Sunday, July 3, 2016

ನನ್ನ ಹಾಡು

ನನ್ನ ಹಾಡ ಕೇಳುವವನು
ಒಬ್ಬ - ನಾನೆ ತಾನೆ?
ನಿನ್ನ ಹಾಡಿದೆಂಬುದನ್ನು
ಅರಿಯದಾದೆ ನೀನೆ!

ಶ್ರುತಿಯು ಲಯವು ರಾಗವೆಲ್ಲ
ಪ್ರೀತಿ ಹರಿಸುತಿಹುದು.
ಅದಕೆ ಬೆನ್ನು ಮಾಡಿ ನಡೆಯೆ
ಭೀತಿ ಸ್ಫುರಿಸುತಿಹುದು.

ಕಿವಿಯ ಮುಚ್ಚಿ ಕುಳಿತಿದ್ದರೆ
ಹಾಡಿ ತೆರೆಸುತಿದ್ದೆ;
ಮನದ ಕದವೆ ಮುಚ್ಚಿದ್ದರೆ
ಹಾಡು - ಬರಿಯ ಸದ್ದೆ!

ಹಾಡಿಗಿಂತ ಮಧುರ ಕೇಳು
ಪ್ರೇಮ ಭಾವದರಿವು.
ಪ್ರೀತಿಯಿಲ್ಲವಾದರೆಲ್ಲಿ
ಹಾಡಿಗಿಹುದು ಇರವು?

- ಅ
28. 06. 2016
11.40 PM

No comments:

Post a Comment