲ. 

ಬಾನು ತನ್ನದೆ ಎಂದು
ನಗುತ, ನಗಿಸುತಲಿರುವ 
ಚಂದ್ರ ಬೆಳಗಲಿ ನಿನ್ನ 
                             ಬದುಕನೆಲ್ಲ. 
ನಿದಿರೆ ಲೋಕದಿ ನೀನು 
ಬಾನ ಚಂದಿರನಂತೆ 
ಸುಖದಿ ಮಲಗಿರು ನನಗೆ 
                              ನೀನೆ ಎಲ್ಲ! 

-ಅ
28.03.2012
11.45PM 

8 comments:

  1. ಬಾನು ತನ್ನದೆ ಎಂದು
    ನಗುತ, ನಗಿಸುತಲಿರುವ
    ಚಂದ್ರ ಬೆಳಗಲಿ ನಿನ್ನ ಬದುಕನೆಲ್ಲ.
    ಆಹಾ!
    ತಾಯ್ತನಕ್ಕೆ ಸಡ್ಡು ಹೊದೆಯುವಂತಿದೆ ನಿಮ್ಮೊಳಗಿನ ತಂದೆಂಬ ತಂದೆಯ ಭಾವ!
    ಸೊಗಸಾದ ಪದ್ಯ.

    ReplyDelete
  2. ಸಧ್ಯದಲ್ಲೇ ಯಾವುದಾದರೂ ಸಿನಿಮಾಗೆ ಜೋಗುಳ ಗೀತೆಯಾಗಿ ಉಪ್ಯೋಗಿಸ್ಕೋಬೋದು ಬಿಡಿ...ಲೆವೆಲ್ಲಾಗಿದೆ

    ReplyDelete
  3. ee shekheloo tangaali antella bareeteeyalla!!! good :D

    ReplyDelete
  4. [ವಿಜಯಾ] ರಾತ್ರಿ ಹೊತ್ತು actually ತಂಗಾಳಿ ಬೀಸುತ್ತೆ - ಮನೆ ಒಳಗೆ ಇದ್ದರೆ ಫ್ಯಾನ್ ಗಾಳಿ ಬೀಸುತ್ತೆ - ಅದೂ ತಂಗಾಳಿಯೇ! :-p

    [ಸುಶೀಲ್] ಪಾಪ, ಸುಮ್ನಿರ್ರೀ, ಸಿನಿಮಾದೋರಿಗೆ ಇದನ್ನೆಲ್ಲಾ ಸಹಿಸಿಕೊಳ್ಳುವ ಪಾಡು ಯಾಕೆ! ನಿಮ್ಗೇನೋ ವಿಧಿ ಇಲ್ಲ - ನಾನು ಪೀಡಿಸುತ್ತೇನೆ! :-D

    [ಸುಶ್ರುತ] :-)

    [ಕಣಾದ] ಧನ್ಯವಾದಗಳು ಡಾಕ್ಟ್ರೇ.. :-)

    ReplyDelete
  5. adubhuta kaNayya :-) oLLe raagavaagi haaDOdnuu abhyaasa maaDkonDbiDu..
    sikkapaTTe super aagide.

    ReplyDelete
  6. [ಶ್ರೀಕಾಂತ] ಥ್ಯಾಂಕ್ಯೂ ಕಣಪ್ಪ.

    [ಅನಾನಿಮಸ್] ಎಲೈ ಅನಾನಿಮಸ್ ವೇಷಧಾರಿಯಾದ ಶ್ರೀನಿವಾಸನೇ, ರಾಗವಾಗಿ ಹಾಡುವ ಅಭ್ಯಾಸ ಮಾಡಿಕೊಳ್ಳುವ ಮುನ್ನ ಸಂಗೀತ ಸಂಯೋಜನೆಯ ಅಭ್ಯಾಸದಲ್ಲಿ ತೊಡಗುವ ಸಾಮರ್ಥ್ಯವನ್ನು ಹೊಂದಿರುವೆನೋ ಇಲ್ಲವೋ ಎಂಬ ಸಂದೇಹದ ಮಡುವಿನಲ್ಲಿ ಮುಳುಗಿದ್ದೇನೆ. ಆದರೂ ನಿನ್ನ ಈ ಕಮೆಂಟಿಗೆ ನಾನು ಧನ್ಯವಾದಗಳನ್ನು ಯಥೇಚ್ಛವಾಗಿ ನಿನಗೆ ಅರ್ಪಿಸುತ್ತೇನೆ.

    ReplyDelete