Saturday, November 3, 2012

ಜ್ಯೋತ್ಸ್ನಾಳ ಏಕಾಕ್ಷರ

ಏನಿರಬಹುದು ನಿನ್ನ ಮಾತಿನರ್ಥ?
ಒಂದಕ್ಷರದ ನಿನ್ನ ಮಾತಿಗೆ
ನೂರು ವ್ಯಾಖ್ಯಾನಗಳು -
ಅವರವರಿಗೆ ಅನ್ನಿಸಿದಂತೆ!

ಅಕಾರ, ಉಕಾರ, ಮಕಾರಗಳನ್ನು
ಸಾಕ್ಷಾತ್ಕರಿಸಿಕೊಂಡು
ನಕಾರವನ್ನು ದೂರಕ್ಕಿಟ್ಟಿರುವ
ನಿನ್ನ ಮಾತುಗಳ ಅರ್ಥ
ನಮಗೆಲ್ಲಿ ತಿಳಿಯಬೇಕು?

-ಅ
03.11.2012
10AM

3 comments:

  1. ಮಕ್ಕಳೆಲ್ಲಾ ಹಾಗೆ ತಾನೇ ಮಾತಾಡೋದು ಶುರುವಿನಲ್ಲಿ.

    ReplyDelete
  2. ಮುಂದೆ... ಮುಂದೆ...ತಿಳಿಯುತ್ತೆ :)

    ReplyDelete