Monday, October 22, 2012

ಬರೆಯಲು ಆಗುವುದೇ?

ಅನೇಕ ವಿಷಯಗಳಿದ್ದವು ಬರೆದುಕೊಳ್ಳಲು – ಹಂಚಿಕೊಳ್ಳಲು. ಒಂದೂ ಆಗಿಲ್ಲ. ಮೊನ್ನೆ ಪ್ರಜಾವಾಣಿಯಲ್ಲಿ ಕ್ಷಿತಿಜದೆಡೆಗೆ ಬ್ಲಾಗಿನ ರಿವ್ಯೂ ಕೂಡ ಬರೆದಿದ್ದಾರೆ. ಅದನ್ನು ಓದಿದ ಮೇಲಂತೂ ಭಯವು ಹೆಚ್ಚೇ ಆಗಿದೆ. ಏಕೆಂದು ಇಲ್ಲಿ ಹೇಳುವ ಸಾಹಸ ಮಾಡಲಾರೆ.

ಅನೇಕ ವಿಷಯಗಳಿದ್ದವು ಎಂದೆನೆಲ್ಲಾ ಆಗಲೇ, ಅದರ ಪಟ್ಟಿಯನ್ನು ಸಹ ಮಾಡಿಕೊಂಡಿದ್ದೇನೆ. ನಾನು ಏನೇನು ಬರೆದುಕೊಳ್ಳಲಿಲ್ಲ, ಏನೇನು ಬರೆಯಬೇಕಾಗಿತ್ತು ಎಂದು ನನಗನ್ನಿಸಿದ್ದಷ್ಟನ್ನೂ! ಆ ಪಟ್ಟಿಯನ್ನು ನೋಡಿ ನೋಡಿ ಮತ್ತೆ ಮತ್ತೆ ಗಾಬರಿಗೊಳ್ಳುವುದು ಉಚಿತವಲ್ಲವೆಂದು, ಇದೇ ನೆಪವೆಂದು ಇದನ್ನು ಪೋಸ್ಟಿಸುತ್ತಿದ್ದೇನೆ.

ಸೊಗಸಾದ ಪುಸ್ತಕಗಳನ್ನೋದಿದೆ – ಮೆಲೂಹಾ, ನಾಗಾಸ್, ಮಹಾಸಂಪರ್ಕ, ಹೋರಾಟದ ಹಾದಿ, ಈಟ್ಸ್ ಶೂಟ್ಸ್ ಎಂಡ್ ಲೀವ್ಸ್, ದಿ ಲಾಸ್ಟ್ ಲೆಕ್ಚರ್, ದಿ ಕೃಷ್ಣ ಕೀ, ವೇಯ್ಟಿಂಗ್ ಫಾರ್ ದಿ ಮಹಾತ್ಮಾ, ಯುಗಾಂತ, ಶ್ರೀ ಕೃಷ್ಣಾವತಾರದ ಕೊನೆಯ ದಿನಗಳು, ದೂರ ಸರಿದರು – ಯಾವುದರ ಬಗ್ಗೆಯೂ ಬರೆಯಲಿಲ್ಲ. ಓದುವಾಗ ಅನ್ನಿಸುತ್ತಿತ್ತು ಬರೆಯಬೇಕೆಂದು.

ಜ್ಯೋತ್ಸ್ನಾ ಹುಟ್ಟಿದ್ದು, ಜಯಂತಿ ಮೇಡಂ ನಿವೃತ್ತರಾಗಿದ್ದು, ರಾಜೇಶ್ ಖನ್ನಾ ನಿಧನರಾಗಿದ್ದು, ರಾಹುಲ್ ದ್ರಾವಿಡ್‍ ಕ್ರಿಕೆಟ್ ಆಡಲು ವಿದಾಯ ಹೇಳಿದ್ದಂದೇ ನಾನು ಕ್ರಿಕೆಟ್ ನೋಡಲು ವಿದಾಯ ಹೇಳಿದ್ದು, ಮೊದಲ ಬಾರಿಗೆ ನಾನೇ ಕಾರನ್ನೋಡಿಸಿಕೊಂಡು ದೂರ ಪ್ರಯಾಣ ಮಾಡಿದ್ದು, ಉನ್ನತ ಶಿಕ್ಷಣಕ್ಕೆ ಹೆಜ್ಜೆಯಿಟ್ಟಿದ್ದು, ವಿಂಡೋಸ್ 8 ಅನ್ನು ಬಳಸುತ್ತಿರುವುದು, ಕರೋಕೆಯೊಂದಿಗೆ ಹಾಡಿಕೊಳ್ಳುವ ಹೊಸ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಶಾಲೆಯ ಮಿತ್ರ - ಪೇಯಿಂಟರ್ ಪ್ರಕಾಶರ ಕವನಗಳನ್ನು ಸವಿಯುತ್ತಿರುವುದು, ಕುಂದನ್ನಿನ ಡಿಜ಼ೈನುಗಳನ್ನು ರೇಖಾ ಹೊಸ ಪ್ರವೃತ್ತಿಯಾಗಿಸಿಕೊಂಡಿದ್ದು, ಬಹಳ ದಿನಗಳಿಂದ ಚಾರಣ ಮಾಡದೇ ಇರುವುದು, ಎಲ್ಲಕ್ಕಿಂತಲೂ ಮಿಗಿಲಾಗಿ – ಬಸವನಗುಡಿಗೆ ಬೈ ಬೈ ಹೇಳಿ ಕೋಣನಕುಂಟೆಗೆ ಬಂದು ನೆಲೆಸಿದ್ದು – ಇವೆಲ್ಲಾ ಬರೆಯಬೇಕೆಂಬ ಪಟ್ಟಿಯಲ್ಲಿದೆ ಅಷ್ಟೇ.

ಜಯಂತಿ ಮೇಡಂ ಬಗ್ಗೆ ಶುರು ಮಾಡಿದವನು ಹಾಗೇ ಡ್ರಾಫ್ಟಿನಲ್ಲೇ ಉಳಿಸಿಕೊಂಡು ಕುಳಿತಿದ್ದೇನೆ. ಆಗೊಂದು ಈಗೊಂದು ಕವನವನ್ನು ಬರೆದಿದ್ದೇನೋ ನಿಜ. ಅದಕ್ಕೆ ಕಾರಣ – “ಕವನ ನೆನಪಿಗೆ ಸುಲಭ – ಮಂಕುತಿಮ್ಮ”. ಅಲ್ಲದೆ, ಕವನ ಬರೆಯಲೂ ಸುಲಭ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಬೇಕಾದರೂ ಬರೆಯಬಹುದು – ಮೊಬೈಲಿನಲ್ಲೇ. Of course, ಕೈ ಬರಹ ತಪ್ಪಿ ಹೋಗಿ ಯಾವ ಕಾಲವಾಯಿತೋ ಏನೋ. ನಾನು ಬರೆಯುವ ಕನ್ನಡ ಅಕ್ಷರಗಳು ತೆಲುಗಿನ ಅಕ್ಷರಗಳಂತಿರುತ್ತವೆಂದು ನನ್ನ ಮಿತ್ರ ಸುಬ್ರಮಣ್ಯ ಹಾಸ್ಯ ಮಾಡುತ್ತಿರುತ್ತಾರೆ.

ಇನ್ನು ಕ್ಷಿತಿಜದೆಡೆಗೆ-ಗೆ ಬಂದರೆ, ಈ ಇಡೀ ವರ್ಷದಲ್ಲಿ ಒಂದೇ ಒಂದು ಪೋಸ್ಟನ್ನು ಮಾಡಿರುವುದು! ಚಾರಣವು ಕಡಿಮೆಯಾದಂತೆ ಅಧ್ಯಯನವೂ ಕಡಿಮೆಯಾದಂತಿದೆ. ಅಧ್ಯಯನವು ಕಡಿಮೆಯಾದರೆ ಬರೆಯುವುದಾದರೂ ಏನನ್ನು? ಹೀಗೆ – ಏನೂ ಬರೆದಿಲ್ಲ ಎಂದು ಬರೆಯಬೇಕಷ್ಟೆ. ಆದರೂ, ಥ್ಯಾಂಕ್ಸ್ ಟು ಪ್ರಜಾವಾಣಿ, “ಓದಯ್ಯಾ ಇನ್ನೂ! ಹಾಗೇ ಇನ್ನೂ ಇಂಪ್ರೂವ್ ಮಾಡ್ಕೊ ಬರೆಯೋದನ್ನು” ಎಂದು ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿದ್ದಕ್ಕೆ.

ಇವತ್ತಿಗೆ ಮೂವತ್ತಾಯಿತು ನನಗೆ. ಇನ್ನೆಷ್ಟಿದೆಯೋ ಗೊತ್ತಿಲ್ಲ.

-ಅ

22.10.2012

6.15PM

6 comments:

 1. olleyadagali ... namma shubha harike nimmondige :)
  -amara

  ReplyDelete
 2. ಬರೀರಿ ಸಾರ್ ಬರೀರಿ.... ಆ ಪರಿಸರದ ಬ್ಲಾಗ್ ಮೊದಲು ಬರೀರಿ..

  ReplyDelete
 3. ಅಂತೂ ಏನಾದ್ರೊಂದನ್ನು ಬರೆದ್ರಲ್ಲಾ....!
  ಚಾರಣ ನಿಲ್ಲಿಸಿದ್ದು ಏಕೋ ಸರಿಯೆನಿಸಲಿಲ್ಲ.... ಅವರಿವರು ನಿಲ್ಸಿದ್ರೆ ಪರ್ವಾಗಿರಲಿಲ್ಲ... ಆದ್ರೆ ನೀವೇ...
  ಮತ್ತೆ ಶುರುವಾಗಲಿ ಬರೆಯುವುದು ಮತ್ತು ಅಲೆಯುವುದು.
  ಅಂದ ಹಾಗೆ ೩೦ರ ಕ್ಲಬ್ಬಿಗೆ ಸ್ವಾಗತ.

  ReplyDelete
 4. :) this is a new phase in life.. there is someone to take away all your attention and time, and she deserves it :)
  enjoy the parenthood.. happy birthday to you :)

  ReplyDelete
 5. [ಅಮರ] ಧನ್ಯವಾದಗಳು ಕಣಪ್ಪಾ!

  [ವಿ.ರಾ.ಹೆ] ಹ್ಞೂಂ, ಶುರು ಹಚ್ಕೊಂಡ್ ಇದ್ದೀನಿ ಸಾರ್!

  [ರಾಜೇಶ್ ನಾಯ್ಕ] ಹೆ ಹೆ, ಒಳ್ಳೇ ಕ್ಲಬ್ಬು! ಅಲೆಯೋದೂ ಶುರು ಹಚ್ಕೊತಾ ಇದ್ದೀನಿ!

  [ಅನಾನಿಮಸ್] ಥ್ಯಾಂಕ್ಯೂ! :)

  ReplyDelete
 6. krishna key - sogasaagilla kano :), eats, shoots and leaves nange helle illa!!!!!!!

  ReplyDelete